ಗೋವಿಂದ ನಾಮ ಸ್ಮರಣೆಯ ಮಹತ್ವ ಹಾಗೂ ಫಲಗಳೇನು?

ಗೋವಿಂದ ನಾಮ ಸ್ಮರಣೆಯ ಮಹತ್ವ ಹಾಗೂ ಫಲಗಳೇನು?

ಆಯೇಷಾ ಬಾನು
|

Updated on:Aug 01, 2024 | 7:08 AM

ಗೋವಿಂದ ನಾಮ ಸ್ಮರಣೆ ಮಾಡುವುದರಿಂದ ಅನೇಕ ಲಾಭಗಳಿವೆ. ಕಣ್ಣು ಮುಚ್ಚಿ, ಕೈ ಜೋಡಿಸಿ, ಗೋವಿಂದನ ನೆನೆದರೆ ಸಾಕು ಕಷ್ಟಗಳು ದೂರವಾಗುತ್ತವೆ ಎನ್ನಲಾಗುತ್ತೆ. ಬನ್ನಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಗೋವಿಂದ ನಾಮ ಸ್ಮರಣೆ ಫಲದ ಬಗ್ಗೆ ಈ ವಿಡಿಯೋದಲ್ಲಿ ವಿವರಿಸಿದ್ದಾರೆ.

ಏಳುಮಲೆಗಳ ಮೇಲಿರುವ ತಿರುಪತಿ ಬಾಲಾಜಿ ದೇವಸ್ಥಾನ ಜಗತ್ತಿನ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಒಂದು. ಇಲ್ಲಿ ಪ್ರತಿ ದಿನ ಲಕ್ಷಾಂತರ ಮಂದಿ ಭೇಟಿ ಕೊಟ್ಟು ಬಾಲಾಜಿಯ ದರ್ಶನ ಮಾಡುತ್ತಾರೆ. ತಿರುಪತಿಯ ಕಾಣಲು ಬರುವ ಭಕ್ತರ ಬಾಯಲ್ಲಿ ಗೋವಿಂದ ನಾಮಸ್ಮರಣೆ ಸದಾ ಮೊಳಗುತ್ತಿರುತ್ತದೆ. ಗೋವಿಂದ ಗೋವಿಂದ ಎಂದು ನಾಮ ಸ್ಮರಣೆ ಮಾಡಿದ ಭಕ್ತರಿಗೆ ಮುಕ್ತಿ ಸಿಗಲಿ ಎಂದು ಹೇಳಲಾಗುತ್ತೆ.

ಕೈಲಾಸಕ್ಕೆ ಬಂದಂತ ವಿಷ್ಣುವಿಗೆ ಶಿವನೇ ಗೋವಿಂದ ಎಂದು ನಾಮಕರಣ ಮಾಡಿದರು ಎಂಬ ಕಥೆ ಇದೆ. ಹೀಗಾಗಿ ತಿರುಪತಿ ದರ್ಶನ ಮಾಡುವುದು ಅಥವಾ ಗೋವಿಂದನ ನಾಮ ಸ್ಮರಣೆಗೆ ಹೆಚ್ಚು ಶಕ್ತಿ ಇದೆ ಎನ್ನಲಾಗುತ್ತೆ. ಗೋವಿಂದ ಎಂಬ ನಾಮ ಹೇಳಿದರೆ ಸಾಕು ಸಕಷ್ಟಗಳು ಪರಿಹಾರವಾಗುತ್ತವೆ ಎನ್ನಲಾಗುತ್ತೆ. ಬನ್ನಿ ಈ ವಿಡಿಯೋದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಗೋವಿಂದ ನಾಮ ಸ್ಮರಣೆ ಫಲದ ಬಗ್ಗೆ ವಿವರಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Published on: Aug 01, 2024 07:07 AM