‘ವಿಷ್ಣು-ಅಂಬಿ ಇಷ್ಟಪಡುತ್ತಿದ್ದ ಕಾರು ಇನ್ನೂ ನನ್ನ ಬಳಿ ಇದೆ’; ನಾಗತಿಹಳ್ಳಿ ಚಂದ್ರಶೇಖರ್
ಟಿವಿ9 ಕನ್ನಡದ ಜತೆಗೆ ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿದ್ದಾರೆ. ಈ ವೇಳೆ ಅವರು ಅನೇಕ ವಿಚಾರಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅದರಲ್ಲಿ ವಿಷ್ಣುವರ್ಧನ್ ಹಾಗೂ ಅಂಬರೀಶ್ ಇಷ್ಟಪಟ್ಟಿದ್ದ ಕಾರಿನ ಬಗ್ಗೆಯೂ ಹೇಳಿಕೊಂಡಿದ್ದಾರೆ.
‘ಸಾಹಸ ಸಿಂಹ’ ವಿಷ್ಣುವರ್ಧನ್, ಅಂಬರೀಶ್ ಜತೆ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ ಒಳ್ಳೆಯ ಬಾಂಧವ್ಯ ಇತ್ತು. ನಾಗತಿಹಳ್ಳಿ ಚಂದ್ರಶೇಖರ್ ಬಳಿ ಇದ್ದ ಕಾರೊಂದು ವಿಷ್ಣು ದಾದಾ ಹಾಗೂ ರೆಬೆಲ್ ಸ್ಟಾರ್ ಅಂಬಿಗೆ ತುಂಬಾನೇ ಇಷ್ಟವಾಗಿತ್ತು. ಈ ಕಾರು ಇಂದಿಗೂ ಅವರ ಬಳಿ ಇದೆ ಅನ್ನೋದು ವಿಶೇಷ.
ಟಿವಿ9 ಕನ್ನಡದ ಜತೆಗೆ ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿದ್ದಾರೆ. ಈ ವೇಳೆ ಅವರು ಅನೇಕ ವಿಚಾರಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅದರಲ್ಲಿ ವಿಷ್ಣುವರ್ಧನ್ ಹಾಗೂ ಅಂಬರೀಶ್ ಇಷ್ಟಪಟ್ಟಿದ್ದ ಕಾರಿನ ಬಗ್ಗೆಯೂ ಹೇಳಿಕೊಂಡಿದ್ದಾರೆ. ಅಲ್ಲದೆ, ಸಾಕಷ್ಟು ಮಂದಿ, ಈ ಕಾರನ್ನು ಏಕೆ ಮಾರಾಟ ಮಾಡಿಲ್ಲ ಎಂದು ಪ್ರಶ್ನೆ ಮಾಡಿದ್ದರಂತೆ. ಇಬ್ಬರು ಸ್ಟಾರ್ ನಟರಿಗೆ ಈ ಕಾರು ಇಷ್ಟವಾಗಿತ್ತು ಎಂದು ನಾಗತಿಹಳ್ಳಿ ಚಂದ್ರಶೇಖರ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
Loading...
Unable to load recommendations.
Follow Us
