ಒತ್ತಡ ಮತ್ತು ಬೆದರಿಕೆಗಳಿಗೆ ಮಣಿಯಲ್ಲ, ಯಾವುದೇ ಏಜೆನ್ಸಿಯ ತನಿಖೆ ಎದುರಿಸಲು ಸಿದ್ಧ: ಡಾ ಕೆ ಸುಧಾಕರ್, ಮಾಜಿ ಸಚಿವ

|

Updated on: Aug 28, 2023 | 5:24 PM

ಆದರೆ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗ ಹೆಚ್ ಡಿ ಕುಮಾರಸ್ವಾಮಿಯವರು ವೈದ್ಯಕೀಯ ಕಾಲೇಜನ್ನು ಚಿಕ್ಕಬಳ್ಳಾಪುರದಿಂದ ರಾಮನಗರಕ್ಕೆ ಸ್ಥಳಾಂತರಿಸಿದರು. ಬಳಿಕ ಬಿಎಸ್ ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬಂದಾಗ ಪುನಃ ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರಿಸಲಾಯಿತು. ಅದಕ್ಕಾಗಿ ಭಾರಿ ಪ್ರಮಾಣದ ಕಟ್ಟಡಗಳು ನಿರ್ಮಾಣವಾಗಿದ್ದರೂ ಈಗ ಸಿದ್ದರಾಮಯ್ಯ ಸರ್ಕಾರ ಕಾಲೇಜನ್ನು ರಾಮನಗರದ ಕನಕಪುರಕ್ಕೆ ಕೊಂಡ್ಯೊಯ್ದಿದೆ ಅಂತ ಸುಧಾಕರ್ ಹೇಳಿದರು.

ಬೆಂಗಳೂರು: ಬಿಜೆಪಿ ಸರ್ಕಾರ ಅಧಿಕಾರಲ್ಲಿದ್ದಾಗ ತಾನು ಯಾವ ತಪ್ಪೂ ಮಾಡಿರದ ಕಾರಣ, ಒತ್ತಡಕ್ಕೆ ಮಣಿಯುವ ಅವಶ್ಯಕತೆಯಿಲ್ಲ ಮತ್ತು ಹೆದರುವ ಅವಶ್ಯಕತೆಯೂ ಇಲ್ಲ ಎಂದು ಮಾಜಿ ಸಚಿವ ಡಾ ಕೆ ಸುಧಾಕರ್ (Dr K Sudhakar) ಹೇಳಿದರು. ನಗದರದಲ್ಲಿಂದು ಸುದ್ದಿಗಾರರೊಂದಿಗೆ ಮಾತಾಡಿದ ಅವರು ಕೋವಿಡ್ (pandemic) ಸಂದರ್ಭದಲ್ಲಿ ಅವ್ಯವಹಾರಗಳು ನಡೆದಿವೆ ಅಂತ ಇಲ್ಲಸಲ್ಲದ ಅರೋಪಗಳನ್ನು ತಮ್ಮ ವಿರುದ್ಧ ಮಾಡಲಾಗುತ್ತಿದೆ. ಸೋಂಕಿತರನ್ನು ಟ್ರೀಟ್ ಮಾಡುತ್ತಿದ್ದ ಎಷ್ಟೋ ವೈದ್ಯರು ಮತ್ತು ನರ್ಸ್ ಗಳು ಸಹ ಪ್ರಾಣ ತ್ಯಜಿಸಿದ್ದಾರೆ, ಅದಕ್ಕೆಲ್ಲ ತಮ್ಮನ್ನು ಹೊಣೆ ಮಾಡಲಾಗುತ್ತಾ? ಕಾಂಗ್ರೆಸ್ ಸರ್ಕಾರ ಯಾವ ಏಜೆನ್ಸಿಯಿಂದಾದರೂ ತನಿಖೆ ಮಾಡಿಸಲಿ, ಎದುರಿಸಲು ಸಿದ್ಧಾನಿರುವುದಾಗಿ ಡಾ ಸುಧಾಕರ್ ಹೇಳಿದರು. ಮೆಡಿಕಲ್ ಕಾಲೇಜು ವಿವಾದದ ಬಗ್ಗೆ ಮಾತಾಡಿದ ಸುಧಾಕರ್, ಸಿದ್ದರಾಮಯ್ಯ (Siddaramaiah) ಮೊದಲ ಬಾರಿ ಮುಖ್ಯಮಂತ್ರಿಯಾದ ಅವಧಿಯಲ್ಲೇ ಅದನ್ನು ಚಿಕ್ಕಬಳ್ಳಾಪುರಕ್ಕೆ ನೀಡಿದ್ದರು. ಆದರೆ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗ ಹೆಚ್ ಡಿ ಕುಮಾರಸ್ವಾಮಿಯವರು ವೈದ್ಯಕೀಯ ಕಾಲೇಜನ್ನು ಚಿಕ್ಕಬಳ್ಳಾಪುರದಿಂದ ರಾಮನಗರಕ್ಕೆ ಸ್ಥಳಾಂತರಿಸಿದರು. ಬಳಿಕ ಬಿಎಸ್ ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬಂದಾಗ ಪುನಃ ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರಿಸಲಾಯಿತು. ಅದಕ್ಕಾಗಿ ಭಾರಿ ಪ್ರಮಾಣದ ಕಟ್ಟಡಗಳು ನಿರ್ಮಾಣವಾಗಿದ್ದರೂ ಈಗ ಸಿದ್ದರಾಮಯ್ಯ ಸರ್ಕಾರ ಕಾಲೇಜನ್ನು ರಾಮನಗರದ ಕನಕಪುರಕ್ಕೆ ಕೊಂಡ್ಯೊಯ್ದಿದೆ ಅಂತ ಸುಧಾಕರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ