ರಮ್ಯಾ ಬದಲು ರಚಿತಾ ರಾಮ್: ಪ್ರೇಕ್ಷಕರು ಇದನ್ನು ಒಪ್ಪಿಕೊಳ್ತಾರಾ? ನಾಗಶೇಖರ್ ಹೇಳಿದ್ದಿಷ್ಟು

Updated on: Jul 19, 2024 | 10:21 PM

‘ಸಂಜು ವೆಡ್ಸ್​ ಗೀತಾ 2’ ಸಿನಿಮಾಗೆ ಈಗಾಗಲೇ 60 ದಿನಗಳ ಶೂಟಿಂಗ್​ ಮಾಡಲಾಗಿದೆ. ಕೊನೆಯ ಹಂತದ 12 ದಿನಗಳ ಶೂಟಿಂಗ್​ ನಡೆಯುತ್ತಿದೆ. ನಿರ್ದೇಶಕ ನಾಗಶೇಖರ್​ ಅವರು ಕ್ಲೈಮ್ಯಾಕ್ಸ್​ ದೃಶ್ಯದ ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದಾರೆ. ಚಿತ್ರೀಕರಣದ ಸೆಟ್​ನಲ್ಲಿ ಮಾತಿಗೆ ಸಿಕ್ಕ ಅವರು ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಶ್ರೀನಗರ ಕಿಟ್ಟಿ, ರಚಿತಾ ರಾಮ್​ ಮುಂತಾದವರು ನಟಿಸುತ್ತಿದ್ದಾರೆ.

ನಾಗಶೇಖರ್​ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಸಂಜು ವೆಡ್ಸ್​ ಗೀತಾ 2’ ಚಿತ್ರಕ್ಕೆ ಕ್ಲೈಮ್ಯಾಕ್ಸ್​ ಚಿತ್ರೀಕರಣ ಮಾಡಲಾಗುತ್ತಿದೆ. ‘ಸಂಜು ವೆಡ್ಸ್​ ಗೀತಾ’ ಸಿನಿಮಾದಲ್ಲಿ ಇದ್ದ ಮೂಡ್​ ಈಗ ಪಾರ್ಟ್​ 2ರಲ್ಲೂ ಮುಂದುವರಿಯಲಿದೆ ಎಂದು ನಾಗಶೇಖರ್​ ಹೇಳಿದ್ದಾರೆ. ಈ ಸಿನಿಮಾದಲ್ಲಿ ಹಾಡುಗಳು ತುಂಬ ಚೆನ್ನಾಗಿ ಮೂಡಿಬಂದಿವೆ ಎಂದು ಅವರು ಹೇಳಿದ್ದಾರೆ. ಒಂದು ಹಾಡು ಹಾಗೂ ಕ್ಲೈಮ್ಯಾಕ್ಸ್​ ಫೈಟ್​ ಚಿತ್ರೀಕರಣ ಬಾಕಿ ಇದೆ. 12 ದಿನಗಳಲ್ಲಿ ಆ ಚಿತ್ರೀಕರಣ ಮುಗಿಸಲು ಗುರಿ ಇಟ್ಟುಕೊಳ್ಳಲಾಗಿದೆ. ಶ್ರೀನಗರ ಕಿಟ್ಟಿ, ರಚಿತಾ ರಾಮ್​, ರಾಗಿಣಿ ದ್ವಿವೇದಿ ಸೇರಿದಂತೆ ಅನೇಕ ಕಲಾವಿದರು ಈ ಚಿತ್ರದಲ್ಲಿದ್ದಾರೆ. ‘ಸಂಜು ವೆಡ್ಸ್​ ಗೀತಾ’ ಸಿನಿಮಾದಲ್ಲಿ ಶ್ರೀನಗರ ಕಿಟ್ಟಿ ಮತ್ತು ರಮ್ಯಾ ನಟಿಸಿದ್ದರು. ಆದರೆ 2ನೇ ಪಾರ್ಟ್​ನಲ್ಲಿ ನಾಯಕಿಯಾಗಿ ರಮ್ಯಾ ಬದಲು ರಚಿತಾ ರಾಮ್​ ನಟಿಸಿದ್ದಾರೆ. ‘ರಚಿತಾ ರಾಮ್​ ಕೂಡ ಚೆನ್ನಾಗಿ ಅಭಿನಯಿಸಿದ್ದಾರೆ. ಈ ಪಾತ್ರದಲ್ಲಿ ರಚಿತಾ ಅವರನ್ನು ಪ್ರೇಕ್ಷಕರು ಖಂಡಿತಾ ಒಪ್ಪಿಕೊಳ್ಳುತ್ತಾರೆ’ ಎಂದು ನಾಗಶೇಖರ್​ ಭರವಸೆ ವ್ಯಕ್ತಪಡಿಸಿದ್ದಾರೆ. ಗಿಡ ನೆಡುವ ಮೂಲಕ ಸಿನಿಮಾದ ಶೂಟಿಂಗ್​ ಪೂರ್ಣಗೊಳಿಸಲು ಚಿತ್ರತಂಡ ನಿರ್ಧರಿಸಿದೆ. ‘ಗಿಡ ನೆಡುವುದು ನನಗೆ ಬಹಳ ಇಷ್ಟ. ಹಾಗಾಗಿ ಗಿಡ ನೆಡುವ ಮೂಲಕ ನಾನು ಶೂಟಿಂಗ್​ ಮುಗಿಸಲಿದ್ದೇನೆ’ ಎಂದು ನಾಗಶೇಖರ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More