Jaggesh: ಜಗ್ಗೇಶ್ ಪುತ್ರನಿಗೆ ಕಾರು ಅಪಘಾತ ಯಾಕೆ ಆಯ್ತು? ಮೊದಲ ಬಾರಿ ಮಾತಾಡಿದ ‘ನವರಸ ನಾಯಕ’
Navarasa Nayaka Jaggesh | Yathiraj Jaggesh: ‘ಆಚೆ ಹೋಗೋದು ಬೇಡ ಅಂತ ಯತಿರಾಜ್ಗೆ ಹೇಳಿದ್ದೆ. ಆತ ಸಿಟ್ಟು ಮಾಡಿಕೊಂಡಿದ್ದ’ ಎಂದು ಜಗ್ಗೇಶ್ ಹೇಳಿದ್ದಾರೆ. ಮಗನ ಕಾರು ಅಪಘಾತದ ಕುರಿತು ಅವರು ಪ್ರತಿಕ್ರಿಯೆ ನೀಡಿದ್ದಾರೆ.
2021ರಲ್ಲಿ ಜಗ್ಗೇಶ್ ಪುತ್ರ ಯತಿರಾಜ್ (Yathiraj Jaggesh) ಚಲಿಸುತ್ತಿದ್ದ ಕಾರು ಅಪಘಾತಕ್ಕೆ ಒಳಗಾಗಿತ್ತು. ಅದೃಷ್ಟವಶಾತ್ ಯತಿರಾಜ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಘಟನೆ ಕುರಿತಂತೆ ಜಗ್ಗೇಶ್ ಅವರು ಸಾರ್ವಜನಿಕವಾಗಿ ಮಾತನಾಡಿರಲಿಲ್ಲ. ಈಗ ಅವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಯತಿರಾಜ್ ಗ್ರಹಗತಿ ಚೆನ್ನಾಗಿ ಇರಲಿಲ್ಲ. ಆಚೆ ಹೋಗೋದು ಬೇಡ ಅಂತ ಹೇಳಿದ್ದೆ. ಅದನ್ನು ಆತ ನಂಬಿರಲಿಲ್ಲ. ಕಾರು ತಗೊಂಡು ಹೋದ. ದೊಡ್ಡ ಗಂಡಾಂತರ ಆಯಿತು. ರಾಯರು ಅವನನ್ನು ಕಾಪಾಡಿದರು. ಆ ಗಾಡಿಯನ್ನು ನಾವು ತೂಕಕ್ಕೆ ಹಾಕಿದ್ವಿ’ ಎಂದು ಜಗ್ಗೇಶ್ (Jaggesh) ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Nov 18, 2022 09:34 AM