ಕಾಂಗ್ರೆಸ್​ ಹೈಕಮಾಂಡ್​ನಿಂದ ಬುಲಾವ್ ಇಲ್ಲದಿದ್ದರೂ ದೆಹಲಿಗೆ ಹೋಗುತ್ತಿರುವೆನೆಂದ ಎನ್​ಎ ಹ್ಯಾರಿಸ್

ಅರುಣ್​ ಕುಮಾರ್​ ಬೆಳ್ಳಿ Edited By:

Updated on: May 16, 2023 | 10:57 AM

ಇವತ್ತು ಸಾಯಂಕಾಲದವರೆಗೆ ಮುಖ್ಯಮಂತ್ರಿಯ ಘೋಷೆಣೆಯಾಗಲಿದೆ ಎಂದು ಹೇಳುವ ಹ್ಯಾರಿಸ್, ನಿಮ್ಮ ಒಲವು ಯಾರ ಕಡೆ ಅಂತ ಕೇಳಿದರೆ ಜಾಣತನ ಪ್ರದರ್ಶಿಸಿ ಕಾಂಗ್ರೆಸ್ ಅನ್ನುತ್ತಾರೆ.

ಬೆಂಗಳೂರು: ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿರುವ 135 ಅಭ್ಯರ್ಥಿಗಳ ಪೈಕಿ ಹಲವಾರು ಜನ ದೆಹಲಿಗೆ ಹೋಗುತ್ತಿದ್ದಾರೆ. ಯಾಕೆ ಅಂತ ಕೇಳಿದರೆ ಅವರಿಂದ ಸ್ಪಷ್ಟ ಉತ್ತರವಿಲ್ಲ. ದೆಹಲಿ ವಿಮಾಂನ ಹತ್ತುವ ಮೊದಲು ನಗರದ ಕೆಐಎ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಎನ್ ಎ ಹ್ಯಾರಿಸ್ (NA Haris), ಹೈಕಮಾಂಡ್ ಡಿಕೆ ಶಿವಕುಮಾರ್ (DK Shivakumar) ಮತ್ತು ಸಿದ್ದರಾಮಯ್ಯರನ್ನು (Siddaramaiah) ದೆಹಲಿಗೆ ಕರೆಸಿಕೊಂಡಿದೆ ನಾವೆಲ್ಲ ಸುಮ್ಮನೆ ಹೋಗುತ್ತಿದ್ದೇವೆ ಅನ್ನುತ್ತಾರೆ. ಇವತ್ತು ಸಾಯಂಕಾಲದವರೆಗೆ ಮುಖ್ಯಮಂತ್ರಿಯ ಘೋಷೆಣೆಯಾಗಲಿದೆ ಎಂದು ಹೇಳುವ ಅವರು ತಮ್ಮ ಒಲವು ಯಾರ ಕಡೆ ಅಂತ ಕೇಳಿದರೆ ಜಾಣತನ ಪ್ರದರ್ಶಿಸಿ ಕಾಂಗ್ರೆಸ್ ಅನ್ನುತ್ತಾರೆ. ಅಯ್ಕೆಯಾದವರ ಪೈಕಿ ಕೆಲವರು ಮಾತ್ರ ಮುಖ್ಯಮಂತ್ರಿ ಯಾರಾಗಬೇಕು ಅಂತ ಬಾಯಿಬಿಟ್ಟು ಹೇಳುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Published on: May 16, 2023 10:56 AM
Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.