AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಟ್ಟ ಮಾತಿನಂತೆ ಬಿಗ್​ಬಾಸ್​ನಲ್ಲಿ ಗೆದ್ದ ಬೈಕ್ ಅನ್ನು ದಾನ ಮಾಡಿದ ಡ್ರೋನ್ ಪ್ರತಾಪ್

Drone Prathap: ಬಿಗ್​ಬಾಸ್​ ರನ್ನರ್ ಅಪ್ ಆಗಿದ್ದಕ್ಕೆ ಡ್ರೋನ್ ಪ್ರತಾಪ್​ಗೆ ನೀಡಲಾಗಿದ್ದ ಎಲೆಕ್ಟ್ರಿಕ್ ಬೈಕ್ ಅನ್ನು ಬೈಕ್​ನ ಅಗತ್ಯವಿದ್ದ ಯುವಕನೊಬ್ಬನಿಗೆ ನೀಡಿದ್ದಾರೆ. ಆ ಬಗ್ಗೆ ಇನ್​ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಕೊಟ್ಟ ಮಾತಿನಂತೆ ಬಿಗ್​ಬಾಸ್​ನಲ್ಲಿ ಗೆದ್ದ ಬೈಕ್ ಅನ್ನು ದಾನ ಮಾಡಿದ ಡ್ರೋನ್ ಪ್ರತಾಪ್
ಮಂಜುನಾಥ ಸಿ.
|

Updated on: Feb 20, 2024 | 6:41 PM

Share

ಬಿಗ್​ಬಾಸ್ ಕನ್ನಡ ಸೀಸನ್ 10ರ (BiggBoss) ಫಿನಾಲೆವರೆಗೂ ಬಂದು ರನ್ನರ್ ಅಪ್ ಆದ ಡ್ರೋನ್ ಪ್ರತಾಪ್, ಬಿಗ್​ಬಾಸ್ ವೇದಿಕೆ ಮೇಲೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಬಿಗ್​ಬಾಸ್​ ವೇದಿಕೆ ಮೇಲೆ ಮಾತನಾಡಿದ್ದ ಪ್ರತಾಪ್ ತಾನು ಬಿಗ್​ಬಾಸ್​ ಗೆದ್ದರೆ ಬರುವ ಹಣ ಇನ್ನಿತರೆಗಳನ್ನು ದಾನ ಮಾಡುವುದಾಗಿ ಹೇಳಿದ್ದರು. ಅಂತೆಯೇ ಬಿಗ್​ಬಾಸ್​ ರನ್ನರ್ ಅಪ್ ಆಗಿದ್ದ ಪ್ರತಾಪ್​ಗೆ 10 ಲಕ್ಷ ಬಹುಮಾನದ ಮೊತ್ತ ಹಾಗೂ ಒಂದು ಎಲೆಕ್ಟ್ರಿಕ್ ಬೈಕ್ ಉಡುಗೊರೆಯಾಗಿ ನೀಡಲಾಗಿತ್ತು. ಇದೀಗ ಎಲೆಕ್ಟ್ರಿಕ್ ಬೈಕ್ ಅನ್ನು ಪ್ರತಾಪ್ ಅಗತ್ಯವಿರುವ ಯುವಕನೊಬ್ಬನಿಗೆ ದಾನ ಮಾಡಿದ್ದಾರೆ. ಈ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಯುವಕನೊಬ್ಬನಿಗೆ ಬೈಕ್ ಅನ್ನು ನೀಡುತ್ತಿರುವ ಚಿತ್ರ ಹಂಚಿಕೊಂಡಿರುವ ಡ್ರೋನ್ ಪ್ರತಾಪ್, ‘ಬಿಗ್‌ಬಾಸ್ ನಲ್ಲಿ ಬಹುಮಾನವಾಗಿ ಬಂದ ಬೈಕ್ ಅನ್ನು ಹೇಳಿದ ಹಾಗೆ ಯಾರಿಗೆ ನೀಡಿದೆ ಅನ್ನುವುದಕ್ಕೆ ಉತ್ತರ ಇಲ್ಲಿದೆ. ಇವರು ರಾಜು ಅಂತ ಮಧ್ಯಾಹ್ನದಿಂದ ಸಂಜೆ ವರೆಗೂ ಹೋಟಲ್ ನಲ್ಲಿ ಕೆಲಸ ಮಾಡಿ‌ ಹಾಗೂ ಸಂಜೆಯ ಮೇಲೆ ಫುಡ್ ಡೆಲಿವರಿ ಕೆಲಸ ಮಾಡುತ್ತಾರೆ ಮತ್ತು ಇವರು ತಮ್ಮ ಸ್ನೇಹಿತರ ಹೆಸರಲ್ಲಿ ಗಾಡಿಯನ್ನು ತೆಗೆದುಕೊಂಡು ಅದಕ್ಕೆ ತಿಂಗಳು ತಿಂಗಳು ಕಂತು ಕಟ್ಟುತ್ತಿದ್ದರು ಆದರೆ ಅವರ ಸ್ನೇಹಿತ ಮಾಡಿದ ಮೋಸದಿಂದ ತಮ್ಮ ಬೈಕನ್ನು ಬ್ಯಾಂಕ್ ನವರು ಸೀಜ್ ಮಾಡಿದರು ಹಾಗಾಗಿ ಇವರಿಗೆ ನನಗೆ ಬಹುಮಾನವಾಗಿ ಬಂದ ಎಲೆಕ್ಟ್ರಿಕ್ ಗಾಡಿಯನ್ನು ಈ ಹುಡುಗನಿಗೆ ನೀಡಿದು ನನಗೆ ತುಂಬಾ ಖುಷಿ ತಂದಿದೆ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ ಡ್ರೋನ್ ಪ್ರತಾಪ್; ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್

ಡ್ರೋನ್ ಪ್ರತಾಪ್​ರ ಈ ಕಾರ್ಯಕ್ಕೆ ಮೆಚ್ಚಿ ಹಲವರು ಕಮೆಂಟ್ ಮಾಡಿದ್ದಾರೆ. ‘ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೀರಿ’, ‘ನಿಮಗೆ ಮತ ಹಾಕಿದ್ದಕ್ಕೂ ಸಾರ್ಥವಾಯ್ತು’, ‘ನಿಮ್ಮ ಈ ಗುಣವೇ ನಿಮ್ಮನ್ನು ಬಿಗ್​ಬಾಸ್ ಫಿನಾಲೆ ವರೆಗೂ ಕರೆತಂದಿತು’ ಇನ್ನೂ ಹಲವು ಕಮೆಂಟ್​ಗಳನ್ನು ಮಾಡಿದ್ದಾರೆ. ಪ್ರತಾಪ್​ರ ಈ ಕಾರ್ಯಕ್ಕೆ ಅತೀವ ಮೆಚ್ಚುಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದೆ. ಬಿಗ್​ಬಾಸ್ ರನ್ನರ್ ಅಪ್ ಆದ ಡ್ರೋನ್ ಪ್ರತಾಪ್​ಗೆ 10 ಲಕ್ಷ ನಗದು ಬಹುಮಾನ, ಒಂದು ಎಲೆಕ್ಟ್ರಿಕ್ ಬೈಕ್ ಬಹುಮಾನವಾಗಿ ನೀಡಲಾಗಿತ್ತು. ತನಗೆ ಬಹುಮಾನವಾಗಿ ಬಂದ 10 ಲಕ್ಷ ಹಣವನ್ನು ಸಹ ತಾವು ಬಡವರಿಗೆ ದಾನ ನೀಡುವುದಾಗಿ ಡ್ರೋನ್ ಪ್ರತಾಪ್ ಘೋಷಣೆ ಮಾಡಿದ್ದರು. ಆದರೆ ಆ ಹಣವನ್ನು ಪ್ರತಾಪ್ ಯಾರಿಗೆ ನೀಡಿದ್ದಾರೆಂಬ ಬಗ್ಗೆ ಮಾಹಿತಿ ಇಲ್ಲ.

ಡ್ರೋನ್ ಪ್ರತಾಪ್​, ಬಿಗ್​ಬಾಸ್​ಗೆ ಹೋಗುವ ಮುನ್ನ ಟ್ರೋಲ್​ಗೆ ಗುರಿಯಾಗಿದ್ದರು. ಡ್ರೋನ್​ ನಿರ್ಮಿಸಿರುವ ಬಗ್ಗೆ ಸುಳ್ಳು ಹೇಳಿ ಸಿಕ್ಕಿ ಹಾಕಿಕೊಂಡಿದ್ದರು. ಬಿಗ್​ಬಾಸ್ ಮನೆಗೆ ಹೋದಾಗಲೂ ಸಹ ಸ್ಪರ್ಧಿಗಳಿಂದ ತೀವ್ರ ಟೀಕೆಗಳನ್ನು ಎದುರಿಸಿದರು. ಆದರೆ ವಾರಗಳು ಕಳೆದಂತೆ ಪ್ರತಾಪ್ ಆಟ, ವ್ಯಕ್ತಿತ್ವ ಪ್ರೇಕ್ಷಕರಿಗೆ ಇಷ್ಟವಾಗುತ್ತಾ ಹೋಯ್ತು. ಗೆಲ್ಲುವ ಫೇವರೇಟ್​ಗಳಾಗಿದ್ದ ಹಲವರನ್ನು ಹಿಂದೆ ಹಾಕಿ ಪ್ರತಾಪ್ ಫಿನಾಲೆ ತಲುಪಿದರು. ಆದರೆ ಫಿನಾಲೆಯಲ್ಲಿ ಕಾರ್ತಿಕ್ ಮಹೇಶ್ ವಿಜೇತರಾದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ