‘ಕಬ್ಜ’ ಚಿತ್ರಕ್ಕೆ ಶ್ರೀಯಾ ಶರಣ್ ಕನ್ನಡದಲ್ಲಿ ಡಬ್ ಮಾಡ್ತಾರಾ? ನಟಿ ರಿವೀಲ್ ಮಾಡಿದ್ರು ಅಸಲಿ ವಿಚಾರ

ಟೀಸರ್​ಗೆ ಸಿಕ್ಕ ಪಾಸಿಟಿವ್ ಪ್ರತಿಕ್ರಿಯೆಯಿಂದ ಚಿತ್ರತಂಡ ಖುಷಿಯಾಗಿದೆ. ಈಗ ‘ಕಬ್ಜ’ ಚಿತ್ರದ ನಾಯಕಿ ಶ್ರೀಯಾ ಶರಣ್ ಅವರು ಟಿವಿ9 ಕನ್ನಡದ ಜತೆಗೆ ಮಾತನಾಡಿದ್ದಾರೆ.

TV9kannada Web Team

| Edited By: Rajesh Duggumane

Sep 19, 2022 | 4:13 PM

‘ಕಬ್ಜ’ ಸಿನಿಮಾದ (Kabza Movie) ಟೀಸರ್​ ನೋಡಿದ ಸಿನಿಪ್ರಿಯರು ಮೆಚ್ಚುಗೆ ಸೂಚಿಸಿದ್ದಾರೆ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುವ ಸೂಚನೆ ಟೀಸರ್​​ ಮೂಲಕ ಸಿಕ್ಕಿದೆ. ಟೀಸರ್​ಗೆ ಸಿಕ್ಕ ಪಾಸಿಟಿವ್ ಪ್ರತಿಕ್ರಿಯೆಯಿಂದ ಚಿತ್ರತಂಡ ಖುಷಿಯಾಗಿದೆ. ಈಗ ‘ಕಬ್ಜ’ ಚಿತ್ರದ ನಾಯಕಿ ಶ್ರೀಯಾ ಶರಣ್ (Shriya Saran) ಅವರು ಟಿವಿ9 ಕನ್ನಡದ ಜತೆಗೆ ಮಾತನಾಡಿದ್ದಾರೆ. ಈ ವೇಳೆ ಅವರು ಡಬ್ಬಿಂಗ್ ವಿಚಾರದ ಬಗ್ಗೆ ಮಾಹಿತಿ ನೀಡಿದ್ದಾರೆ. ‘ಇನ್ನೂ ಸಿನಿಮಾಗೆ ಡಬ್ಬಿಂಗ್ ಮಾಡಿಲ್ಲ. ಮಾಡಿದರೆ ಹಿಂದಿ ವರ್ಷನ್​​ಗೆ ಮಾತ್ರ ನಾನು ಡಬ್ ಮಾಡುತ್ತೇನೆ’ ಎಂದಿದ್ದಾರೆ ಶ್ರೀಯಾ.

Follow us on

Click on your DTH Provider to Add TV9 Kannada