ಚಂದ್ರನ ಅಂಗಳ ಸುತ್ತಿ ಭೂಮಿಗೆ ಸುರಕ್ಷಿತವಾಗಿ ವಾಪಸಾದ ನಾಸಾ ಗಗನಯಾತ್ರಿಗಳ ತಂಡ: ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು

Updated on: Apr 11, 2026 | 8:16 AM

ಐದು ದಶಕಗಳ ಬಳಿಕ ಚಂದ್ರನ ಸಮೀಪ ಯಾನ ಕೈಗೊಂಡಿದ್ದ ನಾಸಾದ ಆರ್ಟೆಮಿಸ್ II ಗಗನಯಾತ್ರಿಗಳ ತಂಡ ಸುರಕ್ಷಿತವಾಗಿ ಭೂಮಿಗೆ ಮರಳಿದೆ. ಓರಿಯಾನ್ ಕ್ಯಾಪ್ಸೂಲ್ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಕರಾವಳಿಯ ಪೆಸಿಫಿಕ್ ಸಾಗರದಲ್ಲಿ ಇಳಿಯಿತು. ನಾಲ್ವರು ಗಗನಯಾತ್ರಿಗಳು ಚಂದ್ರನ ಅಂಗಳಕ್ಕೆ ಇಳಿಯುವ ಯೋಜನೆಯ ಪೂರಕ ಅಧ್ಯಯನ ನಡೆಸಿ ಯಶಸ್ವಿಯಾಗಿ ವಾಪಸ್ಸಾಗಿದ್ದಾರೆ.

ಕ್ಯಾಲಿಫೋರ್ನಿಯಾ, ಏಪ್ರಿಲ್ 11: ಸುಮಾರು ಐದು ದಶಕಗಳ ಸುದೀರ್ಘ ಕಾಯುವಿಕೆಯ ನಂತರ ಚಂದ್ರನತ್ತ ಪ್ರಯಾಣ ಬೆಳೆಸಿದ್ದ ನಾಸಾದ ‘ಆರ್ಟೆಮಿಸ್-2 (Artemis II)’ ಗಗನಯಾತ್ರಿಗಳ ತಂಡ ಯಶಸ್ವಿಯಾಗಿ ಭೂಮಿಗೆ ಮರಳಿದೆ. ನಾಲ್ವರು ಗಗನಯಾತ್ರಿಗಳನ್ನು ಹೊತ್ತ ಒರಿಯಾನ್ ಕ್ಯಾಪ್ಸೂಲ್ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಕರಾವಳಿಯ ಪೆಸಿಫಿಕ್ ಮಹಾಸಾಗರದಲ್ಲಿ ಸುರಕ್ಷಿತವಾಗಿ ಇಳಿದಿದೆ (Splashdown). ಈ ತಂಡವು ಚಂದ್ರನ ಅಂಗಳಕ್ಕೆ ಇಳಿಯದಿದ್ದರೂ, ಚಂದ್ರನ ಕಕ್ಷೆಯಲ್ಲಿ ಸುತ್ತು ಹಾಕಿ ಭವಿಷ್ಯದ ಮಾನವ ಚಂದ್ರಯಾನ ಯೋಜನೆಗಳಿಗೆ ಪೂರಕವಾದ ಮಹತ್ವದ ಅಧ್ಯಯನ ಮತ್ತು ತಾಂತ್ರಿಕ ಪರಿಶೀಲನೆಗಳನ್ನು ನಡೆಸಿ ಬಂದಿದೆ. ಇದು ಚಂದ್ರನ ಮೇಲೆ ಮಾನವನನ್ನು ಮತ್ತೆ ಇಳಿಸುವ ನಾಸಾದ ಮಹತ್ವಾಕಾಂಕ್ಷೆಯ ಯೋಜನೆಗೆ ಬಲ ನೀಡಿದೆ. ಸುರಕ್ಷಿತವಾಗಿ ಮರಳಿದ ಗಗನಯಾತ್ರಿಗಳನ್ನು ನಾಸಾ ವಿಜ್ಞಾನಿಗಳು ಮತ್ತು ನೌಕಾಪಡೆಯ ತಂಡ ಸಂಭ್ರಮದಿಂದ ಸ್ವಾಗತಿಸಿತು. ಮುಂದಿನ ದಿನಗಳಲ್ಲಿ ಚಂದ್ರನ ಮೇಲೆ ಮನುಷ್ಯನನ್ನು ಇಳಿಸುವ ಆರ್ಟೆಮಿಸ್-3 ಮಿಷನ್‌ಗೆ ಈ ಯಶಸ್ಸು ಭದ್ರ ಬುನಾದಿ ಹಾಕಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us