ಕೊನೆಗೂ ಸೆ. 7ರಿಂದ ಮತ್ತೇ ಸಂಚಾರ ಆರಂಭಿಸಲಿದೆ ನಮ್ಮ ಮೆಟ್ರೋ
[lazy-load-videos-and-sticky-control id=”FwahkoyonL4″] ಬೆಂಗಳೂರು: ಬೆಂಗಳೂರಿಗರಿಗೆ ಕೊನೆಗೂ ಸಿಕ್ಕಿದೆ ಸಿಹಿ ಸುದ್ದಿ. ಲಾಕ್‌ಡೌನ್‌ನಂತರ ಸಂಚಾರವನ್ನು ಸ್ಥಗೀತಗೊಳಿಸಿದ್ದ ನಮ್ಮ ಮೆಟ್ರೋ ಈಗ ಮತ್ತೇ ಪುನಾರಂಭಗೊಳ್ಳುತ್ತಿದೆ. ಹೌದು ನಮ್ಮ ಮೆಟ್ರೋ ಮತ್ತೇ ಸೆಪ್ಟೆಂಬರ್ 7ರಿಂದ ಸಂಚಾರ ಆರಂಭಿಸುತ್ತಿದೆ. ಮೊದಲ ನಾಲ್ಕು ದಿನ ಅಂದ್ರೆ ಸೆಪ್ಟೆಂಬರ್ 7ರಿಂದ 10ರವರೆಗೆ ನೇರಳೆ ಮಾರ್ಗದಲ್ಲಿ ಸಂಚಾರ ಆರಂಭವಾಗುತ್ತೆ. ಇದಾದ ನಂತರ ಸೆಪ್ಟೆಂಬರ್ 9 ಮತ್ತು 10ರಂದು ಹಸಿರು ಮಾರ್ಗದಲ್ಲಿ ಓಡಾಟ ಆರಂಭಿಸುತ್ತೆ. ಮೊದಲು ಬೆಳಗ್ಗೆ 8ರಿಂದ ಬೆಳಗ್ಗೆ 11 ಗಂಟೆವರೆಗೆ ಮತ್ತು ಸಂಜೆ 4.30ರಿಂದ ಸಂಜೆ […]

[lazy-load-videos-and-sticky-control id=”FwahkoyonL4″]
ಬೆಂಗಳೂರು: ಬೆಂಗಳೂರಿಗರಿಗೆ ಕೊನೆಗೂ ಸಿಕ್ಕಿದೆ ಸಿಹಿ ಸುದ್ದಿ. ಲಾಕ್‌ಡೌನ್‌ನಂತರ ಸಂಚಾರವನ್ನು ಸ್ಥಗೀತಗೊಳಿಸಿದ್ದ ನಮ್ಮ ಮೆಟ್ರೋ ಈಗ ಮತ್ತೇ ಪುನಾರಂಭಗೊಳ್ಳುತ್ತಿದೆ.
ಹೌದು ನಮ್ಮ ಮೆಟ್ರೋ ಮತ್ತೇ ಸೆಪ್ಟೆಂಬರ್ 7ರಿಂದ ಸಂಚಾರ ಆರಂಭಿಸುತ್ತಿದೆ. ಮೊದಲ ನಾಲ್ಕು ದಿನ ಅಂದ್ರೆ ಸೆಪ್ಟೆಂಬರ್ 7ರಿಂದ 10ರವರೆಗೆ ನೇರಳೆ ಮಾರ್ಗದಲ್ಲಿ ಸಂಚಾರ ಆರಂಭವಾಗುತ್ತೆ. ಇದಾದ ನಂತರ ಸೆಪ್ಟೆಂಬರ್ 9 ಮತ್ತು 10ರಂದು ಹಸಿರು ಮಾರ್ಗದಲ್ಲಿ ಓಡಾಟ ಆರಂಭಿಸುತ್ತೆ.
ಮೊದಲು ಬೆಳಗ್ಗೆ 8ರಿಂದ ಬೆಳಗ್ಗೆ 11 ಗಂಟೆವರೆಗೆ ಮತ್ತು ಸಂಜೆ 4.30ರಿಂದ ಸಂಜೆ 7.30ರವರೆಗೆ ಮೆಟ್ರೋ ಓಡಾಟವಿರುತ್ತೆ. ಪ್ರತಿ 5 ನಿಮಿಷಗಳ ಅಂತರದಲ್ಲಿ ಮೆಟ್ರೋ ರೈಲುಗಳ ಸಂಚಾರ ಇರಲಿದೆ. ಸೆ.11ರಿಂದ ಹಸಿರು ಮತ್ತು ನೇರಳೆ ಎರಡೂ ಮಾರ್ಗಗಳಲ್ಲಿ ಓಡಾಟ ಶುರವಾಗಲಿದ್ದು, ಬೆಳಗ್ಗೆ 7ರಿಂದ ರಾತ್ರಿ 9 ಗಂಟೆವರೆಗೆ ಮೆಟ್ರೋ ರೈಲು ಓಡಾಟ ನಡೆಸಲಿದೆ.
ಈ ಸಂಬಂಧ ಪ್ರಯಾಣಿಕರಿಗೆ ಕೆಲವೊಂದು ಸೂಚನೆ ನೀಡಿರುವ BMRCL, ಮಾಸ್ಕ್, ಸ್ಮಾರ್ಟ್ ಕಾರ್ಡ್ ಇದ್ದವರಿಗೆ ಮಾತ್ರ ಅವಕಾಶ. ಪ್ರಯಾಣಿಕರು ಕಡ್ಡಾಯವಾಗಿ ಎರಡು ಮೀಟರ್ ದೈಹಿಕ ಅಂತರ ಕಾಯ್ದುಕೊಳ್ಳಬೇಕು. ಹಾಗೇನೆ ಪ್ರತಿ ರೈಲಿನಲ್ಲಿ 400 ಪ್ರಯಾಣಿಕರಿಗೆ ಮಾತ್ರ ಅವಕಾಶ ಇರಲಿದೆ ಎಂದು ಹೇಳಿದೆ.
ಇಷ್ಟೇ ಅಲ್ಲ ಪ್ರಯಾಣಿಕರು BMRCL ಸೂಚಿಸಿದ ಸ್ಥಳದಲ್ಲಿ ನಿಂತು ಪ್ರಯಾಣಿಸಬೇಕು. ಪ್ರತಿ ನಿಲ್ದಾಣದಲ್ಲಿ 60 ಸೆಕೆಂಡ್ ಮಾತ್ರ ರೈಲು ನಿಲ್ಲುತ್ತದೆ. ಹತ್ತು ವರ್ಷಕ್ಕಿಂತ ಕಡಿಮೆ, 65 ವರ್ಷಕ್ಕಿಂತ ಮೇಲ್ಪಟ್ಟವರು ಅಗತ್ಯಬಿದ್ದರೆ ಮಾತ್ರ ಮೆಟ್ರೋದಲ್ಲಿ ಸಂಚರಿಸಲು ಅವಕಾಶ ಇರಲಿದೆ ಎಂದು ನಮ್ಮ ಮೆಟ್ರೋ ಗೈಡ್‌ಲೈನ್ಸ್‌ನಲ್ಲಿ ತಿಳಿಸಿದೆ.
Published On - 11:53 pm, Wed, 2 September 20



