ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಿ ಆರೋಪಿ ಪರಾರಿ: ಕೋರ್ಟ್ಗೆ ಹಾಜರುಪಡಿಸಲು ಕರೆತಂದಿದ್ದಾಗ ಎಸ್ಕೇಪ್
ಕೋರ್ಟ್ಗೆ ಹಾಜರುಪಡಿಸಲು ಕರೆತಂದಿದ್ದಾಗ ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಿ ಆರೋಪಿ ಪರಾರಿಯಾಗಿರುವಂತಹ ಘಟನೆ ಬೆಳಗಾವಿಯ JMFC ಕೋರ್ಟ್ ಆವರಣದಲ್ಲಿ ನಡೆದಿದೆ. ಆರೋಪಿ ಎಸ್ಕೇಪ್ ಆಗುತ್ತಿದ್ದಂತೆ ಪೊಲೀಸರು ಹುಡುಕಾಡಿದ್ದಾರೆ. ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೆಳಗಾವಿ, ಜನವರಿ 11: ಕೋರ್ಟ್ಗೆ ಹಾಜರುಪಡಿಸಲು ಕರೆತಂದಿದ್ದಾಗ ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಿ ಆರೋಪಿ ಪರಾರಿಯಾಗಿರುವಂತಹ ಘಟನೆ ಬೆಳಗಾವಿಯ JMFC ಕೋರ್ಟ್ ಆವರಣದಲ್ಲಿ ನಡೆದಿದೆ. ಅಬ್ದುಲ್ ಗನಿ ಶಬ್ಬೀರ್ ಶೇಖ್ ಪರಾರಿಯಾದ ಆರೋಪಿ. ಕಳ್ಳತನ, ದರೋಡೆ ಕೇಸ್ನಲ್ಲಿ ಜೈಲು ಸೇರಿದ್ದ. ಹಿಂಡಲಗಾ ಜೈಲಿಂದ ಟಿಳಕವಾಡಿ ಪೊಲೀಸರು ಕೋರ್ಟ್ಗೆ ಕರೆತಂದಿದ್ದರು.
ಆರೋಪಿ ಎಸ್ಕೇಪ್ ಆಗುತ್ತಿದ್ದಂತೆ ಪೊಲೀಸರು ಹುಡುಕಾಡಿದ್ದಾರೆ. ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
8 ಸಾವಿರ ರೂ. ಲಂಚ ಸ್ವೀಕರಿಸುವಾಗ ಲೋಕಾ ಬಲೆಗೆ ಬಿದ್ದ ಲೆಕ್ಕಾಧಿಕಾರಿ
ಬಾಗಲಕೋಟೆ: 8 ಸಾವಿರ ರೂ. ಲಂಚ ಸ್ವೀಕರಿಸುವಾಗ ಜಮಖಂಡಿ ನಗರಸಭೆ ಲೆಕ್ಕಾಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿರುವಂತಹ ಘಟನೆ ನಡೆದಿದೆ. ಮಹಾವೀರ ಧ್ಯೇಯಗೊಂಡ ಬಲೆಗೆ ಬಿದ್ದ ಅಧಿಕಾರಿ.
ಇದನ್ನೂ ಓದಿ: ವೇಶ್ಯಾವಾಟಿಕೆ ನಡೆಸುತ್ತಿದ್ದ ಲಾಡ್ಜ್ ಮೇಲೆ ದಾಳಿ: ನಾಲ್ವರು ಮಹಿಳೆಯರ ರಕ್ಷಣೆ, 10 ಪುರುಷರು ವಶಕ್ಕೆ
ಪೌರಕಾರ್ಮಿಕರ ವೇತನ ಬಿಡುಗಡೆಗೆ ಪೌರಕಾರ್ಮಿಕ ಚೇತನ್ ತರತರಿ ಎಂಬುವವರಿಂದ ಲಂಚ ಸ್ವೀಕರಿಸುತ್ತಿದ್ದ. ಬಾಕಿ ವೇತನ ಬಿಡುಗಡೆಗೆ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ. ಈ ವೇಳೆ ಎಸ್‌ಪಿ ಶಂಕರ್ ರಾಗಿ, ಡಿವೈಎಸ್‌ಪಿ ಪುಷ್ಪಲತಾ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.
ಜಗುಲಿ ಮೇಲೆ ದೇವರ ಮುಂದಿಟ್ಟ ದೀಪದಿಂದ ಅವಘಡ: ಸುಟ್ಟು ಭಸ್ಮವಾದ ಗುಡಿಸಲು
ವಿಜಯಪುರ: ಇಂಡಿ ತಾಲೂಕಿನ ಲಿಂಗದಳ್ಳಿ ಗ್ರಾಮದ ಬಳಿ ತೋಟದಲ್ಲಿ ದೇವರ ಮುಂದಿಟ್ಟಿದ್ದ ದೀಪದಿಂದ ಬೆಂಕಿ ತಗುಲಿ ಗುಡಿಸಲು ಸುಟ್ಟು ಭಸ್ಮವಾಗಿರುವಂತಹ ಘಟನೆ ನಡೆದಿದೆ. ಸಿದ್ದಪ್ಪ ವಾಲಿಕಾರ ಎಂಬುವವರ ಗುಡಿಸಲಿನಲ್ಲಿದ್ದ ನಿತ್ಯ ಬಳಕೆಯ ವಸ್ತುಗಳು, ನಗದು, ಚಿನ್ನಾಭರಣ ಬೆಂಕಿಗಾಹುತಿ ಆಗಿವೆ. ಇಂಡಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನೆಲಮಂಗಲದ ಎಡೇಹಳ್ಳಿಯಲ್ಲಿ ಸರಣಿ ಅಪಘಾತ
ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಎಡೇಹಳ್ಳಿಯಲ್ಲಿ ಕ್ಯಾಂಟರ್ ವಾಹನ, ಕಾರು, ಸರ್ಕಾರಿ ಬಸ್ ಮಧ್ಯೆ ಸರಣಿ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸಿಲ್ಲ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.