ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ ಡ್ರೋನ್ ಪ್ರತಾಪ್; ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್

‘ಬಿಗ್ ಬಾಸ್’ ರನ್ನರ್ ಅಪ್ ಆಗಿ ಪ್ರತಾಪ ಹೊರ ಹೊಮ್ಮಿದ್ದಾರೆ. 2 ಕೋಟಿಗೂ ಅಧಿಕ ವೋಟ್ಸ್ ಅವರಿಗೆ ಬಿದ್ದಿವೆ. ಅವರ ಜನಪ್ರಿಯತೆ ಹೆಚ್ಚಿರುವುದರಿಂದ ಹೋದಲ್ಲೆಲ್ಲ ಜನರು ಮುತ್ತಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅವರು ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ದೇವರ ದರ್ಶನ ಪಡೆದಿದ್ದಾರೆ. ಆಗಲೂ ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದರು.

ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ ಡ್ರೋನ್ ಪ್ರತಾಪ್; ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಪ್ರತಾಪ್
Follow us
|

Updated on:Feb 08, 2024 | 8:06 AM

‘ಬಿಗ್ ಬಾಸ್ ಕನ್ನಡ ಸೀಸನ್ 10’ರಿಂದ (BBk 1o) ಡ್ರೋನ್ ಪ್ರತಾಪ್​ಗೆ ಸಿಕ್ಕ ಜನಪ್ರಿಯತೆ ಅಷ್ಟಿಷ್ಟಲ್ಲ. ಡ್ರೋನ್ ವಿಚಾರದಲ್ಲಿ ಈ ಮೊದಲು ಟ್ರೋಲ್ ಆಗುತ್ತಿದ್ದ ಅವರು ಬಿಗ್ ಬಾಸ್ ಮನೆಯಲ್ಲಿ ಬೇರೆಯದೇ ಪ್ರತಾಪ್ ಆದರು. ಅವರನ್ನು ಇಷ್ಟಪಡುವವರ ಸಂಖ್ಯೆ ಹೆಚ್ಚಿದೆ. ಅವರು ಹೋದಲ್ಲೆಲ್ಲ ಜನರು ಮುತ್ತಿಕೊಳ್ಳುವುದೇ ಇದಕ್ಕೆ ಸಾಕ್ಷಿ. ಈಗ ಅವರು ಚಾಮರಾಜನಗರ ಜಿಲ್ಲೆಯಲ್ಲಿರುವ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಸೇರಿದ್ದರು.

ಪ್ರತಾಪ್ ಸುಳ್ಳು ಹೇಳುತ್ತಾರೆ ಎನ್ನುವ ಅಭಿಪ್ರಾಯ ಅನೇಕರದ್ದಾಗಿತ್ತು. ಇದನ್ನು ಅವರು ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಎದುರು ಒಪ್ಪಿಕೊಂಡರು. ಬಳಿಕ ಕ್ಷಮೆ ಕೂಡ ಕೇಳಿದರು. ‘ನಾನು ಸುಳ್ಳು ಹೇಳಿರಬಹುದು. ಅದಕ್ಕೆ ಕ್ಷಮೆ ಕೇಳುತ್ತೇನೆ. ಸಾಕಷ್ಟು ನೊಂದಿದ್ದೇನೆ’ ಎಂದು ಅವರು ಕಣ್ಣೀರು ಹಾಕಿದ್ದರು. ಹಲವು ವರ್ಷಗಳಿಂದ ದೂರವೇ ಇದ್ದ ಅಪ್ಪ-ಅಮ್ಮ ಪ್ರತಾಪ್​ಗೆ ಮರಳಿ ಸಿಕ್ಕಿದ್ದಾರೆ. ಈ ಎಲ್ಲಾ ಕಾರಣದಿಂದ ಭಾವನಾತ್ಮಕವಾಗಿ ಜನರ ಜೊತೆ ಪ್ರತಾಪ್ ಕನೆಕ್ಟ್ ಆದರು. ಅವರ ಬುದ್ಧಿವಂತಿಕೆಯನ್ನೂ ಜನರು ಇಷ್ಟಪಟ್ಟರು.

‘ಬಿಗ್ ಬಾಸ್ ಕನ್ನಡ ಸೀಸನ್ 10’ ರನ್ನರ್​ ಅಪ್ ಆಗಿ ಪ್ರತಾಪ್ ಹೊರ ಹೊಮ್ಮಿದ್ದಾರೆ. 2 ಕೋಟಿಗೂ ಅಧಿಕ ವೋಟ್ಸ್ ಅವರಿಗೆ ಬಿದ್ದಿದ್ದವು. ಅವರ ಜನಪ್ರಿಯತೆ ಹೆಚ್ಚಿರುವುದರಿಂದ ಹೋದಲ್ಲೆಲ್ಲ ಜನರು ಮುತ್ತಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅವರು ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ದೇವರ ದರ್ಶನ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನರು ಸೇರಿದ್ದರು. ಎಲ್ಲರೂ ಪ್ರತಾಪ್ ಬಳಿ ಸೆಲ್ಫಿ ಕೇಳಿದ್ದಾರೆ. ಜನರ ಪ್ರತಿಕ್ರಿಯೆ ನೋಡಿ ಅವರಿಗೆ ಖುಷಿ ಆಗಿದೆ.

ಪ್ರತಾಪ್ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ ಸಂದರ್ಭ

ಮಹದೇಶ್ವರ ಬೆಟ್ಟ ಗಡಿಜಿಲ್ಲೆ ಚಾಮರಾಜನಗರದ ಹನೂರು ತಾಲೂಕಿನಲ್ಲಿದೆ. ಬೆಟ್ಟಗಳಿಂದ ಇದು ಸುತ್ತುವರಿದಿರುವುದರಿಂದ ಮಲೆ ಮಹದೇಶ್ವರ ಬೆಟ್ಟ ಎಂದು ಇದನ್ನು ಕರೆಯಲಾಗುತ್ತದೆ. ಮೈಸೂರಿನಿಂದ 130 ಕಿ.ಮೀ ಹಾಗೂ ಬೆಂಗಳೂರಿನಿಂದ 210 ಕಿ.ಮೀ ದೂರವಿದೆ ಈ ಮಹದೇಶ್ವರ ಬೆಟ್ಟ. ಇಲ್ಲಿಗೆ ಪ್ರತಾಪ್ ತೆರಳಿ ಆಶೀರ್ವಾದ ಪಡೆದಿದ್ದಾರೆ.

ಇದನ್ನೂ ಓದಿ: ‘ಬಿಗ್ ಬಾಸ್’ ವಿನ್ನರ್​ಗೆ ಇದೆಂಥಾ ಸ್ಥಿತಿ; ಭಿಕ್ಷೆ ಬೇಡುತ್ತಿರುವ ಇವರಿಗೆ ಮೈಮೇಲೆಲ್ಲ ಗುಳ್ಳೆ

ಬಿಗ್ ಬಾಸ್ ಮುಗಿದ ಬಳಿಕ ಪ್ರತಾಪ್ ಅವರು ತಮ್ಮ ಊರಿಗೆ ತೆರಳಿದ್ದರು. ಅಲ್ಲಿ ಅವರಿಗೆ ಭರ್ಜರಿ ಸ್ವಾಗತ ಸಿಕ್ಕಿತ್ತು. ಅವರು ತಂದೆಯ ಜೊತೆ ಮುದ್ದೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಅವರು ಮತ್ತೆ ಕುಟುಂಬದ ಜೊತೆ ಸೇರಿದ್ದು ಅಭಿಮಾನಿಗಳಿಗೆ ಖುಷಿ ನೀಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:36 am, Thu, 8 February 24