ಕಟೀಲ್ ಒಬ್ಬ ವಿದೂಷಕ ಮತ್ತು ಅಪ್ರಬುದ್ಧ ರಾಜಕಾರಣಿ: ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ
ಕಳೆದ ಮೂರು ವರ್ಷಗಳಿಂದ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದ್ದರೂ ತಮ್ಮ ವಿರುದ್ಧ ಯಾಕೆ ತನಿಖೆ ಮಾಡಿಸಲಿಲ್ಲ ಎಂದು ಸಿದ್ದರಾಮಯ್ಯ ಕೇಳಿದರು.
ಬಾಗಲಕೋಟೆಯ ಹಿರೇಪಡಸಲಗಿ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah), ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ ಕಟೀಲ್ (Nalin Kumar Kateel) ಅವರನ್ನು ಒಬ್ಬ ವಿದೂಷಕ (buffoon) ಮತ್ತು ಅಪ್ರಬುದ್ಧ ರಾಜಕಾರಣಿ ಅಂತ ಹೇಳಿದರು. ಲೋಕಾಯುಕ್ತ ಸಂಸ್ಥೆಯನ್ನು ನಿಷ್ಕ್ರಿಯಗೊಳಿಸಿರದಿದ್ದರೆ, ಸಿದ್ದರಾಮಯ್ಯ ಜೈಲಿನಲ್ಲಿರುತ್ತಿದ್ದರು ಎಂದು ಕಟೀಲ್ ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಕಳೆದ ಮೂರು ವರ್ಷಗಳಿಂದ ಅವರ ಸರ್ಕಾರವೇ ಅಧಿಕಾರದಲ್ಲಿದ್ದರೂ ತಮ್ಮ ವಿರುದ್ಧ ಯಾಕೆ ತನಿಖೆ ಮಾಡಿಸಲಿಲ್ಲ ಎಂದು ಕೇಳಿದರು.