ಬಿಮ್ಸ್ ಆಸ್ಪತ್ರೆಯ ಎಡವಟ್ಟುಗಳ ಸರಮಾಲೆ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ..
[lazy-load-videos-and-sticky-control id=”2RhYCDaDwZE”] ಬೆಳಗಾವಿ: ಅದ್ಯಾಕೋ ಏನೋ ಬೆಳಗಾವಿಯ ಬಿಮ್ಸ್ ಆಸ್ಪತ್ರೆ ಆಡಳಿತ ವರ್ಗದ ಎಡವಟ್ಟುಗಳ ಸರಮಾಲೆ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಇದೆ ಬಿಮ್ಸ್ ಆಸ್ಪತ್ರೆಯಲ್ಲಿ 4 ದಿನಗಳ ಹಿಂದೆ ವೃದ್ಧೆಯೊಬ್ಬರು ಸರಿಯಾದ ಚಿಕಿತ್ಸೆ ಸಿಗದ ಕಾರಣ ಮೃತ ಪಟ್ಟಿದರು. ಜೊತೆಗೆ 2 ದಿನಗಳ ಹಿಂದೆ ಯುವತಿಯೊಬ್ಬರು ಸರಿಯಾದ ಚಿಕಿತ್ಸೆಯ ಕೊರತೆಯಿಂದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ನೆನ್ನೆ ಸಮಯಕ್ಕೆ ಸರಿಯಾದ ಚಿಕಿತ್ಸೆ ಸಿಗದೆ ವೈದ್ಯರ ನಿರ್ಲಕ್ಷದಿಂದ ಗರ್ಭಿಣಿಯೊಬ್ಬರು ತಮ್ಮ ಮಗುವನ್ನು ಹೊಟ್ಟೆಯಲ್ಲಿ ಕಳೆದುಕೊಳ್ಳಬೇಕಾಯಿತು. ಇವ್ಯಾವುದೂ ಸಾಲದೆಂಬಂತೆ ಮೊನ್ನೆ ಅಧಿಕಾರಿಗಳ ನಿರ್ಲಕ್ಷದಿಂದ […]
[lazy-load-videos-and-sticky-control id=”2RhYCDaDwZE”]
ಬೆಳಗಾವಿ: ಅದ್ಯಾಕೋ ಏನೋ ಬೆಳಗಾವಿಯ ಬಿಮ್ಸ್ ಆಸ್ಪತ್ರೆ ಆಡಳಿತ ವರ್ಗದ ಎಡವಟ್ಟುಗಳ ಸರಮಾಲೆ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಇದೆ ಬಿಮ್ಸ್ ಆಸ್ಪತ್ರೆಯಲ್ಲಿ 4 ದಿನಗಳ ಹಿಂದೆ ವೃದ್ಧೆಯೊಬ್ಬರು ಸರಿಯಾದ ಚಿಕಿತ್ಸೆ ಸಿಗದ ಕಾರಣ ಮೃತ ಪಟ್ಟಿದರು. ಜೊತೆಗೆ 2 ದಿನಗಳ ಹಿಂದೆ ಯುವತಿಯೊಬ್ಬರು ಸರಿಯಾದ ಚಿಕಿತ್ಸೆಯ ಕೊರತೆಯಿಂದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.
ನೆನ್ನೆ ಸಮಯಕ್ಕೆ ಸರಿಯಾದ ಚಿಕಿತ್ಸೆ ಸಿಗದೆ ವೈದ್ಯರ ನಿರ್ಲಕ್ಷದಿಂದ ಗರ್ಭಿಣಿಯೊಬ್ಬರು ತಮ್ಮ ಮಗುವನ್ನು ಹೊಟ್ಟೆಯಲ್ಲಿ ಕಳೆದುಕೊಳ್ಳಬೇಕಾಯಿತು. ಇವ್ಯಾವುದೂ ಸಾಲದೆಂಬಂತೆ ಮೊನ್ನೆ ಅಧಿಕಾರಿಗಳ ನಿರ್ಲಕ್ಷದಿಂದ ಶವಗಳು ಅದಲು ಬದಲಾಗಿ ಶವಗಳ ಸಂಬಂಧಿಕರು ಪೇಚಾಡುವಂತ್ತಾಯಿತು.
ಇಷ್ಟೆಲ್ಲಾ ತಪ್ಪುಗಳಿಂದ ಬುದ್ಧಿ ಕಲಿಯದ ಆಡಳಿತ ಮಂಡಳಿ ಕೊರೊನಾ ಸೋಂಕಿತರ ಮೇಲೆ ಸರಿಯಾಗಿ ನಿಗಾವಹಿಸದೆ ಅವರನ್ನು ಆಸ್ಪತ್ರೆಯ ಆವರಣದಲ್ಲಿ ಬಿಂದಾಸ್ ಆಗಿ ಒಡಾಡಲು ಬಿಟ್ಟಿದ್ದಾರೆ. ಹಾಗೂ ಸೋಂಕಿತರು ತಮ್ಮ ಸಂಬಂಧಿಕರ ಜೊತೆ ಗುಂಪುಗುಂಪಾಗಿ ನಿಂತು ಮಾತನಾಡುತ್ತಿದ್ದರು ಸಹ ಆಸ್ಪತ್ರೆಯ ಸಿಬ್ಬಂದಿಗಳು ಕಂಡು ಕಾಣದಂತಿದ್ದಾರೆ.
ಜೊತೆಗೆ ಸೋಂಕಿತರು ಇರುವ ಕಟ್ಟಡದ ಪಕ್ಕದಲ್ಲಿಯೇ ಇನ್ನೊಂದು ಕಟ್ಟಡದ ಕಾಮಗಾರಿ ನಡೆಯುತ್ತಿದ್ದು ಕಟ್ಟಡ ಕಾರ್ಮಿಕರ ಅಕ್ಕಪಕ್ಕದಲ್ಲಿಯೇ ಸೋಂಕಿತರು ರಾಜಾರೋಷವಾಗಿ ಓಡಾಡುತ್ತಿದ್ದಾರೆ.
ಇದ್ಯಾವುದು ಸಾಲದೆಂಬಂತೆ ಸಾಮಾಜಿಕ ಅಂತರ ಮರೆತ ಸಿಬ್ಬಂದಿಗಳು ಕೊರೊನಾ ಸೋಂಕಿತರನ್ನು ಒಂದೇ ಆಂಬುಲೆನ್ಸ್ ನಲ್ಲಿ ನಾಲ್ಕೈದು ಜನರನ್ನು ತುಂಬಿ ಒಂದು ಕಟ್ಟಡದಿಂದ ಇನ್ನೊಂದು ಕಟ್ಟಡಕ್ಕೆ ಸ್ಥಳಾಂತರ ಮಾಡುತ್ತಿದ್ದಾರೆ ಎಂಬ ಆರೋಪವನ್ನು ಸೋಂಕಿತರ ಸಂಬಂಧಿಕರು ಮಾಡುತ್ತಿದ್ದಾರೆ.
Published On - 5:00 pm, Wed, 22 July 20