Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಆಸ್ಪತ್ರೆ ವೈದ್ಯರ ಎಡವಟ್ಟಿನಿಂದ ಆರು ವರ್ಷ ಕೋಮಾಕ್ಕೆ ಜಾರಿದ್ದ ಯುವಕ ಸಾವು

ಆಸ್ಪತ್ರೆ ವೈದ್ಯರ ಎಡವಟ್ಟಿನಿಂದಾಗಿ ಆರು ವರ್ಷಗಳ ಕಾಲ ಕೋಮಾಕ್ಕೆ ಜಾರಿದ್ದ ಯುವಕ ಇದೀಗ ಮೃತಪಟ್ಟ ವಿಚಾರ ಬೆಳಕಿಗೆ ಬಂದಿದೆ. ಏಪ್ರಿಲ್ 4, 2017 ರಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಯುವಕ ವಿಘ್ನೇಶ್, 2024ರ ಜನವರಿ 3 ರಂದು ಮೃತಪಟ್ಟಿದ್ದಾನೆ. ಚಿಕತ್ಸಾ ವೆಚ್ಚ ನೀಡುವುದಾಗಿ ಹೇಳಿ ಕೇವಲ ಐದು ಲಕ್ಷ ರೂಪಾಯಿ ನೀಡಿ ಕೈತೊಳೆದುಕೊಂಡ ವೈದ್ಯರ ವಿರುದ್ಧ ಮೃತ ಯುವಕನ ಪೋಷಕರು ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಬೆಂಗಳೂರು: ಆಸ್ಪತ್ರೆ ವೈದ್ಯರ ಎಡವಟ್ಟಿನಿಂದ ಆರು ವರ್ಷ ಕೋಮಾಕ್ಕೆ ಜಾರಿದ್ದ ಯುವಕ ಸಾವು
ಬೆಂಗಳೂರಿನ ಖಾಸಗಿ ಆಸ್ಪತ್ರೆ ವೈದ್ಯರ ಎಡವಟ್ಟಿನಿಂದ ಆರು ವರ್ಷಗಳಿಂದ ಕೋಮಾದಲ್ಲಿದ್ದ ಯುವಕ ವಿಘ್ನೇಶ್ ಸಾವು
Follow us
ರಾಚಪ್ಪಾಜಿ ನಾಯ್ಕ್
| Updated By: Rakesh Nayak Manchi

Updated on: Jan 12, 2024 | 9:15 AM

ಬೆಂಗಳೂರು, ಜ.12: ಆಸ್ಪತ್ರೆ ವೈದ್ಯರ ಎಡವಟ್ಟಿನಿಂದಾಗಿ ಆರು ವರ್ಷಗಳ ಕಾಲ ಕೋಮಾಕ್ಕೆ ಜಾರಿದ್ದ ಯುವಕ ಇದೀಗ ಮೃತಪಟ್ಟ ವಿಚಾರ ಬೆಳಕಿಗೆ ಬಂದಿದೆ. ಏಪ್ರಿಲ್ 4 ,2017 ರಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕ ವಿಘ್ನೇಶ್ (20), 2024ರ ಜನವರಿ 3 ರಂದು ಮೃತಪಟ್ಟಿದ್ದಾನೆ. ಚಿಕತ್ಸಾ ವೆಚ್ಚ ನೀಡುವುದಾಗಿ ಹೇಳಿ ಕೇವಲ ಐದು ಲಕ್ಷ ರೂಪಾಯಿ ನೀಡಿ ಕೈತೊಳೆದುಕೊಂಡ ವೈದ್ಯರ ವಿರುದ್ಧ ಮೃತ ಯುವಕನ ಪೋಷಕರು ಬೆಂಗಳೂರು (Bengaluru) ನಗರದ ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಹರ್ನಿಯಾ ಚಿಕಿತ್ಸೆಗೆಂದು 2017ರ ಏಪ್ರಿಲ್ 4 ರಂದು ವಿಘ್ನೇಶ್​ನನ್ನು ಪೋಷಕರು ಸುಬ್ರಹ್ಮಣ್ಯನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಶಸ್ತ್ರ ಚಿಕಿತ್ಸೆ ಸಮಯದಲ್ಲಿ ವೈದ್ಯರು ಮೂರು ಬಾರಿ ಅನಸ್ತೇಷಿಯ ನೀಡಿದ್ದರು. ಇದರಿಂದಾಗಿ ಪ್ರಜ್ಞೆ ಕಳೆದುಕೊಂಡಿದ್ದ ವಿಘ್ನೇಶ್ ಕೋಮಾಕ್ಕೆ ಜಾರಿದ್ದನು. ಘಟನೆ ಸಂಬಂಧ ಬನಶಂಕರಿ ಪೊಲೀಸ್ ಠಾಣೆಗೆ ಕುಟುಂಬಸ್ಥರು ದೂರು ನೀಡಿದ್ದರು.

ಇದನ್ನೂ ಓದಿ: ಹೊಲದಲ್ಲಿ ಬಾಲಕನಿಗೆ ವಿದ್ಯುತ್ ಶಾಕ್ ಪ್ರಕರಣ: ಬೆರಳುಗಳು ಮುಂಗೈ ತೆಗೆದ ವೈದ್ಯರು, ಇನ್ನೂ ಜಡ್ಡುಗಟ್ಟಿರುವ ಬೆಸ್ಕಾಂ ಅಧಿಕಾರಿಗಳು

ಯುವಕನ ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಂತೆ ಎಚ್ಚೆತ್ತ ವೈದ್ಯರು ಚಿಕಿತ್ಸೆ ವೆಚ್ಚ ಭರಿಸೋದಾಗಿ ಹೇಳಿದ್ದರು. ಚಿಕಿತ್ಸೆಗೆಂದು‌ 19 ಲಕ್ಷ ಖರ್ಚು ಮಾಡಲಾಗಿದೆ. ಆದರೆ ಆಸ್ಪತ್ರೆ ಆಡಳಿತ ಮಂಡಳಿ ಐದು ಲಕ್ಷ ನೀಡಿ ಕೈತೊಳೆದುಕೊಂಡಿದೆ. ಉಳಿದ ಚಿಕಿತ್ಸೆ ವೆಚ್ಚ ಕೂಡ ನೀಡದೆ ಬೆದರಿಕೆ ಹಾಕಿದ ಆರೋಪ ಕೇಳಿಬಂದಿದೆ.

ಈ ನಡುವೆ ಆರು ವರ್ಷಗಳಿಂದ ಕೋಮಾದಲ್ಲಿದ್ದ ವಿಘ್ನೇಶ್ ಜನವರಿ 3 ರಂದು ಮೃತಪಟ್ಟಿದ್ದು, ಆಸ್ಪತ್ರೆ ವೈದ್ಯರ ಯಡವಟ್ಟು ಸಂಬಂಧ ಮತ್ತೆ ಬನಶಂಕರಿ ಪೊಲೀಸ್ ಠಾಣೆಗೆ ಪೋಷಕರು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ