ತಮಿಳು ಕನ್ನಡದ ತಾಯಿ ಭಾಷೆ ಅಲ್ಲ, ಸೋದರ ಭಾಷೆ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ

Updated on: May 28, 2025 | 8:09 PM

Kamal Haasan: ತಮಿಳಿನಿಂದಲೇ ಕನ್ನಡ ಜನಿಸಿದೆ ಎಂದು ಕಮಲ್ ಹಾಸನ್ ನೀಡಿರುವ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಈ ಬಗ್ಗೆ ಮಾತನಾಡಿದ್ದು, ಕಮಲ್ ಹಾಸನ್ ಅದ್ಭುತ ನಟರು ಆದರೆ ಅವರಿಗೆ ಭಾಷಾ ಜ್ಞಾನ ಇದ್ದಂತಿಲ್ಲ. ತಮಿಳು ಕನ್ನಡದ ತಾಯಿ ಭಾಷೆ ಅಲ್ಲ, ಸೋದರ ಭಾಷೆ. ಕಮಲ್ ಹಾಸನ್ ಆಡಿರುವುದು ತುಟಿ ಮೀರಿದ ಮಾತೋ ಉನ್ಮಾದದ ಮಾತೋ ಗೊತ್ತಿಲ್ಲ ಅದನ್ನ ಸರಿ ಪಡಿಸಿಕೊಳ್ಳಬೇಕಿದೆ ಎಂದಿದ್ದಾರೆ.

ತಮಿಳಿನಿಂದಲೇ ಕನ್ನಡ ಜನಿಸಿದೆ ಎಂದು ಕಮಲ್ ಹಾಸನ್ (Kamal Haasan) ನೀಡಿರುವ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಈ ಬಗ್ಗೆ ಮಾತನಾಡಿದ್ದು, ಕಮಲ್ ಹಾಸನ್ ಅದ್ಭುತ ನಟರು ಆದರೆ ಅವರಿಗೆ ಭಾಷಾ ಜ್ಞಾನ ಇದ್ದಂತಿಲ್ಲ. ತಮಿಳು ಕನ್ನಡದ ತಾಯಿ ಭಾಷೆ ಅಲ್ಲ, ಸೋದರ ಭಾಷೆ. ಕಮಲ್ ಹಾಸನ್ ಆಡಿರುವುದು ತುಟಿ ಮೀರಿದ ಮಾತೋ ಉನ್ಮಾದದ ಮಾತೋ ಗೊತ್ತಿಲ್ಲ ಅದನ್ನ ಸರಿ ಪಡಿಸಿಕೊಳ್ಳಬೇಕಿದೆ. 3 ಸಾವಿರ ವರ್ಷದ ಹಿಂದೆ ಗ್ರೀಕ್ ನಾಟಕದಲ್ಲಿ ಕನ್ನಡ ಇದೆ ಅಂತ ಹೇಳಲಾಗಿದೆ. ಅವ್ರು ಮಾತನಾಡಿರೋದು ನೋವಾಗಿದೆ’ ಎಂದಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ಅವರ ಮಾತಿನ ವಿಡಿಯೋ ಇಲ್ಲಿದೆ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ