‘ವಿನಯ್​ಗೆ ಕ್ಯಾಪ್ಟನ್​ ಆಗುವ ಅರ್ಹತೆ ಇಲ್ಲ’; ನಮ್ರತಾ ಮಾತಿನಿಂದ ನೊಂದುಕೊಂಡ ವಿನಯ್​ ಗೌಡ

Updated on: Nov 30, 2023 | 5:41 PM

ಮೊದಲಿಗೆ ವಿನಯ್​ ಗೌಡ ಮತ್ತು ನಮ್ರತಾ ಗೌಡ ಅವರು ಬಹಳ ಕ್ಲೋಸ್​ ಆಗಿದ್ದರು. ಆದರೆ ಈಗ ಇಬ್ಬರ ನಡುವೆ ಬಿರುಕು ಮೂಡಿದೆ. ಅದಕ್ಕೆ ಸಾಕ್ಷಿ ಎಂಬಂತೆ ಈ ಪ್ರೋಮೋ ರಿಲೀಸ್​ ಆಗಿದೆ. ದಿನದಿಂದ ದಿನಕ್ಕೆ ಬಿಗ್​ ಬಾಸ್​ ಮನೆಯಲ್ಲಿ ಪೈಪೋಟಿಯ ಕಾವು ಹೆಚ್ಚಾಗುತ್ತಿದೆ. ಸ್ಪರ್ಧಿಗಳ ನಿಜವಾದ ಬಣ್ಣ ಏನು ಎಂಬುದು ಗೊತ್ತಾಗುತ್ತಿದೆ.

ಬಿಗ್​ ಬಾಸ್ (Bigg Boss Kannada) ಆಟದಲ್ಲಿ ಯಾರೂ ಮಿತ್ರರಲ್ಲ, ಯಾರೂ ಶತ್ರುಗಳು ಕೂಡ ಅಲ್ಲ. ಪರಿಸ್ಥಿತಿಗೆ ತಕ್ಕಂತೆ ಎಲ್ಲರೂ ಬದಲಾಗುತ್ತಾರೆ. ಕಷ್ಟದ ಸಂದರ್ಭದಲ್ಲಿ ಯಾರಿಂದಲಾದರೂ ಸಹಾಯ ಸಿಗುತ್ತೆ ಎಂದು ನಿರೀಕ್ಷಿಸುವುದು ಕೂಡ ಕಷ್ಟ. ಆ ಸತ್ಯ ಈಗ ವಿನಯ್​ ಗೌಡ ಅವರಿಗೆ ಅರ್ಥ ಆಗಿದೆ. ಅದನ್ನು ಅವರು ನೇರವಾಗಿಯೇ ಹೇಳಿದ್ದಾರೆ. 8ನೇ ವಾರದಲ್ಲಿ ಕ್ಯಾಪ್ಟನ್​ ಆಗಲು ಅರ್ಹರಲ್ಲದವರ ಹೆಸರನ್ನು ಹೇಳುವಂತೆ ನಮ್ರತಾಗೆ ಬಿಗ್​ ಬಾಸ್​ ಕಡೆಯಿಂದ ಆದೇಶ ಬಂತು. ಆಗ ಅವರು ವಿನಯ್​ ಗೌಡ (Vinay Gowda) ಹೆಸರನ್ನು ಹೇಳಿದರು. ಇದರಿಂದ ವಿನಯ್​ಗೆ ಶಾಕ್​ ಆಯಿತು. ‘ವಿನಯ್​ ಅವರನ್ನು ಕ್ಯಾಪ್ಟನ್ಸಿ ಓಟದಿಂದ ಹೊರಗೆ ಇಡುತ್ತೇನೆ. ಕೋಪದಲ್ಲಿ ಅವರು ಅಗ್ರೆಸಿವ್​ ನಿರ್ಧಾರ ತೆಗೆದುಕೊಳ್ಳುತ್ತಾರೆ. ಮಾತನಾಡುವಾಗ ಬೇರೆಯವರಿಗೆ ನೋವಾಗುತ್ತದೆ ಎಂಬುದನ್ನು ಕೂಡ ಅವರು ಯೋಚಿಸುವುದಿಲ್ಲ’ ಎಂದು ನಮ್ರತಾ (Namratha Gowda) ಕಾರಣ ನೀಡಿದರು. ಇದನ್ನು ಕೇಳಿ ವಿನಯ್​ಗೆ ಬೇಸರ ಆಯಿತು. ಈ ಸಂಚಿಕೆ ನವೆಂಬರ್​ 30ರ ರಾತ್ರಿ 9.30ಕ್ಕೆ ‘ಕಲರ್ಸ್​ ಕನ್ನಡ’ದಲ್ಲಿ ಪ್ರಸಾರ ಆಗಲಿದೆ. ದಿನದ 24 ಗಂಟೆಯೂ ‘ಜಿಯೋ ಸಿನಿಮಾ’ದಲ್ಲಿ ಉಚಿತವಾಗಿ ನೋಡಬಹುದು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More