ದೀಪಾಲಂಕಾರದಿಂದ ಮೈಸೂರು ಝಗಮಗ: ಪ್ರವಾಸೊಗರ ಕಣ್ಣನ ಸೆಳೆಯುತ್ತಿದೆ ಲೈಟಿಂಗ್ಸ್​​

Edited By:

Updated on: Oct 19, 2026 | 11:16 AM

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಿದ್ಯುತ್ ದೀಪಾಲಂಕಾರವು ನಗರವನ್ನು ಬೆಳಗಿದೆ. ಮೈಸೂರು-ಬೆಂಗಳೂರು ರಸ್ತೆಯ ರಥ, ಜಯಚಾಮರಾಜೇಂದ್ರ ವೃತ್ತದ ನವದುರ್ಗೆಯರು, ಅರಸರ ಭಾವಚಿತ್ರಗಳು ಹಾಗೂ ಸಂವಿಧಾನದ ಪೀಠಿಕೆ ಸೇರಿದಂತೆ ವಿಶಿಷ್ಟ ಕಲಾಕೃತಿಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು 642 ಸಿಬ್ಬಂದಿಗಳೊಂದಿಗೆ ಈ ಭವ್ಯ ದೀಪಾಲಂಕಾರವನ್ನು ನಿರ್ವಹಿಸುತ್ತಿದೆ.

ಮೈಸೂರು, ಅಕ್ಟೋಬರ್​​ 19: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರೆಯ ವೈಭವಕ್ಕೆ ವಿದ್ಯುತ್ ದೀಪಾಲಂಕಾರವು ಕಿರೀಟವಿಟ್ಟಂತಿದ್ದು, ಲಕ್ಷಾಂತರ ಪ್ರವಾಸಿಗರನ್ನು ಸೆಳೆದಿದೆ. ಮೈಸೂರು-ಬೆಂಗಳೂರು ರಸ್ತೆಯ ಎಲ್ಐಸಿ ವೃತ್ತದಲ್ಲಿರುವ ರಥ ಮತ್ತು ಕುದುರೆಗಳ ಚಿತ್ರಣ, ಜಯಚಾಮರಾಜೇಂದ್ರ ವೃತ್ತದಲ್ಲಿ ನವದುರ್ಗೆಯರ ದೀಪಾಲಂಕಾರ, ಗನ್ ಹೌಸ್ ವೃತ್ತದಲ್ಲಿ ರಾಜವಂಶಸ್ಥರಾದ ನಾಲ್ವಡಿ ಕೃಷ್ಣರಾಜ ಒಡೆಯರ್, ಜಯಚಾಮರಾಜೇಂದ್ರ ಒಡೆಯರ್ ಮತ್ತು ಶ್ರೀಕಂಠದತ್ತ ನರಸಿಂಹರಾಜ್ ಒಡೆಯರ್ ಅವರ ಭಾವಚಿತ್ರಗಳು ಪ್ರಮುಖ ಆಕರ್ಷಣೆಗಳಾಗಿವೆ. ಇದರ ಜೊತೆಗೆ, ಸಂವಿಧಾನದ ಪೀಠಿಕೆಯ ದೀಪಾಲಂಕಾರವು ಈ ಬಾರಿಯ ವಿಶೇಷತೆಯಾಗಿದೆ. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (CESC) ಈ ಭವ್ಯ ದೀಪಾಲಂಕಾರದ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿದೆ. ಒಟ್ಟು 642 ಸಿಬ್ಬಂದಿಗಳು ಮೂರು ತಂಡಗಳಲ್ಲಿ ಶ್ರಮಿಸುತ್ತಾ, ತಾಂತ್ರಿಕ ಮೇಲ್ವಿಚಾರಣೆಯೊಂದಿಗೆ ಈ ಬೆಳಕಿನ ಚಿತ್ತಾರವನ್ನು ಯಶಸ್ವಿಯಾಗಿ ಮೂಡಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us
ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More