Daily Devotional: ನವರಾತ್ರಿ ಐದನೇ ದಿನ ಸ್ಕಂದ ಮಾತೆಯ ಆರಾಧನೆ ಮಹತ್ವ ತಿಳಿಯಿರಿ
ನವರಾತ್ರಿಯ ಐದನೇ ದಿನ ಸ್ಕಂದಮಾತಾ ದೇವಿಯನ್ನು ಪೂಜಿಸಲಾಗುತ್ತದೆ. ಸ್ಕಂದಮಾತಾ ದೇವಿಯನ್ನು ಆರಾಧಿಸುವುದು ಹೇಗೆ? ಆರಾಧನ ಮಂತ್ರ ಯಾವುದು? ಸ್ಕಂದಮಾತಾ ದೇವಿ ವಿಶೇಷತೆ ಏನು ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.
ನವರಾತ್ರಿಯ ಐದನೇ ದಿನ ಸ್ಕಂದಮಾತಾ ದೇವಿಯನ್ನು ಪೂಜಿಸಲಾಗುತ್ತದೆ. ಸುಬ್ರಹ್ಮಣ್ಯನ ಜನನಕ್ಕೆ ಕಾರಣವಾದ ದೇವಿಯು ಈಕೆ. ಸಿಂಹಾಸನವನ್ನು ಏರಿ ಶಾಂತಸ್ಥಿತಿಯಲ್ಲಿ ಇದ್ದು, ಕೈಗಳಲ್ಲಿ ಕಮಲವನ್ನು ಹಿಡಿದಿದ್ದಾಳೆ. ಸ್ಕಂದನನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡಿದ್ದಾಳೆ. ಹಾಗೆಯೇ ಇಂದು ಕಾತ್ಯಾಯಿನಿಯನ್ನು ಆರಾಧಿಸುವ ದಿನ. ಖಡ್ಗ ಹಾಗೂ ಕಮಲವನ್ನು ಕೈಯಲ್ಲಿ ಧರಿಸಿದ ಮಾತೆ ಇವಳು. ಶತ್ರು ಸಂಹಾರವನ್ನು ಮಾಡಿ ಪ್ರಶಾಂತಚಿತ್ತಳಾಗಿ ಇದ್ದಾಳೆ. ಇವರ ಆರಾಧನೆಯಿಂದ ಸಂಪತ್ತುಗಳು ಸಿಗುತ್ತವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ