ಕಾರ್ತಿಕ್-ನಮ್ರತಾ ಮದುವೆ ವಿಚಾರ; ಜಾಹೀರಾತಿನಿಂದ ಹುಟ್ಟಿತು ಈ ಗೊಂದಲ

Updated on: Feb 29, 2024 | 8:25 AM

ಇತ್ತೀಚೆಗೆ ನಮ್ರತಾ ಹಾಗೂ ಕಾರ್ತಿಕ್ ಮದುವೆ ಆಗಿದ್ದಾರೆ ಎಂಬ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇವರು ಏಕಾಏಕಿ ವಿವಾಹ ಆಗಿದ್ದು ಏಕೆ ಎಂದು ಕೆಲವರು ಗೊಂದಲಕ್ಕೆ ಒಳಗಾದರೆ ಇನ್ನೂ ಕೆಲವರು ಇದು ಸಿನಿಮಾ ಶೂಟ್ ಇರಬಹುದು ಎಂದು ಭಾವಿಸಿದ್ದರು. ಇದಕ್ಕೆ ಉತ್ತರ ಸಿಕ್ಕಿದೆ.

ಬಿಗ್ ಬಾಸ್ ಮುಗಿದು ತಿಂಗಳೇ ಕಳೆದರು ಅದರ ಬಗ್ಗೆ ಆರಂಭ ಆಗಿರೋ ಚರ್ಚೆ ನಿಂತಿಲ್ಲ. ಇತ್ತೀಚೆಗೆ ಕಾರ್ತಿಕ್ ಹಾಗೂ ನಮ್ರತಾ (Namratha Gowda) ಮದುವೆ ಆಗಿದ್ದಾರೆ ಎನ್ನುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇವರು ಏಕಾಏಕಿ ಮದುವೆ ಆಗಿದ್ದು ಏಕೆ ಎಂದು ಕೆಲವರು ಗೊಂದಲಕ್ಕೆ ಒಳಗಾದರೆ ಇನ್ನೂ ಕೆಲವರು ಇದು ಸಿನಿಮಾ ಶೂಟ್ ಇರಬಹುದು ಎಂದು ಭಾವಿಸಿದ್ದರು. ಅಸಲಿಗೆ ಇದು ಜಾಹೀರಾತಿನ ಶೂಟಿಂಗ್. ಹೌದು, ಟಿಎ ಶರವಣ ಒಡೆತನದ ಶ್ರೀ ಸಾಯಿ ಗೋಲ್ಡ್ ಪ್ಯಾಲೆಸ್​ ಬ್ರ್ಯಾಂಡ್​ಗಾಗಿ ಕಾರ್ತಿಕ್ ಹಾಗೂ ನಮ್ರತಾ ಜಾಹೀರಾತು ಮಾಡಿದ್ದಾರೆ. ಇದರಲ್ಲಿ ಇವರು ಮದುವೆ ಆಗುವ ರೀತಿಯ ದೃಶ್ಯ ಇದೆ. ಈ ಜಾಹೀರಾತಿನಿಂದ ಸಾಕಷ್ಟು ಗೊಂದಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More