Video: ಚೆನ್ನೈ ಏರ್ ಶೋ, ಉಸಿರುಗಟ್ಟಿ 5 ಮಂದಿ ಸಾವು, 200ಕ್ಕೂ ಅಧಿಕ ಮಂದಿ ಅಸ್ವಸ್ಥ
ಭಾರತೀಯ ವಾಯುಪಡೆಯ 92ನೇ ವಾರ್ಷಿಕೋತ್ಸವದ ನೆನಪಿನಲ್ಲಿ ಚೆನ್ನೈನಲ್ಲಿ ಏರ್ ಶೋ ಆಯೋಜಿಸಿತ್ತು. ಉಸಿರುಗಟ್ಟಿ ಐವರು ಸಾವನ್ನಪ್ಪಿದ್ದು, 200ಕ್ಕೂ ಅಧಿಕ ಮಂದಿ ಮೂರ್ಛೆ ಹೋಗಿದ್ದಾರೆ ಎನ್ನಲಾಗುತ್ತಿದೆ. ಏರ್ ಶೋ ವೀಕ್ಷಿಸಲು ಲಕ್ಷಾಂತರ ಜನರು ಜಮಾಯಿಸಿದ್ದರು.
ಭಾರತೀಯ ವಾಯುಪಡೆಯ 92ನೇ ವಾರ್ಷಿಕೋತ್ಸವದ ನೆನಪಿನಲ್ಲಿ ಚೆನ್ನೈನ ಮರೀನಾ ಬೀಚ್ನಲ್ಲಿ ಏರ್ ಶೋ ಆಯೋಜಿಸಿತ್ತು. ಉಸಿರುಗಟ್ಟಿ ಐವರು ಸಾವನ್ನಪ್ಪಿದ್ದು, 200ಕ್ಕೂ ಅಧಿಕ ಮಂದಿ ಮೂರ್ಛೆ ಹೋಗಿದ್ದಾರೆ ಎನ್ನಲಾಗುತ್ತಿದೆ. ಏರ್ ಶೋ ವೀಕ್ಷಿಸಲು ಲಕ್ಷಾಂತರ ಜನರು ಜಮಾಯಿಸಿದ್ದರು. ಭಾರೀ ಜನಸಂದಣಿಯಿಂದಾಗಿ ಜನರಿಗೆ ಉಸಿರುಗಟ್ಟಿತ್ತು ಮತ್ತು ಸುಡುವ ಬಿಸಿಲು ಮತ್ತು ಭಾರೀ ಜನಸಂದಣಿಯಿಂದಾಗಿ ಒಟ್ಟು 230 ಜನರು ಮೂರ್ಛೆ ಹೋಗಿದ್ದಾರೆ. ಈ ಪೈಕಿ 93 ಜನರ ಸ್ಥಿತಿ ಹದಗೆಟ್ಟಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos