ದಸರಾದಲ್ಲಿ ಸಚಿವರನ್ನ ತಡೆದ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ಸಚಿವರಾದ ಶಿವರಾಜ್ ತಂಗಡಗಿ, ಬಸವಂತಪ್ಪ ಹಾಗೂ ನರೇಂದ್ರ ಸ್ವಾಮಿ ಅವರನ್ನು ಮೈಸೂರು ಎಸ್ಪಿ ರಿಷ್ಯಂತ್ ತಡೆ ಹಿಡಿದಿದ್ದು, ಇದೀಗ ಭಾರೀ ಪರ ಪರೋಧದ ಚರ್ಚೆಗೆ ಗ್ರಾಸವಾಗಿದ್ದು, ಈ ಸಂಬಂಧ ಸಿಎಂ ತನಿಖೆಗೆ ಆದೇಶಿಸಿದ್ದಾರೆ. ಇದರ ಬೆನ್ನಲ್ಲೇ ಸ್ವತಃ ಮೈಸೂರು ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಅವರು ಇಂದು (ಅಕ್ಟೋಬರ್ 23) ಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಬೆಂಗಳೂರಿನ ಸದಾಶಿವನಗರದ ಮನೆಯಲ್ಲಿ ಭೇಟಿಯಾಗಿ ದಸರಾ ನಂದಿ ಧ್ವಜ ಪೂಜೆ ವೇಳೆ ನಡೆದ ಘಟನೆ ಬಗ್ಗೆ ವಿವರಣೆ ನೀಡಿದ್ದಾರೆ. ಬಳಿಕ ಸರ್ಕಾರದ ಮುಖ್ಯಕಾರ್ಯದರ್ಶಿ ಸಿಎಸ್ ಶಾಲಿನಿ ಅವರನ್ನು ಭೇಟಿ ಮಾಡಿದ್ದು, ಘಟನೆ ಬಗ್ಗೆ ವಿವರಣೆ ನೀಡಿದ್ದಾರೆ. ಆದ್ರೆ, ಮುಂದೆ ಏನಾಗಲಿಎ ಎನ್ನುವುದೇ ಕುತೂಹಲ ಮೂಡಿಸಿದೆ.
ಮೈಸೂರು, (ಅಕ್ಟೋಬರ್ 23): ಮೈಸೂರು ದಸರಾ ವೇಳೆ ಮುಖ್ಯಮಂತ್ರಿಗಳ ಹಿಂದೆ ತೆರಳುತ್ತಿದ್ದ ಮೂವರು ಸಚಿವರನ್ನು ಎಸ್‌ಪಿ ರಿಷ್ಯಂತ್ ತಡೆದಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ. ಜಂಬೂಸವಾರಿಯಂದು ಬೆಳಗ್ಗೆ ನಂದಿ ಧ್ವಜ ಪೂಜೆಗೆಂದು ಸಿಎಂ ಹಿಂದೆ ಹೋಗುತ್ತಿದ್ದ ಸಚಿವರಾದ ಶಿವರಾಜ್ ತಂಗಡಗಿ, ಬಸವಂತಪ್ಪ ಹಾಗೂ ನರೇಂದ್ರ ಸ್ವಾಮಿ ಅವರನ್ನು ಮೈಸೂರು ಎಸ್ಪಿ ರಿಷ್ಯಂತ್ ತಡೆ ಹಿಡಿದಿದ್ದು, ಇದೀಗ ಭಾರೀ ಪರ ಪರೋಧದ ಚರ್ಚೆಗೆ ಗ್ರಾಸವಾಗಿದ್ದು, ಈ ಸಂಬಂಧ ಸಿಎಂ ತನಿಖೆಗೆ ಆದೇಶಿಸಿದ್ದಾರೆ. ಇದರ ಬೆನ್ನಲ್ಲೇ ಸ್ವತಃ ಮೈಸೂರು ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಅವರು ಇಂದು (ಅಕ್ಟೋಬರ್ 23) ಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಬೆಂಗಳೂರಿನ ಸದಾಶಿವನಗರದ ಮನೆಯಲ್ಲಿ ಭೇಟಿಯಾಗಿ ದಸರಾ ನಂದಿ ಧ್ವಜ ಪೂಜೆ ವೇಳೆ ನಡೆದ ಘಟನೆ ಬಗ್ಗೆ ವಿವರಣೆ ನೀಡಿದ್ದಾರೆ. ಬಳಿಕ ಸರ್ಕಾರದ ಮುಖ್ಯಕಾರ್ಯದರ್ಶಿ ಸಿಎಸ್ ಶಾಲಿನಿ ಅವರನ್ನು ಭೇಟಿ ಮಾಡಿದ್ದು, ಘಟನೆ ಬಗ್ಗೆ ವಿವರಣೆ ನೀಡಿದ್ದಾರೆ. ಆದ್ರೆ, ಮುಂದೆ ಏನಾಗಲಿಎ ಎನ್ನುವುದೇ ಕುತೂಹಲ ಮೂಡಿಸಿದೆ.
