ಶಿವಸೇನೆ ಕಿಚ್ಚು: ಪರ್ಮಿಟ್ ಇಲ್ಲದೇ ಕರ್ನಾಟಕ ಬಸ್‌ಗಳು ಓಡಾಡ್ತಿವೆ ಎಂದು ಕ್ಯಾತೆ ತೆಗೆದ ಮಹಾರಾಷ್ಟ್ರ! MSRTC ಯಿಂದ NWKRTC ಧಮ್ಕಿ ಪತ್ರ..
ಪ್ರಯಾಣಿಕರು ಮಹಾರಾಷ್ಟ್ರ ಬಸ್ ಹತ್ತದೇ ಕರ್ನಾಟಕ ಬಸ್ನಲ್ಲಿ ಪ್ರಯಾಣಿಸುತ್ತಿರುವುದಕ್ಕೆ ಶಿವಸೇನೆ ಕೆಂಡಾಮಂಡಲವಾಗಿದೆ. ಇದನ್ನು ಸಹಿಸಿಕೊಳ್ಳಲಾಗದೆ ಪತ್ರ ಬರೆದಿದೆ. ಶಿವಸೇನೆ ಪತ್ರ ಆಧರಿಸಿ ಮಹಾರಾಷ್ಟ್ರ ಸಾರಿಗೆ ಸಂಸ್ಥೆ (MSRTC), ಚಿಕ್ಕೋಡಿ ವಿಭಾಗೀಯ ನಿಯಂತ್ರಣಾಧಿಕಾರಿಗೆ (NWKRTC) ಧಮ್ಕಿ ಪತ್ರ ರವಾನಿಸಿದೆ.
ಬೆಳಗಾವಿ: ಗಡಿ ವಿವಾದ ಕೆಣಕುತ್ತಿದ್ದ ಶಿವಸೇನೆಯಿಂದ ಮತ್ತೊಂದು ಹೊಸ ಕ್ಯಾತೆ ಶುರುವಾಗಿದೆ. ಪ್ರಯಾಣಿಕರು ಮಹಾರಾಷ್ಟ್ರ ಬಸ್ ಹತ್ತದೇ ಕರ್ನಾಟಕ ಬಸ್ನಲ್ಲಿ ಪ್ರಯಾಣಿಸುತ್ತಿರುವುದಕ್ಕೆ ಶಿವಸೇನೆ ಕೆಂಡಾಮಂಡಲವಾಗಿದೆ. ಇದನ್ನು ಸಹಿಸಿಕೊಳ್ಳಲಾಗದೆ ಪತ್ರ ಬರೆದಿದೆ. ಶಿವಸೇನೆ ಪತ್ರ ಆಧರಿಸಿ ಮಹಾರಾಷ್ಟ್ರ ಸಾರಿಗೆ ಸಂಸ್ಥೆ (MSRTC), ಚಿಕ್ಕೋಡಿ ವಿಭಾಗೀಯ ನಿಯಂತ್ರಣಾಧಿಕಾರಿಗೆ (NWKRTC) ಧಮ್ಕಿ ಪತ್ರ ರವಾನಿಸಿದೆ.
ಮಹಾರಾಷ್ಟ್ರ ಸಾರಿಗೆ ಸಂಸ್ಥೆಯ ಸಾಂಗ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ, ಪರ್ಮಿಟ್ ಇಲ್ಲದ NWKRTC ಬಸ್‌ಗಳು (ವಾಯವ್ಯ ಸಾರಿಗೆ) ಮಹಾರಾಷ್ಟ್ರಕ್ಕೆ ಬರುತ್ತಿವೆ ಎಂದು ಪತ್ರದಲ್ಲಿ ತಿಳಿಸಿದ್ದು ಹೊಸ ಕ್ಯಾತೆ ಶುರು ಮಾಡಿದ್ದಾರೆ. ಇದರಿಂದ ಮಹಾರಾಷ್ಟ್ರ ಸಾರಿಗೆ ಸಂಸ್ಥೆಯ ಬಸ್‌ಗಳಿಗೆ ಹಾನಿಯಾಗ್ತಿದೆ. ಸಾಂಗ್ಲಿ ಜಿಲ್ಲೆಯ ಮಿರಜ್‌ನ ಶಾಸ್ತ್ರಿ ವೃತ್ತದಲ್ಲಿ ನಿಲುಗಡೆ ಇಲ್ಲದಿದ್ರೂ ಕರ್ನಾಟಕ ಬಸ್‌ಗಳು ನಿಲ್ಲುತ್ತಿವೆ.
ಇದರಿಂದ ಮಹಾರಾಷ್ಟ್ರ ಸಾರಿಗೆ ನಿಗಮಕ್ಕೆ ಹಾನಿ ಎಂದು ಶಿವಸೇನೆ ಕ್ಯಾತೆ ತೆಗೆದಿದೆ. ಈ ಬಗ್ಗೆ ಮಹಾರಾಷ್ಟ್ರ ಸಾರಿಗೆ ನಿಗಮಕ್ಕೆ ಶಿವಸೇನೆ ಪತ್ರ ಬರೆದಿದೆ. ಇನ್ನು ಪರ್ಮಿಟ್ ಇಲ್ಲದೇ ಕರ್ನಾಟಕದ ಬಸ್‌ಗಳು ಮಹಾರಾಷ್ಟ್ರಕ್ಕೆ ಎಂಟ್ರಿ ಆಗುತ್ತಿವೆ ಎಂದು ಆರೋಪಿಸಿದ್ದು ಫೆಬ್ರವರಿ 23ರಂದು ಮಿರಜ್ನಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸುವುದಾಗಿ ಶಿವಸೇನೆ ಪತ್ರದ ಮೂಲಕ ಎಚ್ಚರಿಕೆ ಕೊಟ್ಟಿದೆ.
ಶಿವಸೇನೆ ಪತ್ರ ಆಧರಿಸಿ ಕರ್ನಾಟಕ ಸಾರಿಗೆ ಅಧಿಕಾರಿಗಳಿಗೆ MSRTC ಪತ್ರ ಬರೆದಿದೆ. ಪರ್ಮಿಟ್ ಇಲ್ಲದ ಬಸ್‌ಗಳನ್ನು ಮಹಾರಾಷ್ಟ್ರಕ್ಕೆ ಕಳಿಸಬೇಡಿ ಎಂದು MSRTC, NWKRTCಗೆ ಪತ್ರದಲ್ಲಿ ತಿಳಿಸಿದೆ. ಕರ್ನಾಟಕದ ಬಸ್‌ಗಳಿಗೆ ಶಿವಸೇನೆಯಿಂದ ಹಾನಿಯಾದ್ರೆ ನೀವೆ ಜವಾಬ್ದಾರರು ಎಂಬರ್ಥದಲ್ಲಿ ಪತ್ರ ಬರೆದಿದೆ. ಮಹಾರಾಷ್ಟ್ರ ಸಾರಿಗೆ ಅಧಿಕಾರಿಗಳ ನಡೆಗೆ ಕನ್ನಡಪರ ಹೋರಾಟಗಾರರು ಗರಂ ಆಗಿದ್ದಾರೆ. ಶಿವಸೇನೆ ಪತ್ರದ ಆಧಾರದ ಮೇಲೆ ಅಧಿಕೃತವಾಗಿ ಧಮ್ಕಿ ಪತ್ರ ರವಾನಿಸಿದ್ದಾರೆಂದು ಗರಂ ಆಗಿದ್ದು ಈ ವಿಚಾರವನ್ನು ಸಾರಿಗೆ ಸಚಿವ ಡಿಸಿಎಂ ಲಕ್ಷ್ಮಣ್ ಸವದಿ ಗಂಭೀರವಾಗಿ ಪರಿಗಣಿಸಲು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಶಿವ ಸೇನೆ-ಕಾಂಗ್ರೆಸ್ ನಡುವೆ ಕಿಡಿ ಹಚ್ಚಿದ ‘ಔರಂಗಾಬಾದ್’ ಮರುನಾಮಕರಣ! ಸಂಭಾಜಿನಗರವೇ.. ಅಂತಿಮ ಎಂದ ಸಂಜಯ್ ರಾವತ್
Published On - 10:22 am, Mon, 22 February 21