ನನ್ನ ಬುದ್ಧಿವಂತಿಕೆ ಮತ್ತು ಹಿರಿತನ ಗಮನಿಸಿ ಸಚಿವ ಸ್ಥಾನ ನೀಡಲೇಬೇಕು: ಎನ್ ವೈ ಗೋಪಾಲಕೃಷ್ಣ, ಶಾಸಕ
ಶಾಸಕನಾದರೆ ಕೇವಲ ಸಣ್ಣಪುಟ್ಟ ಕೆಲಸಗಳನ್ನು ಮಾತ್ರ ಮಾಡಲು ಅವಕಾಶವಿರುತ್ತದೆ, ಆದರೆ ಮಂತ್ರಿ ಸ್ಥಾನ ಒದಗಿಸುವ ಅವಕಾಶಗಳು ಜಾಸ್ತಿಯಿರುತ್ತವೆ, ಸಚಿವ ಸಂಪುಟ ಪುನಾರಚನೆಗಾಗಿ ಕಾಯ್ತಾ ಇದ್ದೇನೆ, ಹೈಕಮಾಂಡ್ ನನ್ನ ಬುದ್ಧಿವಂತಿಕೆ ಮತ್ತು ಸೀನಿಯಾರಿಟಿ ಗಮನಕ್ಕೆ ತಂದುಕೊಂಡು ಸಚಿವ ಸ್ಥಾನ ನೀಡಿದರೆ ಸರಿ, ಇಲ್ಲದಿದ್ದರೆ ಶಾಸಕನಾಗಿ ಚಿಕ್ಕಪುಟ್ಟ ಕೆಲಸಗಳನ್ನು ಮಾಡಿಕೊಂಡಿರುತ್ತೇನೆ ಎಂದು ಗೋಪಾಲಕೃಷ್ಣ ಹೇಳಿದರು.
ಚಿತ್ರದುರ್ಗ, ಮೇ 31: ಮೊಳಕಾಲ್ಮೂರು ಕ್ಷೇತ್ರರ ಶಾಸಕ ಎನ್ ವೈ ಗೋಪಾಲಕೃಷ್ಣ ಅವರಿಗೂ ಮಂತ್ರಿಯಾಗುವಾಸೆ. ತಮ್ಮ ಕ್ಷೇತ್ರದ ನಾಯಕನಹಟ್ಟಿಯಲ್ಲಿ ಕಟ್ಟಡವೊಂದರ ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ಮಾತಾಡಿರುವ ಅವರು ಏಳು ಬಾರಿ ಶಾಸಕನಾಗಿರುವ ತನ್ನ ಹಿರಿತನವನ್ನು ಗಮನಿಸಿ ಸಚಿವ ಸ್ಥಾನ ನೀಡಬೇಕೆಂದು ಅವರು ಹೇಳಿದರು. ನನ್ನ ಸಾಮರ್ಥ್ಯ, ಕ್ಷಮತೆ ಮತ್ತು ಯೋಗ್ಯತೆ ಹೈಕಮಾಂಡ್ಗೆ ಗೊತ್ತಿದೆ, ನನ್ನನ್ನು ಆಯ್ಕೆ ಮಾಡುವ ಜನ ಮಂತ್ರಿಯಾಗಿ ಕೆಲಸ ಮಾಡುವುದನ್ನು ನೋಡಲು ಉತ್ಸುಕರಾಗಿದ್ದಾರೆ, ಮೂರನೇ ಸಲ ಶಾಸಕನಾಗಿ ಆಯ್ಕೆಯಾದರೆ ಮಂತ್ರಿ ಮಾಡುವ ಪರಿಪಾಠ ಮಾಯವಾಗಿರುವುದಕ್ಕೆ ಬೇಸರವಿದೆ ಎಂದು ಶಾಸಕ ಹೇಳಿದರು.
ಇದನ್ನೂ ಓದಿ: ಕುರ್ಚಿ ಕಚ್ಚಾಟ ಮಧ್ಯೆ ಮತ್ತೆ ಸಚಿವರ ದೆಹಲಿಯಾತ್ರೆ: ಕೆಲವರಿಗೆ ಕಾಂಗ್ರೆಸ್ ಹೈಕಮಾಂಡ್ನಿಂದ ಬುಲಾವ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Latest Videos
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್ಗಂಜ್ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು

