ರಾಮಮಂದಿಕ್ಕೆ ಹೋಗಲ್ಲ ಅಂತ ಕಾಂಗ್ರೆಸ್ ಹೇಳಿಲ್ಲ, 22 ರಂದು ನಡೆಯುವ ಕಾರ್ಯಕ್ರಮಕ್ಕೆ ಹೋಗಲ್ಲ ಅಂತಷ್ಟೇ ಹೇಳಿದ್ದು: ಸತೀಶ್ ಜಾರಕಿಹೊಳಿ
ಕಾಂಗ್ರೆಸ್ ನಾಯಕರಿಗೆ ಅಕ್ಷೇಪಣೆ ಇರೋದು ರಾಮಮಂದಿರದ ಹೆಸರಲ್ಲಿ ನಡೆಯುತ್ತಿರುವ ರಾಜಕೀಯದ ಬಗ್ಗೆ ಎಂದ ಸಚಿವ, ರಾಮನ ಬರ್ತ್ ಸರ್ಟಿಫಿಕೇಟ್ ಕೇಳಿದ್ದು ಒಬ್ಬ ನಾಯಕ, ಅದು ಅವರ ವೈಯಕ್ತಿಕ ವಿಚಾರ ಕಾಂಗ್ರೆಸ್ ಪಕ್ಷ ಅಂಥದನ್ನೆಲ್ಲ ಅನುಮೋದಿಸಲ್ಲ ಎಂದರು.
ದೆಹಲಿ: ರಾಮಮಂದಿರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಸೋನಿಯಾ ಗಾಂಧಿ (Sonia Gandhi) ಮತ್ತು ಅಧೀರ್ ರಂಜನ್ (Adhir Ranjan Choudhury) ಹೋಗೋದಿಲ್ಲ ಅಂತ ಹೇಳಿದ್ದು ದೇಶದೆಲ್ಲೆಡೆ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ. ರಾಮಮಂದಿರದ ಉದ್ಘಾಟನೆ ಒಂದು ಧಾರ್ಮಿಕ ಕಾರ್ಯಕ್ರಮ ಆದರೆ ಬಿಜೆಪಿ ಅದನ್ನು ತನ್ನ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿರುವುದರಿಂದ ಮತ್ತು ಮಂದಿರ ನಿರ್ಮಾಣ ಕಾರ್ಯ ಇನ್ನೂ ಪೂರ್ತಿಗೊಂಡಿರದ ಕಾರಣ ಕಾಂಗ್ರೆಸ್ ನಾಯಕರು ಹೋಗುತ್ತಿಲ್ಲ ಎಂದು ಎಐಸಿಸಿ ಹೇಳಿದೆ. ಇಂದು ದೆಹಲಿಯಲ್ಲಿರುವ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಕಾಂಗ್ರೆಸ್ ನಿಲುವಿನ ಬಗ್ಗೆ ಪ್ರಶ್ನಿಸಿದಾಗ, ಕಾಂಗ್ರೆಸ್ ನಾಯಕರು ರಾಮಮಂದಿರಕ್ಕೆ ಹೋಗಲ್ಲ ಅಂತ ಹೇಳಿಲ್ಲ, ಆದರೆ ಜನವೆರಿ 22 ರಂದು ನಡೆಯುವ ಉದ್ಘಾಟನಾ ಕಾರ್ಯಕ್ರಮಕ್ಕೆ ಹೋಗಲ್ಲ ಅಂತ ಹೇಳಿದ್ದಾರೆ. ರಾಮ ಇಡೀ ದೇಶದ ಆಸ್ತಿ, ಮತ್ತು ರಾಮನಲ್ಲಿ ಭಕ್ತಿಯುಳ್ಳವರು ಮಂದಿರಕ್ಕೆ ಹೋಗದಿರುತ್ತಾರೆಯೇ? ಎಂದು ಜಾರಕಿಹೊಳಿ ಹೇಳಿದರು. ಕಾಂಗ್ರೆಸ್ ನಾಯಕರಿಗೆ ಅಕ್ಷೇಪಣೆ ಇರೋದು ರಾಮಮಂದಿರದ ಹೆಸರಲ್ಲಿ ನಡೆಯುತ್ತಿರುವ ರಾಜಕೀಯದ ಬಗ್ಗೆ ಎಂದ ಸಚಿವ, ರಾಮನ ಬರ್ತ್ ಸರ್ಟಿಫಿಕೇಟ್ ಕೇಳಿದ್ದು ಒಬ್ಬ ನಾಯಕ, ಅದು ಅವರ ವೈಯಕ್ತಿಕ ವಿಚಾರ ಕಾಂಗ್ರೆಸ್ ಪಕ್ಷ ಅಂಥದನ್ನೆಲ್ಲ ಅನುಮೋದಿಸಲ್ಲ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ