BBMP ಕೊರೊನಾ ವಾರಿಯರ್ಗೂ ಸಿಗಲಿಲ್ಲ ಆ್ಯಂಬುಲೆನ್ಸ್, ಚಿಕಿತ್ಸೆ!
[lazy-load-videos-and-sticky-control id=”uWKsMM1S7zQ”] ಬೆಂಗಳೂರು: ಕೊರೊನಾ ಕುರುಡು ಕಾಂಚಾಣದಂತೆ ಕೈಗೆ ಸಿಕ್ಕವರ ದೇಹ ಸೇರಿ ಚಿತ್ರ ಹಿಂಸೆ ಕೊಡ್ತಿದೆ. ನಮಗೆ ಕೊರೊನಾದಿಂದ ಯಾವಾಗಪ್ಪ ಮುಕ್ತಿ ಸಿಗೋದು ಎಂದು ಜನ ದೇವರಲ್ಲಿ ಬೇಡಿ ಕೊಳ್ಳುತ್ತಿದ್ದಾರೆ. ಆದರೆ ಇದರ ನಡುವೆ ಕೊರೊನಾದಿಂದ ಜನರನ್ನು ಉಳಿಸಲು ದುಡಿಯುತ್ತಿರುವ ಕೊರೊನಾ ವಾರಿಯರ್ಗೆ ಸಿಲಿಕಾನ್ ಸಿಟಿಯಂತ ದೊಡ್ಡ ನಗರದಲ್ಲೇ ಚಿಕಿತ್ಸೆ ಕೊಡಲು ಸಾಧ್ಯವಾಗುತ್ತಿಲ್ಲ. ಬಿಬಿಎಂಪಿ ಸಿಬ್ಬಂದಿಗಳ ಸ್ಥಿತಿಯೇ ಹೀಗಾದ್ರೆ, ಇನ್ನು ಸಾಮಾನ್ಯ ಜನರ ಗತಿ ಏನು? ಬಿಬಿಎಂಪಿ ವರ್ಕ್ ಇನ್ಸ್‌ಪೆಕ್ಟರ್‌ಗೆ ಕೊರೊನಾ ಪಾಸಿಟಿವ್ ಎಂದು ಗೊತ್ತಾದ್ರೂ […]
[lazy-load-videos-and-sticky-control id=”uWKsMM1S7zQ”]
ಬೆಂಗಳೂರು: ಕೊರೊನಾ ಕುರುಡು ಕಾಂಚಾಣದಂತೆ ಕೈಗೆ ಸಿಕ್ಕವರ ದೇಹ ಸೇರಿ ಚಿತ್ರ ಹಿಂಸೆ ಕೊಡ್ತಿದೆ. ನಮಗೆ ಕೊರೊನಾದಿಂದ ಯಾವಾಗಪ್ಪ ಮುಕ್ತಿ ಸಿಗೋದು ಎಂದು ಜನ ದೇವರಲ್ಲಿ ಬೇಡಿ ಕೊಳ್ಳುತ್ತಿದ್ದಾರೆ. ಆದರೆ ಇದರ ನಡುವೆ ಕೊರೊನಾದಿಂದ ಜನರನ್ನು ಉಳಿಸಲು ದುಡಿಯುತ್ತಿರುವ ಕೊರೊನಾ ವಾರಿಯರ್ಗೆ ಸಿಲಿಕಾನ್ ಸಿಟಿಯಂತ ದೊಡ್ಡ ನಗರದಲ್ಲೇ ಚಿಕಿತ್ಸೆ ಕೊಡಲು ಸಾಧ್ಯವಾಗುತ್ತಿಲ್ಲ.
ಬಿಬಿಎಂಪಿ ಸಿಬ್ಬಂದಿಗಳ ಸ್ಥಿತಿಯೇ ಹೀಗಾದ್ರೆ, ಇನ್ನು ಸಾಮಾನ್ಯ ಜನರ ಗತಿ ಏನು? ಬಿಬಿಎಂಪಿ ವರ್ಕ್ ಇನ್ಸ್‌ಪೆಕ್ಟರ್‌ಗೆ ಕೊರೊನಾ ಪಾಸಿಟಿವ್ ಎಂದು ಗೊತ್ತಾದ್ರೂ ಆ್ಯಂಬುಲೆನ್ಸ್ ಸಿಗುತ್ತಿಲ್ಲ. ರಿಪೋರ್ಟ್ ಕೊಟ್ಟಿಲ್ಲ, ಆ್ಯಂಬುಲೆನ್ಸ್ನಲ್ಲಿ ಕರ್ಕೊಂಡು ಹೋಗಿಲ್ಲ. ಮನೆಯಲ್ಲಿರೋಣ ಅಂದ್ರೆ ಚಿಕ್ಕಮಕ್ಕಳಿದ್ದಾರೆ ಎಂದು ಮನೆಗೂ ಹೋಗೋಕೆ ಆಗದೇ ಸ್ವತಃ ಕೊವೀಡ್ ಪೀಡಿತ ಬಿಬಿಎಂಪಿ ವರ್ಕ್ ಇನ್ಸಪ್ಟೆಕ್ಟರ್ ತಾವೇ ಆಸ್ಪತ್ರೆಗೆ ಹೋಗಿದ್ದಾರೆ.
3-4 ಆಸ್ಪತ್ರೆಗೆ ಸುತ್ತಾಡಿದ್ದಾರೆ. ಆದ್ರೂ ಯಾವ ಆಸ್ಪತ್ರೆಯಲ್ಲೂ ಬೆಡ್ ಸಿಗಲಿಲ್ಲ. ಕೊನೆಗೆ ಕೆಂಗೇರಿ ಖಾಸಗಿ ಆಸ್ಪತ್ರೆಯಲ್ಲಿ 20 ಸಾವಿರ ರೂ ಕೊಟ್ಟು ಅಡ್ಮಿಟ್ ಆಗಿದ್ದಾರೆ. ಬಿಬಿಎಂಪಿ ಸಿಬ್ಬಂದಿಗಳ ಸ್ಥಿತಿಯೇ ಹೀಗಾದ್ರೆ, ಇನ್ನು ಸಾಮಾನ್ಯ ಜನರ ಗತಿ ಏನು? ಎಂಬಂತಾಗಿದೆ.
Published On - 1:24 pm, Wed, 22 July 20