ಇದು ವಿಸ್ಮಯವೋ.. ಪವಾಡವೋ, ಬಾಗಲಕೋಟೆಯಲ್ಲಿ ಹಾಲು ಕುಡಿದ ಕಲ್ಲಿನ ನಂದಿ ಮೂರ್ತಿ; ವಿಡಿಯೋ ನೋಡಿ

| Updated By: ಆಯೇಷಾ ಬಾನು

Updated on: Mar 06, 2022 | 4:15 PM

ಹೆಣ್ಮಕ್ಕಳು ಚಮಚದಿಂದ ಕಲ್ಲಿನ ಮೂರ್ತಿಗೆ ಹಾಲು ಕುಡಿಸ್ತಿದ್ದಾರೆ. ಆದ್ರೆ ಇಲ್ಲಿ ಒಂದು ಹನಿಯೂ ಚೆಲ್ಲದಂತೆ ಬಸವ ಹಾಲು ಕುಡಿಯುತ್ತಂತೆ. ಇಂಥಾ ವಿಚಿತ್ರ ಘಟನೆ ನಡೆದಿದ್ದು, ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ಪಟ್ಟಣದ ಗುಗ್ಗರಿ ಓಣಿಯಲ್ಲಿ.

ಬಾಗಲಕೋಟೆ: ಪ್ರಪಂಚ ವಿಸ್ಮಯಗಳ ಆಗರ. ಇಲ್ಲಿ ಆಶ್ಚರ್ಯ, ವಿಸ್ಮಯ, ಪವಾಡದಂತಹ ಚಕಿತಗಳು ನಡೆಯುತ್ತಲೇ ಇರುತ್ತವೆ. ಇಂತಹ ವಿಸ್ಮಯಗಳೇ ಜನರಲ್ಲಿ ದೇವರ ಮೇಲಿನ ನಂಬಿಕೆ ಹೆಚ್ಚಿಸುವುದು. ಸದ್ಯ ಕಲ್ಲಿನ ಬಸವಣ್ಣ ಮೂರ್ತಿ ಹಾಲು ಕುಡಿಯುತ್ತಿರುವ ಪವಾಡವೊಂದು ಬಾಗಲಕೋಟೆಯಲ್ಲಿ ನಡೆದಿದ್ದು ಪವಾಡವನ್ನು ಕಣ್ತುಂಬಿಕೊಳ್ಳಲು ಜನ ಸಾಗರವೇ ಹರಿದು ಬರುತ್ತಿದೆ.

ಹೆಣ್ಮಕ್ಕಳು ಚಮಚದಿಂದ ಕಲ್ಲಿನ ಮೂರ್ತಿಗೆ ಹಾಲು ಕುಡಿಸ್ತಿದ್ದಾರೆ. ಆದ್ರೆ ಇಲ್ಲಿ ಒಂದು ಹನಿಯೂ ಚೆಲ್ಲದಂತೆ ಬಸವ ಹಾಲು ಕುಡಿಯುತ್ತಂತೆ. ಇಂಥಾ ವಿಚಿತ್ರ ಘಟನೆ ನಡೆದಿದ್ದು, ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ಪಟ್ಟಣದ ಗುಗ್ಗರಿ ಓಣಿಯಲ್ಲಿ. ಗುಳೇದಗುಡ್ಡದ ಗುಗ್ಗರಿ ಓಣಿಯ ಅರಳಿಕಟ್ಟಿ ಬಸವಣ್ಣ ಹಾಲು ಕುಡಿದ ಅನ್ನೋ ಸುದ್ದಿ ಹಬ್ಬಿತ್ತು. ಇದನ್ನು ನಂಬಿದ ಭಕ್ತರು, ಬಸವಣ್ಣನ ದೇವಸ್ಥಾನದತ್ತ ಓಡೋದಿ ಬಂದಿದ್ರು. ಹಾಲು ತಂದು ಚಮಚದಿಂದ ಮೂರ್ತಿಗೆ ಕುಡಿಸಿದ ದೃಶ್ಯ ಕಂಡು ಬಂತು.

ಆರಂಭದಲ್ಲಿ ಬಸವಣ್ಣ ಹಾಲು ಕುಡಿಯುತ್ತಾನಾ? ಇದು ಎಷ್ಟು ಸತ್ಯ? ಇದರಲ್ಲಿ ಏನೋ ಇದೆ ಅಂತಾ ಜನರು ಗೊಣಗುತ್ತಿದ್ದರು. ಆದ್ರೆ, ಕೆಲ ಭಕ್ತರು ಮಾತ್ರ ಇದು ಪವಾಡ ಅನ್ನೋ ನಂಬಿಕೆಯಲ್ಲಿದ್ರು. ಜನರು ಕುತಹೂಲದಿಂದ ಹಾಲು ಕುಡಿಸುವ ದೃಶ್ಯ ಕಣ್ತುಂಬಿಕೊಂಡು, ದರ್ಶನ ಪಡೆದು ತೆರಳಿದ್ರು. ಆಶ್ಚರ್ಯವೋ ಅದ್ಭುತವೋ ಅಥವಾ ಪವಾಡವೋ ಗೊತ್ತಿಲ್ಲ. ಮಹಿಳೆಯರು ಮೂರ್ತಿಗೆ ಹಾಲು ಕುಡಿಸಿ ಎಲ್ಲರನ್ನು ಬೆರಗುಗೊಳಿಸಿದ್ದಾರೆ. ಆದ್ರೆ, ಆಧುನಿಕ ಯುಗದಲ್ಲಿ ಇಂಥಾ ಘಟನೆಗಳೆಲ್ಲಾ ನಡೆಯಲು ಸಾಧ್ಯನಾ ಅನ್ನೋ ಪ್ರಶ್ನೆಗಳು ಕಾಡ್ತಿವೆ.

ಇನ್ನು ಇದೇ ರೀತಿಯ ಘಟನೆ ಮತ್ತೊಂದು ಕಡೆ ನಡೆದಿದೆ. ಕಲಬುರಗಿಯ ಬ್ಯಾಂಕ್ ಕಾಲೋನಿಯ ಈಶ್ವರ ದೇಗುಲದಲ್ಲಿ ಗುಡಿಯ ಮುಂದೆ ಬಸವಣ್ಣನ ಮೂರ್ತಿಯಿದ್ದು, ಭಕ್ತರೊಬ್ಬರು ಮೂರ್ತಿಗೆ ಹಾಲು ಕುಡಿಸಿದ್ದಾರೆ. ಈ ವೇಳೆ ಬಸವನ ಒಳಗೆ ಹಾಲು ಸೇರಿದ್ದು, ಜನ ಬೆರಗಾಗಿದ್ದಾರೆ. ಬಳಿಕ ಮಹಿಳೆಯರು ಮಕ್ಕಳೆಲ್ಲ ಆಗಮಿಸಿ ಬಸವನ ಮೂರ್ತಿಗೆ ಹಾಲು ಕುಡಿಸಿದ್ದಾರೆ.

ಮಹಾರಾಷ್ಟ್ರದ ಲಾಥೂರ್ನಲ್ಲಿ ನಿನ್ನೆ ಬಸವನ ಮೂರ್ತಿ ಹಾಲು ಕುಡಿದಿದ್ದಂತೆ. ಅಲ್ಲಿಂದ ವಿಷ್ಯ ಕಲಬುರಗಿಗೆ ಹರಡಿದೆ. ನಂತರ, ಇಡೀ ರಾತ್ರಿ ಬಸವನ ಮೂರ್ತಿಗೆ ಹಾಲು ಕುಡಿಸಲು ಜನ ಮುಗಿಬಿದ್ದಿದ್ರು. ಆದ್ರೆ, ಬೆಳಗ್ಗೆ ಚೊಂಬಿನಲ್ಲಿ ಹಾಲು ಹಿಡಿದು ಬಂದವ್ರಿಗೆ ನಿರಾಸೆಯಾಗಿತ್ತು. ಯಾಕಂದ್ರೆ, ಬೆಳಗ್ಗೆ ಬಸವಣ್ಣ ಹಾಲು ಕುಡಿದಿಲ್ಲ.

ವರದಿ:ಬಾಗಲಕೋಟೆಯಿಂದ ರವಿ ಮೂಕಿ ಜತೆ ಸಂಜಯ್ ಟಿವಿ9 ಕಲಬುರಗಿ

Published on: Mar 06, 2022 03:15 PM