ಚಿಕ್ಕಬಳ್ಳಾಪುರದಲ್ಲಿ ನಾಗಾರಾಧನೆ ವಿಶೇಷ ಪೂಜೆ: ಈಶಾ ಫೌಂಡೇಷನ್​ನತ್ತ ಭಕ್ತ ಸಾಗರ

| Updated By: ಆಯೇಷಾ ಬಾನು

Updated on: Aug 21, 2023 | 10:07 AM

ಬೆಂಗಳೂರಿನಿಂದ ಕೂಗಳತೆ ದೂರದಲ್ಲಿ 112 ಅಡಿಗಳ ಆಧಿಯೋಗಿ ವಿಗ್ರಹವಿರುವ ಪವಿತ್ರ ಸನ್ನಿಧಾನ ಈಶಾ ಫೌಂಡೇಷನ್​ನಲ್ಲಿ ನಾಗರ ಪಂಚಮಿ ಹಿನ್ನೆಲೆ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ. ನಾಗರ ಪಂಚಮಿ ಹಾಗೂ ನಾಗಾರಾಧನೆ ಹಾಗೂ ನಾಗಮಂಡಲ ಪ್ರಯುಕ್ತ ನಾಗಮಂಟಪದಲ್ಲಿ ವಿಶೇಷ ಪೂಜೆಗಳು ಆವಾಹನೆಗಳು ನಡೆಯಲಿವೆ. ಇದೇ ಸಂದಭದಲ್ಲಿ ಆರ್ಶಲೇಶ ಬಲಿ ಪೂಜೆಯೂ ನಡೆಯಲಿದೆ. ಆಗಸ್ಟ್ 21 ಸೋಮವಾರ ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 12ರವರೆಗೂ ಪೂಜೆಯಲ್ಲಿ ಭಾಗವಹಿಸಬಹುದು.

ಚಿಕ್ಕಬಳ್ಳಾಪುರ, ಆ.21: ಈಶಾ ಫೌಂಡೇಷನ್​ನಲ್ಲಿ ನಾಗರ ಪಂಚಮಿ ಹಾಗೂ ನಾಗಮಂಡಲ ಕಾಯರ್ಕ್ರಮ ಹಿನ್ನಲೆ ನಾಗಮಂಟಪ ದರ್ಶನ ಹಾಗೂ ಪೂಜೆಗೆ ಸಾವಿರಾರು ಭಕ್ತರ ದಂಡೇ ಹರಿದು ಬರುತ್ತಿದೆ. ಬೆಳಿಗ್ಗೆಯಿಂದಲೆ ಈಶಾ ಫೌಂಡೇಷನ್ ನತ್ತ ಭಕ್ತರು ಆಗಮಿಸುತ್ತಿದ್ದಾರೆ.

ನಾಗರ ಪಂಚಮಿ ಹಾಗೂ ನಾಗಾರಾಧನೆ ಹಾಗೂ ನಾಗಮಂಡಲ ಪ್ರಯುಕ್ತ ನಾಗಮಂಟಪದಲ್ಲಿ ವಿಶೇಷ ಪೂಜೆಗಳು ಆವಾಹನೆಗಳು ನಡೆಯಲಿವೆ. ಇದೇ ಸಂದಭದಲ್ಲಿ ಆರ್ಶಲೇಶ ಬಲಿ ಪೂಜೆಯೂ ನಡೆಯಲಿದೆ. ಆಗಸ್ಟ್ 21 ಸೋಮವಾರ ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 12ರವರೆಗೂ ಪೂಜೆಯಲ್ಲಿ ಭಾಗವಹಿಸಬಹುದು. ಸರ್ಪದೋಶ ಇರುವವರು, ಸರ್ಪಸುತ್ತು ಇರುವವರು ತಮ್ಮ ಕೋರಿಕೆಯನ್ನು ಪೂಜೆಯಲ್ಲಿ ಈಡೇರಿಸಿಕೊಳ್ಳಬಹುದು. ನಾಗಾರಾಧನೆ ಕಾರ್ಯಕ್ರಮದಲ್ಲಿ ಉಡುಪಿ ಮೂಲದ ನಾಗಪಾದ್ರಿಗಳು ಹಾಗೂ ನಾಗಮಂಡಲ ಪರಿಣಿತ ಪುರೋಹಿತರಿಬ್ಬರು ಆಗಮಿಸಲಿದ್ದಾರೆ. ಗಂಡು ಹಾಗೂ ಹೆಣ್ಣಿನ ನಾಗರ ವೇಶ ಧರಿಸಿ ನಾಗದೇವತೆಗಳನ್ನೇ ಧರೆಗಿಳಿಸಲಿದ್ದಾರೆ.

ಬೆಂಗಳೂರಿನಿಂದ 65 ಕಿ.ಮೀ.ದೂರದಲ್ಲಿರುವ ಈಶಾ ಫೌಂಡೇಷನ್​ಗೆ ಹೋಗಲು ಚಿಕ್ಕಬಳ್ಳಾಪುರ ತಲುಪಬೇಕು. ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44ರ ಮರಸನಹಳ್ಳಿ ಗ್ರಾಮದ ಬಳಿ ಎಡಕ್ಕೆ ತಿರುಗಿದರೆ ವಡ್ರೇಪಾಳ್ಯದ ಮೂಲಕ ಈಶಾ ಫೌಂಡೇಶನ್ ಸದ್ಗುರು ಸನ್ನಿಧಿ ತಲುಪಬಹುದು. ಇನ್ನೂ ಚಿಕ್ಕಬಳ್ಳಾಪುರ ನಗರದಿಂದ ಡಿಪೋ ರಸ್ತೆ, ಮುಸ್ಟೂರು, ಆವಲಗುರ್ಕಿ, ವಡ್ರೇಪಾಳ್ಯ ಮೂಲಕ ಈಶಾ ಫೌಂಡೇಷನ್ ತಲುಪಬಹುದು. ಇನ್ನೂ ಚಿಕ್ಕಬಳ್ಳಾಪುರ ನಗರದ ಎಂಜಿ ರಸ್ತೆ ಪ್ರಶಾಂತ ನಗರ, ಹನುಮಂತಪುರ ಕಡೆಯಿಂದಲೂ ಸದ್ಗುರು ಸನ್ನಿಧಿ ತಲುಪಬಹುದು. ಹಾಗೂ ಚಿಕ್ಕಬಳ್ಳಾಪುರದ ಎಂ.ಜಿ.ರಸ್ತೆಯಿಂದ ಅಂಕಣಗೊಂದಿ, ರಂಗಧಾಮ ಕೆರೆ, ಸೂಸೇ ಪಾಳ್ಯ ಮೂಲಕವೂ ಸದ್ಗುರು ಸನ್ನಿಧಿಗೆ ತಲುಪಬಹುದು. ಈ ಎಲ್ಲಾ ಮಾರ್ಗಗಳಿಂದಲೂ ಸದ್ಗುಗು ಸನ್ನಿಧಾನಕ್ಕೆ ತಲುಪಬಹುದು.

ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Follow us on