Kalaburagi News: ಕಮಲಾಪುರ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿನಿಯರನ್ನು ಬಸ್ಸಲ್ಲಿ ಹತ್ತಿಸಿಕೊಳ್ಳದೆ ಎನ್​ಇಕೆಅರ್​ಟಿಸಿ ಚಾಲಕನ ದುರ್ವರ್ತನೆ!

ಅರುಣ್​ ಕುಮಾರ್​ ಬೆಳ್ಳಿ

Updated on: Jul 26, 2023 | 2:29 PM

ಡಿವಿಜನಲ್ ಕಂಟ್ರೋಲರ್ ಚಾಲಕನ ವಿರುದ್ಧ ಶಿಸ್ತಿನ ಕ್ರಮ ಜರುಗಿಸುವಂತೆ ಸಂಬಂಧಪಟ್ಟ ಡಿಪೋ ಮ್ಯಾನೇಜರ್ ಗೆ ನಿರ್ದೇಶನ ನೀಡಿದರೆ ಅವನು ತನ್ನ ವರ್ತನೆಯನ್ನು ಸುಧಾರಿಸಿಕೊಳ್ಳಬಹುದು.

ಕಲಬುರಗಿ: ಈಶಾನ್ಯ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ (divisional controller) ಈ ವಿಡಿಯೋವನ್ನು ವೀಕ್ಷಿಸುವ ಅವಶ್ಯಕತೆಯಿದೆ. ಇಲ್ಲೊಬ್ಬ ಚಾಲಕ (driver) ಜಿಲ್ಲೆಯ ಕಮಲಾಪುರ ಬಸ್ ನಿಲ್ದಾಣದಲ್ಲಿ (Kamalapur bus stop) ಅಕ್ಷರಶಃ ಗೂಂಡಾ ಹಾಗೆ ವರ್ತಿಸುತ್ತಿದ್ದಾನೆ. ಅವನೊಂದಿಗೆ ಮಾತಾಡುತ್ತಿರುವರು ಶಾಲೆಯೊಂದರ ಶಿಕ್ಷಕ. ಚಾಲಕ ವಿದ್ಯಾರ್ಥಿನಿಯರನ್ನು ಬಸ್ಸಲ್ಲಿ ಹತ್ತಿಸಿಕೊಳ್ಳದ ಕಾರಣವನ್ನು ಶಿಕ್ಷಕ ಕೇಳುತ್ತಿದ್ದಾರೆ ಮತ್ತು ಸೌಜನ್ಯತೆಯಿಂದಲೇ ಮಾತಾಡುತ್ತಿದ್ದಾರೆ. ಆದರೆ, ಚಾಲಕ-ಅವನ ಹೆಸರು ಗೊತ್ತಾಗಿಲ್ಲ ಒಬ್ಬ ರೌಡಿಯಂತೆ ಮತಾಡುತ್ತಿದ್ದಾನೆ. ಶಿಕ್ಷಕರ ಹಿಂದೆ ಹಲವಾರು ವಿದ್ಯಾರ್ಥಿನಿಯರು ಸುಮ್ಮನೆ ನಿಂತುಕೊಂಡು ಚಾಲಕನ ದುರ್ವತನೆ ವೀಕ್ಷಿಸುತ್ತಿದ್ದಾರೆ. ಯುವಕನೊಬ್ಬ ಮೆತ್ತಗೆ ಮಾತಾಡುವಂತೆ ಚಾಲಕನಿಗೆ ಹೇಳಿದರೆ ಅವನು ದರ್ಪದಿಂದ ನನ್ನ ಧ್ವನಿ ಇರೋದೇ ಹೀಗೆ, ನಾನು ಮಾತಾಡೋದೇ ಹೀಗೆ ಅನ್ನುತ್ತಾನೆ. ಡಿವಿಜನಲ್ ಕಂಟ್ರೋಲರ್ ಚಾಲಕನ ವಿರುದ್ಧ ಶಿಸ್ತಿನ ಕ್ರಮ ಜರುಗಿಸುವಂತೆ ಸಂಬಂಧಪಟ್ಟ ಡಿಪೋ ಮ್ಯಾನೇಜರ್ ಗೆ ನಿರ್ದೇಶನ ನೀಡಿದರೆ ಅವನು ತನ್ನ ವರ್ತನೆಯನ್ನು ಸುಧಾರಿಸಿಕೊಳ್ಳಬಹುದು.
.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.