AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಸೆಮಣೆ ಮೇಲೆ ಬಿಗ್​ಬಾಸ್ ಜೋಡಿ ನಮ್ರತಾ-ಕಾರ್ತಿಕ್

Karthik-Namratha: ಬಿಗ್​ಬಾಸ್​ ಸೀಸನ್ 10ರ ಸ್ಪರ್ಧಿಗಳಾದ ಕಾರ್ತಿಕ್ ಮಹೇಶ್ ಹಾಗೂ ನಮ್ರತಾ ಅವರುಗಳು ಹಸೆ ಮಣೆ ಏರಿದ್ದಾರೆ! ಇಲ್ಲಿವೆ ನೋಡಿ ಚಿತ್ರಗಳು.

ಹಸೆಮಣೆ ಮೇಲೆ ಬಿಗ್​ಬಾಸ್ ಜೋಡಿ ನಮ್ರತಾ-ಕಾರ್ತಿಕ್
ಮಂಜುನಾಥ ಸಿ.
|

Updated on:Feb 28, 2024 | 8:10 PM

Share

ಬಿಗ್​ಬಾಸ್​ನಲ್ಲಿ (BiggBoss) ಪ್ರೀತಿ-ಪ್ರೇಮ, ಸ್ನೇಹ, ಸರಸ-ವಿರಸಗಳು ಸಾಮಾನ್ಯ. ಕೆಲವು ಜೋಡಿಗಳಂತೂ ಬಿಗ್​ಬಾಸ್​ ಮನೆಗೆ ಹೋಗಿ ಪ್ರೇಮಿಗಳಾಗಿ ಹೊರಬಂದಿದ್ದಿದೆ. ಈ ಬಾರಿ ಬಿಗ್​ಬಾಸ್ ಕನ್ನಡ ಸೀಸನ್ 10ರಲ್ಲಿ ಕೆಲವು ಸ್ಪರ್ಧಿಗಳ ನಡುವೆ ಆತ್ಮೀಯತೆ ತುಸು ಹೆಚ್ಚೇ ಇತ್ತು. ಅದರಲ್ಲಿಯೂ ಕಾರ್ತಿಕ್ ಹಾಗೂ ನಮ್ರತಾ ಬಿಗ್​ಬಾಸ್​ನ ಕೊನೆಯ ಕೆಲ ವಾರಗಳಲ್ಲಿ ತುಸು ಹೆಚ್ಚೇ ಹತ್ತಿರವಾಗಿದ್ದರು. ಆದರೆ ಸಾಮಾಜಿಕ ಜಾಲತಾಣದಲ್ಲಿ ಇದೇ ವಿಷಯಕ್ಕೆ ನಮ್ರತಾರನ್ನು ಕೆಟ್ಟದಾಗಿ ಬಿಂಬಿಸಲಾಗುತ್ತಿದೆ ಎಂಬ ಕಾರಣಕ್ಕೆ ನಮ್ರತಾ ಹಾಗೂ ಕಾರ್ತಿಕ್ ಪರಸ್ಪರ ದೂರಾದರು.

ಆದರೆ ಹೊರಗೆ ಬಂದ ಮೇಲೆ ಈಗ ಅಚಾನಕ್ಕಾಗಿ ನಮ್ರತಾ ಹಾಗೂ ಕಾರ್ತಿಕ್ ಮಹೇಶ್ ಹಸೆಮಣೆ ಏರಿದ್ದಾರೆ! ಇಬ್ಬರೂ ಮದುವೆ ಆಗಿಬಿಟ್ಟರೆ ಎಂದು ಶಾಕ್ ಆಗುವಂತಿಲ್ಲ. ಇಬ್ಬರೂ ಹಸೆಮಣೆ ಏರಿರುವುದು ಜಾಹೀರಾತೊಂದರ ಚಿತ್ರೀಕರಣಕ್ಕಾಗಿ. ನಮ್ರತಾ ಹಾಗೂ ಕಾರ್ತಿಕ್ ಮಹೇಶ್ ಅವರುಗಳು ಚಿನ್ನಾಭರಣದ ಜಾಹೀರಾತು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಜಾಹೀರಾತು ಚಿತ್ರೀಕರಣದ ವಿಡಿಯೋ ಹಾಗೂ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.

ಇದನ್ನೂ ಓದಿ:ಕೊಟ್ಟ ಮಾತಿನಂತೆ ಬಿಗ್​ಬಾಸ್​ನಲ್ಲಿ ಗೆದ್ದ ಬೈಕ್ ಅನ್ನು ದಾನ ಮಾಡಿದ ಡ್ರೋನ್ ಪ್ರತಾಪ್

ಖ್ಯಾತ ಉದ್ಯಮಿ, ರಾಜಕಾರಣಿ ಟಿಎ ಶರವಣ ಅವರ ಚಿನ್ನದ ಮಳಿಗೆ ಶ್ರೀ ಸಾಯಿ ಗೋಲ್ಡ್ ಪ್ಯಾಲೆಸ್​ ಬ್ರ್ಯಾಂಡ್​ಗಾಗಿ ಕಾರ್ತಿಕ್ ಹಾಗೂ ನಮ್ರತಾ ಒಟ್ಟಿಗೆ ಈ ಜಾಹೀರಾತು ಚಿತ್ರೀಕರಣ ಮಾಡಿದ್ದಾರೆ. ಇಬ್ಬರೂ ವಧು-ವರರಂತೆ ವೇಷ ತೊಟ್ಟು ಮೈತುಂಬ ಚಿನ್ನದ ಆಭರಣಗಳನ್ನು ತೊಟ್ಟು ಜಾಹೀರಾತು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಟಿಎ ಶರವಣ ಸಹ ಜಾಹೀರಾತು ಚಿತ್ರೀಕರಣದಲ್ಲಿ ಭಾಗಿಯಾಗಿದ್ದು, ವಧು-ವರರಿಗೆ ಆಶೀರ್ವಾದ ಮಾಡುವ ದೃಶ್ಯದಲ್ಲಿ ಹಿರಿಯರಾಗಿ ಅವರು ಕಾಣಿಸಿಕೊಂಡಿದ್ದಾರೆ.

ರೆಸಾರ್ಟ್ ಒಂದರಲ್ಲಿ ಈ ಜಾಹೀರಾತಿನ ಚಿತ್ರೀಕರಣ ನಡೆದಿದ್ದು, ಕಾರ್ತಿಕ್ ಹಾಗೂ ನಮ್ರತಾ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರೀಕರಣದ ಕೆಲವು ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ. ವಧು-ವರರಾಗಿ ಕಾಣಿಸಿಕೊಂಡಿರುವ ಕಾರ್ತಿಕ್-ನಮ್ರತಾರ ಜೋಡಿ ಕಂಡು ಒಳ್ಳೆಯ ಜೋಡಿಯೆಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:05 pm, Wed, 28 February 24

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಗಾನವಿಯ ಟಾರ್ಗೆಟ್ ಮಾಡಿದರೇ ಮನೆ ಮಂದಿ: ವಿಡಿಯೋ ನೋಡಿ
ಗಾನವಿಯ ಟಾರ್ಗೆಟ್ ಮಾಡಿದರೇ ಮನೆ ಮಂದಿ: ವಿಡಿಯೋ ನೋಡಿ
Live Video: ಸಿಎಂ ಡಿಕೆ ಶಿವಕುಮಾರ್ ಮಹತ್ವದ ಸುದ್ದಿಗೋಷ್ಠಿ
Live Video: ಸಿಎಂ ಡಿಕೆ ಶಿವಕುಮಾರ್ ಮಹತ್ವದ ಸುದ್ದಿಗೋಷ್ಠಿ
‘ಇಷ್ಟು ಗಲೀಜು ಆಟ ಆಡಬೇಡಿ’; ಕಾವ್ಯಾಗೆ ನೇರವಾಗಿ ಹೇಳಿದ ಗಾನವಿ
‘ಇಷ್ಟು ಗಲೀಜು ಆಟ ಆಡಬೇಡಿ’; ಕಾವ್ಯಾಗೆ ನೇರವಾಗಿ ಹೇಳಿದ ಗಾನವಿ
ಎಸ್​ಐಆರ್​ನಲ್ಲಿ 1.7 ಕೋಟಿ ಹೆಸರು ತೆಗೆದಿದ್ದಾರೆ: ಸಚಿವ ರಿಜ್ವಾನ್ ಆರೋಪ
ಎಸ್​ಐಆರ್​ನಲ್ಲಿ 1.7 ಕೋಟಿ ಹೆಸರು ತೆಗೆದಿದ್ದಾರೆ: ಸಚಿವ ರಿಜ್ವಾನ್ ಆರೋಪ
ಸಕ್ರೇಬೈಲು ಆನೆ ಬಿಡಾರದಲ್ಲಿ ಶೌರ್ಯ ಆನೆ ಸಾವು
ಸಕ್ರೇಬೈಲು ಆನೆ ಬಿಡಾರದಲ್ಲಿ ಶೌರ್ಯ ಆನೆ ಸಾವು
ಹುಚ್ಚರನ್ನು ಜೈಲಿಗೆ ಹಾಕ್ತಾರಾ? ಪ್ರಕಾಶ್ ರಾಜ್​ಗೆ ಪ್ರತಾಪ್ ಸಿಂಹ ತಿರುಗೇಟು
ಹುಚ್ಚರನ್ನು ಜೈಲಿಗೆ ಹಾಕ್ತಾರಾ? ಪ್ರಕಾಶ್ ರಾಜ್​ಗೆ ಪ್ರತಾಪ್ ಸಿಂಹ ತಿರುಗೇಟು