ಬುಧವಾರ ರಾತ್ರಿ ಸುರಿದ ಭಾರಿ ಮಳೆ; ರಾಷ್ಟ್ರೀಯ ಹೆದ್ದಾರಿ-48 ತುಮಕೂರು ಬಳಿ ಸಂಪೂರ್ಣ ಜಲಾವೃತ

Edited By: ಅರುಣ್​ ಕುಮಾರ್​ ಬೆಳ್ಳಿ

Updated on: Oct 20, 2022 | 2:31 PM

ಹೆದ್ದಾರಿಗೆ ಹತ್ತಿರದಲ್ಲಿರುವ ಕೆರೆಗಳೆಲ್ಲ ಉಕ್ಕಿ ಹರಿಯುತ್ತಿರುವುದರಿಂದ ಹೆದ್ದಾರಿಯ ಒಂದು ಭಾಗ ಸಂಪೂರ್ಣವಾಗಿ ಜಲಾವೃತಗೊಂಡಿದೆ.

ತುಮಕೂರು:  ಘಾತಕ ಮಳೆ ಈ ವರ್ಷ ಎಡೆಬಿಡದೆ ಕಾಡುತ್ತಿದೆ ಮಾರಾಯ್ರೇ. ಬುಧವಾರ ರಾಜ್ಯದ ಹಲವಾರು ಭಾಗಗಳಲ್ಲಿ ಧಾರಾಕಾರವಾಗಿ ಮಳೆ ಸುರಿದಿದೆ. ವಿಡಿಯೋನಲ್ಲಿ ನಿಮಗೆ ಕಾಣುತ್ತಿರೋದು ತುಮಕೂರು ಮೂಲಕ ಹಾದುಹೋಗುವ ಪುಣೆ-ಬೆಂಗಳೂರು 48 (Pune-Bengaluru) ರಾಷ್ಟ್ರೀಯ ಹೆದ್ದಾರಿ. ಹೆದ್ದಾರಿಗೆ (highway) ಹತ್ತಿರದಲ್ಲಿರುವ ಕೆರೆಗಳೆಲ್ಲ ಉಕ್ಕಿ ಹರಿಯುತ್ತಿರುವುದರಿಂದ ಹೆದ್ದಾರಿಯ ಒಂದು ಭಾಗ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಹಂಚಿಹಳ್ಳಿ, ಹೆಬ್ಬಾಕ ಮೊದಲಾದ ಗ್ರಾಮಗಳಲ್ಲಿನ ಜಮೀನುಗಳಿಗೂ ಕೆರೆ ನೀರು ನುಗ್ಗಿ ನೂರಾರು ಎಕರೆಯಲ್ಲಿ ಬೆಳೆದ ಪೈರು ಸರ್ವನಾಶಗೊಂಡಿದೆ.

Loading...
Unable to load recommendations.
Follow Us
TV9 Web

TV9 Kannada

Read More