ಕೊಪ್ಳಳ: ಪಂಚರತ್ನ ಯಾತ್ರೆ ಕೊಪ್ಪಳ ಜಿಲ್ಲೆಯನ್ನು ಪ್ರವೇಶಿಸಿದೆ ಮತ್ತು ಹೆಚ್ ಡಿ ಕುಮಾರಸ್ವಾಮಿ (HD Kumaraswamy) ನೇತೃತ್ವದ ಯಾತ್ರೆ ತಾವರೆಗೆರೆ ತಲುಪಿದ ಬಳಿಕ ಮಾಜಿ ಮುಖ್ಯಮಂತ್ರಿಗಳು ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತಾಡಿದರು. ಇಲ್ಲೂ ಕುಮಾರಸ್ವಾಮಿ ಅವರು ಪಕ್ಷವನ್ನು ವಿಸರ್ಜಿಸುವ (dissolve) ಮಾತಾಡಿ ಜನರಲ್ಲಿ ಗೊಂದಲ ಮೂಡಿಸಿದರು. ತಮ್ಮ ಪಕ್ಷಕ್ಕೆ 5-ವರ್ಷ ಅಧಿಕಾರ ನಡೆಸುವ ಅವಕಾಶ ನೀಡಿದರೆ ರೈತ ಕುಟುಂಬಗಳು ಮಾತ್ರವಲ್ಲದೆ ಬಡ ಕೂಲಿ ಕಾರ್ಮಿಕರ (Labourer) ಮಾಸಿಕ ಆದಾಯವನ್ನು ಕನಿಷ್ಟ 15,000 ಮಾಡುವುದಾಗಿ ಹೇಳಿ ಅದು ತಮ್ಮಿಂದ ಸಾಧ್ಯವಾಗದಿದ್ದರೆ ಪಕ್ಷ ವಿಸರ್ಜಿಸುವುದಾಗಿ ಹೇಳುತ್ತಾರೆ. ಅವರು ಹತಾಷೆಯಲ್ಲಿ ಪಕ್ಷವನ್ನು ವಿಸರ್ಜಿಸಿದರೆ ರಾಜ್ಯದ ಬಡ ಜನತೆಗೆ ಅಗುವ ಲಾಭ ನಷ್ಟವಾದರೂ ಏನು? ಕುಮಾರಸ್ವಾಮಿಯೇ ಹೇಳಬೇಕು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ