ಲೋಕ ಸಭಾ ಚುನಾವಣೆಗೆ ಮೊದಲು ರಾಜ್ಯದಲ್ಲಿ ಬಿಜೆಪಿ ಒಂದು ದುರ್ಬಲ ಪಕ್ಷವೆಂದು ತೋರಿಸುವ ಹುನ್ನಾರ ಕಾಂಗ್ರೆಸ್ ಪಕ್ಷದ್ದು: ಬಸನಗೌಡ ಪಾಟೀಲ್ ಯತ್ನಾಳ್
ಕಾಂಗ್ರೆಸ್ ಪಕ್ಷದ ಉದ್ದೇಶ ಸ್ಪಷ್ಟವಾಗಿದೆ. ಲೋಕ ಸಭಾ ಚುನಾವಣೆಗೆ ಮೊದಲು ಕರ್ನಾಟಕದಲ್ಲಿ ಬಿಜೆಪಿಯನ್ನು ಆಧೀರಗೊಳಿಸಬೇಕು, ಅದೊಂದು ದುರ್ಬಲಗೊಂಡಿರುವ ಮತ್ತು ನಾಶದ ಅಂಚಿನಲ್ಲಿರುವ ಪಕ್ಷ ಎಂಬಂಥ ಸ್ಥಿತಿ ನಿರ್ಮಾಣ ಮಾಡಬೇಕು, ಈ ಹುನ್ನಾರದಲ್ಲಿ ಅದು ಸಕ್ರಿಯವಾಗಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ವಿಜಯಪುರ: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal), ರೇಣುಕಾಚಾರ್ಯ (MP Renukacharya) ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸದೆ, ಕಾಂಗ್ರೆಸ್ ಪಕ್ಷದವರು ಗೊಂದಲದಲ್ಲಿದ್ದಾರೆ ಎಂದು ಹೇಳಿದರು. ಸಿದ್ದರಾಮಯ್ಯ ಸರ್ಕಾರಕ್ಕೆ (Siddaramaiah Government) ಸ್ಪಷ್ಟ 135 ಸೀಟುಗಳ ಸ್ಪಷ್ಟ ಬಹುಮತವಿದ್ದರೂ ಲೋಕ ಸಭೆ ಚುನಾವಣೆಗೆ ಮೊದಲು ಅಥವಾ ನಂತರ ಏನಾದರೂ ಸಂಭವಿಸಲಿದೆ ಎಂಬ ಆತಂಕದಲ್ಲಿದೆ. ಅದೇ ಕಾರಣಕ್ಕೆ ಬಿಜೆಪಿ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ ಎಂದು ಯತ್ನಾಳ್ ಹೇಳಿದರು. ಕಾಂಗ್ರೆಸ್ ಪಕ್ಷದ ಉದ್ದೇಶ ಸ್ಪಷ್ಟವಾಗಿದೆ. ಲೋಕ ಸಭಾ ಚುನಾವಣೆಗೆ ಮೊದಲು ಕರ್ನಾಟಕದಲ್ಲಿ ಬಿಜೆಪಿಯನ್ನು ಆಧೀರಗೊಳಿಸಬೇಕು, ಅದೊಂದು ದುರ್ಬಲಗೊಂಡಿರುವ, ನಾಶದ ಅಂಚಿನಲ್ಲಿರುವ ಪಕ್ಷ ಎಂಬಂಥ ಸ್ಥಿತಿ ನಿರ್ಮಾಣ ಮಾಡಬೇಕು, ಈ ಹುನ್ನಾರದಲ್ಲಿ ಅದು ಸಕ್ರಿಯವಾಗಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ