Pratham: ‘ನಟ ಭಯಂಕರ’ ಚಿತ್ರತಂಡಕ್ಕೆ ಅಶ್ವಿನಿ ಪುನೀತ್ ನೀಡಿದ ಬೆಂಬಲಕ್ಕೆ ಧನ್ಯವಾದ ಅರ್ಪಿಸಿದ ಪ್ರಥಮ್
Nata Bhayankara | Ashwini Puneeth Rajkumar: ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ‘ನಟ ಭಯಂಕರ’ ಚಿತ್ರತಂಡದ ಬೆನ್ನು ತಟ್ಟಿದ್ದಾರೆ. ಅವರು ನೀಡಿದ ಬೆಂಬಲಕ್ಕೆ ನಟ, ನಿರ್ದೇಶಕ ಪ್ರಥಮ್ ಧನ್ಯವಾದ ಅರ್ಪಿಸಿದ್ದಾರೆ.
ಪ್ರಥಮ್ ಅಭಿನಯದ ‘ನಟ ಭಯಂಕರ’ (Nata Bhayankara) ಸಿನಿಮಾದ ಆಡಿಯೋ ಬಿಡುಗಡೆ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಅಶ್ವಿನಿ ಪುನೀತ್ ರಾಜ್ಕುಮಾರ್ (Ashwini Puneeth Rajkumar) ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ತಮ್ಮ ತಂಡಕ್ಕೆ ಅಶ್ವಿನಿ ಅವರು ನೀಡಿದ ಬೆಂಬಲ ಎಂಥದ್ದು ಎಂಬುದನ್ನು ವೇದಿಕೆಯಲ್ಲಿ ಎಲ್ಲರ ಎದುರು ಪ್ರಥಮ್ ವಿವರಿಸಿದ್ದಾರೆ. ದೊಡ್ಮನೆಯ ಗುಣಗಾನವನ್ನು ಅವರು ಮಾಡಿದ್ದಾರೆ. ಇಡೀ ತಂಡಕ್ಕೆ ಶುಭವಾಗಲಿ ಎಂದು ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಹಾರೈಸಿದ್ದಾರೆ. ‘ನಟ ಭಯಂಕರ’ ಚಿತ್ರಕ್ಕೆ ಪ್ರಥಮ್ (Pratham) ನಿರ್ದೇಶನ ಮಾಡುವುದರ ಜೊತೆಗೆ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Jan 30, 2023 05:25 PM