ತಮ್ಮ ಅಧಿಕಾರ ಬಳಸಿ ವಿನಯ್​ನ ಆಟದಿಂದ ಹೊರಗಿಟ್ಟ ನಮ್ರತಾ; ಎಲ್ಲರಿಗೂ ಶಾಕ್​

|

Updated on: Jan 11, 2024 | 3:13 PM

ಈ ಬಾರಿ ನಮ್ರತಾ ಗೌಡ ಅವರಿಗೆ ಇಂಥ ಅಧಿಕಾರ ಸಿಕ್ಕಿದೆ. ವಿನಯ್​ ಗೌಡ ಅವರನ್ನು ನಮ್ರತಾ ಹೊರಗಿಟ್ಟಿದ್ದಾರೆ. ಅವರು ಈ ನಿರ್ಧಾರ ಪ್ರಕಟಿಸಿದಾಗ ಎಲ್ಲರಿಗೂ ಶಾಕ್​ ಆಯಿತು. ಯಾಕೆಂದರೆ, ಆರಂಭದಿಂದಲೂ ವಿನಯ್​ ಗೌಡ ಮತ್ತು ನಮ್ರತಾ ಗೌಡ ಅವರು ಒಂದೇ ಗುಂಪಿನಲ್ಲಿ ಇದ್ದರು.

ಇನ್ನು ಕೆಲವೇ ದಿನಗಳಲ್ಲಿ ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ಫಿನಾಲೆ ಬರಲಿದೆ. ಈಗ ಬಿಗ್​ ಬಾಸ್​ (Bigg Boss Kannada) ಮನೆಯಲ್ಲಿ ಇರುವ ಸ್ಪರ್ಧಿಗಳಿಗೆ ನೇರವಾಗಿ ಫಿನಾಲೆಗೆ ಹೋಗಲು ಅನುಕೂಲ ಆಗುವ ರೀತಿಯಲ್ಲಿ ಟಾಸ್ಕ್​ ನೀಡಲಾಗುತ್ತಿದೆ. ಫಿನಾಲೆ (Bigg Boss Finale) ವೇದಿಕೆ ಹತ್ತಬೇಕು ಎಂಬುದು ಎಲ್ಲ ಸ್ಪರ್ಧಿಗಳ ಆಸೆ. ಹಾಗಾಗಿ ಈ ಟಾಸ್ಕ್​ನಲ್ಲಿ ಎಲ್ಲರೂ ಶ್ರದ್ಧೆಯಿಂದ ಆಡುತ್ತಿದ್ದಾರೆ. ಒಂದು ರೌಂಡ್​ ಬಳಿಕ ಟಾಸ್ಕ್​ ಗೆದ್ದವರು ಒಬ್ಬ ಸ್ಪರ್ಧಿಯನ್ನು ಮುಂದಿನ ಹಂತದ ಆಟದಿಂದ ಹೊರಗೆ ಇಡುವ ಅಧಿಕಾರ ಪಡೆಯುತ್ತಾರೆ. ಈ ಬಾರಿ ನಮ್ರತಾ ಗೌಡ ಅವರಿಗೆ ಅಂಥ ಅಧಿಕಾರ ಸಿಕ್ಕಿದೆ. ವಿನಯ್​ ಗೌಡ ಅವರನ್ನು ನಮ್ರತಾ ಹೊರಗಿಟ್ಟಿದ್ದಾರೆ. ಅವರು ಈ ನಿರ್ಧಾರ ಪ್ರಕಟಿಸಿದಾಗ ಎಲ್ಲರಿಗೂ ಶಾಕ್​ ಆಯಿತು. ಯಾಕೆಂದರೆ, ಆರಂಭದಿಂದಲೂ ವಿನಯ್​ ಗೌಡ (Vinay Gowda) ಮತ್ತು ನಮ್ರತಾ ಗೌಡ ಅವರು ಒಂದೇ ಗುಂಪಿನಲ್ಲಿ ಇದ್ದರು. ಆದರೆ ಅಂತಿಮ ಹಂತ ಸಮೀಪಿಸುತ್ತಿರುವಾಗ ನಮ್ರತಾ ಅವರು ಯಾವ ಮುಲಾಜೂ ಇಲ್ಲದೇ ವಿನಯ್​ನ ಹೊರಗೆ ಇಟ್ಟಿದ್ದಾರೆ. ‘ಕಲರ್ಸ್​ ಕನ್ನಡ’ ಮತ್ತು ‘ಜಿಯೋ ಸಿನಿಮಾ’ದಲ್ಲಿ ಜ.11ರಂದು ಈ ಸಂಚಿಕೆ ಪ್ರಸಾರ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ