ಈ ಬಾರ್ಡರ್​ ದಾಟಿ ನಾನು ಬರಲ್ಲ, ನೀನು ಬರಬೇಡ, ಮಾತು ಮಾತಲ್ಲೇ ಇರಲಿ; ಎದುರಾದ ಹುಲಿ-ಕರಡಿ, ವಿಡಿಯೋ ವೈರಲ್​

Edited By:

Updated on: May 01, 2024 | 1:37 PM

ಮೈಸೂರು ಜಿಲ್ಲೆಯ ಹೆಚ್​ಡಿ ಕೋಟೆಯ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿಗೆ ಹೋಗಿದ್ದಾಗ ಪ್ರವಾಸಿಗರ ಕ್ಯಾಮರಾದಲ್ಲಿ ಅಪರೂಪದ ದೃಶ್ಯ ಸೆರೆಯಾಗಿದೆ. ಹುಲಿ ಮತ್ತು ಕರಡಿ ಪರಸ್ಪರ ಎದುರಾಗಿವೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಮೈಸೂರು, ಮೇ 01: ಮೈಸೂರು (Mysore) ಜಿಲ್ಲೆಯ ಹೆಚ್​ಡಿ ಕೋಟೆಯ (HD Kote) ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ (Nagarhole National Park) ಸಫಾರಿಗೆ ಹೋಗಿದ್ದಾಗ ಪ್ರವಾಸಿಗರ ಕ್ಯಾಮರಾದಲ್ಲಿ ಅಪರೂಪದ ದೃಶ್ಯ ಸೆರೆಯಾಗಿದೆ. ಅದು ಕೆರೆಯಲ್ಲಿ ನೀರು ಕುಡಿದು ಹುಲಿ ಗಾಂಭೀರ್ಯದಿಂದ ನಡೆದುಕೊಂಡು ಬರುತ್ತಿತ್ತು. ಹುಲಿಯ ಕಂಡ ಉಳಿದ ಪ್ರಾಣಿಗಳು ಬಿಲ ಸೇರಿವೆ. ಆದರೆ ಕರಡಿ ಮಾತ್ರ ಸುಮ್ಮನಿರದೆ ಹುಲಿ ಎದುರಿಗೆ ಹೋಗಿದೆ. ಕರಡಿಯನ್ನು ಕಂಡ ಹುಲಿ ಗುರಾಯಿಸಿದೆ. ಕರಡಿ ಕೂಡ ನಾನೇನು ಕಮ್ಮಿ ಇಲ್ಲ ಅಂತ ಹುಲಿಯನ್ನು ಗುರಾಯಿಸಿದೆ. ಆಗ ಎದುರಿಗಿನ ಕರಡಿ ಸ್ವಲ್ಪ ಜಿಗದಾಡಿದೆ, ಆಗ ಹುಲಿ ಒಂದು ಹೆಜ್ಜೆ ಮುಂದಿಟ್ಟಿದೆ. ಆಗ ಕರಡಿ ಸ್ವಲ್ಪ ಹಿಂದೆ ಸರೆದಿದೆ.

ಸದ್ಯ ಈ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರು ಸಾಧು ಕೋಕಿಲ ನಟನೆಯ ಡೈಲಾಗವೊಂದನ್ನು ಕಾಮೆಂಟ್​ ಮಾಡಿದ್ದಾರೆ. “ಈ ಬಾರ್ಡ್​​​ರ ದಾಟಿ ನಾನು ಬರಲ್ಲ, ನೀನು ಬರಬೇಡ, ಮಾತು ಮಾತಲ್ಲೇ ಇರಲಿ” ಎಂದಿದ್ದಾರೆ.