ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಮಾತಾಡುವ ಅರ್ಹತೆ ಮತ್ತು ನೈತಿಕತೆ ರಮೇಶ್ ಜಾರಕಿಹೊಳಿಗಿಲ್ಲ: ಯುವ ಕಾಂಗ್ರೆಸ್

ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಮಾತಾಡುವ ಅರ್ಹತೆ ಮತ್ತು ನೈತಿಕತೆ ರಮೇಶ್ ಜಾರಕಿಹೊಳಿಗಿಲ್ಲ: ಯುವ ಕಾಂಗ್ರೆಸ್

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 30, 2023 | 7:20 PM

ರಮೇಶ್ ಬಳಿ ದಾಖಲೆಗಳಿದ್ದರೆ ಸಿಬಿಐ ಗೆ ಒಪ್ಪಿಸಲಿ ಅಂತ ಶಿವಕುಮಾರ ಅವರೇ ಹೇಳಿದ್ದಾರೆ. ಸರ್ಕಾರ ಅವರದ್ದೇ ಇರುವಾಗ ರಮೇಶ್ ಮಾಡುತ್ತಿರುವ ಆರೋಪಗಳನ್ನು ಸಿಬಿಐ ತನಿಖೆಗೆ ಒಪ್ಪಿಸಲು ಏನು ಧಾಡಿ? ಎಂದು ಯುವ ಮುಖಂಡ ಹೇಳಿದರು.

ಬೆಂಗಳೂರು: ಅತ್ತ ಬೆಳಗಾವಿಯ ಗೋಕಾಕ್ ನಲ್ಲಿ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ (Ramesh Jarkiholi) ಸುದ್ದಿಗೋಷ್ಟಿಯೊಂದನ್ನು ನಡೆಸಿ ಡಿಕೆ ಶಿವಕುಮಾರ್ (DK Shivakumar) ಮತ್ತು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ವಿರುದ್ಧ ಆಪಾದನೆಗಳ ಸುರಿಮಳೆಗೈದರೆ ಇತ್ತ ಬೆಂಗಳೂರಲ್ಲಿ ಯುವ ಕಾಂಗ್ರೆಸ್ ಮುಖಂಡರು ಜಾರಕಿಹೊಳಿ ವಿರುದ್ಧ ಪ್ರತಿಭಟನೆ ನಡೆಸಿದರು. ಮಾಧ್ಯಮಗಳೊಂದಿಗೆ ಮಾತಾಡಿದ ಯುವ ಮುಖಂಡರೊಬ್ಬರು, ತಮ್ಮ ಅಧ್ಯಕ್ಷರ ವಿರುದ್ಧ ಮಾತಾಡುವ ಅರ್ಹತೆ ಮತ್ತು ನೈತಿಕತೆ ರಮೇಶ್ ಜಾರಕಿಹೊಳಿ ಅವರಿಗಿಲ್ಲ. ಯಾಕೆಂದರೆ, ಸಿಡಿ ಪ್ರಕರಣದಲ್ಲಿ ಖುದ್ದು ಅವರೇಸ ಸಿಡಿಯಲ್ಲಿ ಯುವತಿಯೊಂದಿಗಿದ್ದಿದ್ದು ತಾನೇ ಅಂತ ಅವರು ಕೋರ್ಟ್ ಮುಂದೆ ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು. ರಮೇಶ್ ಬಳಿ ದಾಖಲೆಗಳಿದ್ದರೆ ಸಿಬಿಐ ಗೆ ಒಪ್ಪಿಸಲಿ ಅಂತ ಶಿವಕುಮಾರ ಅವರೇ ಹೇಳಿದ್ದಾರೆ. ಸರ್ಕಾರ ಅವರದ್ದೇ ಇರುವಾಗ ರಮೇಶ್ ಮಾಡುತ್ತಿರುವ ಆರೋಪಗಳನ್ನು ಸಿಬಿಐ ತನಿಖೆಗೆ ಒಪ್ಪಿಸಲು ಏನು ಧಾಡಿ? ಎಂದು ಯುವ ಮುಖಂಡ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ