ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಮೇಲೆ ಕುಳಿತು ವ್ಯಕ್ತಿಯ ಹುಚ್ಚಾಟ: ವಿಡಿಯೋ ನೋಡಿ
ಮೈಸೂರಿನ ಕೆ.ಆರ್. ವೃತ್ತದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆಯನ್ನು ಅಪಮಾನ ಮಾಡಿದ ಘಟನೆ ನಡೆದಿದೆ. ವ್ಯಕ್ತಿಯೋರ್ವ ಪ್ರತಿಮೆಯ ಮೇಲೆ ಕುಳಿತು ಅವಮಾನಕರವಾಗಿ ವರ್ತಿಸಿದ್ದಾನೆ. ಈ ಘಟನೆಯಿಂದಾಗಿ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿದೆ. ದೇವರಾಜ ಪೊಲೀಸ್ ಠಾಣೆಯ ಪೊಲೀಸರು ಆರೋಪಿಯನ್ನು ಹುಡುಕುತ್ತಿದ್ದಾರೆ ಮತ್ತು ಈ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದಾರೆ.
ಮೈಸೂರು, ಮೇ 31: ನಾಲ್ವಡಿ ಕೃಷ್ಣರಾಜ ಒಡೆಯರ್ (Krishna Raja Wadiyar) ಪ್ರತಿಮೆ ಮೇಲೆ ಕುಳಿತುಕೊಂಡಿದ್ದಲ್ಲದೇ ಅವರ ಬಾಯಿಗೆ ಬೀಡಿ ಇಟ್ಟು ವ್ಯಕ್ತಿಯೋರ್ವ ವಿಕೃತವಾಗಿ ವರ್ತಿಸಿರುವಂತಹ ಘಟನೆ ನಗರದ ಕೆ.ಆರ್.ವೃತ್ತದಲ್ಲಿ ನಡೆದಿದೆ. ವ್ಯಕ್ತಿಯ ಹುಚ್ಚಾಟ ಕಂಡು ಕೆಲ ಕಾಲ ಜನರು ಗಾಬರಿಯಾಗಿದ್ದರು. ಸದ್ಯ ಪರಾರಿಯಾಗಿರುವ ವ್ಯಕ್ತಿಯ ಪತ್ತೆಗೆ ದೇವರಾಜ ಠಾಣೆ ಪೊಲೀಸರು ಮುಂದಾಗಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.