ನಂದಿಗಿರಿಧಾಮದ ಪ್ರಕೃತಿ ಸೌಂದರ್ಯ ಸವಿಯಲು ಬರೋ ಸವಾರರ ಬಳಿ ದುಪ್ಪಟ್ಟು ಹಣ ವಸೂಲಿ, ಗುತ್ತಿಗೆದಾರನ ಆಟಟೋಪಕ್ಕೆ ಇಲ್ವಾ ಬ್ರೇಕ್?

Nandi Hills | ಅದು ಹೇಳಿ ಕೇಳಿ ಪ್ರಕೃತಿ ಸೌಂದರ್ಯದ ಸುಂದರ ತಾಣ. ರಾಜಧಾನಿ ಬೆಂಗಳೂರಿನಿಂದ ಕೂಗಳತೆ ದೂರದಲ್ಲಿರುವ ಕಾರಣ, ವಿಕೆಂಡ್ ಬಂದ್ರೆ ಸಾಕು, ಬೆಂಗಳೂರಿನ ಜನ ಅಲ್ಲಿಗೆ ಹೋಗಿ ಮಸ್ತ್ ಎಂಜಾಯ್ ಮಾಡ್ತಾರೆ. ಆದ್ರೆ ಆ ಪ್ರವಾಸಿ ತಾಣಕ್ಕೆ ಬರೋ ಬೈಕ್ ಸವಾರರಿಂದ ಅಲ್ಲಿ ಮನಸ್ಸೋ ಇಚ್ಚೆ ಹಣ ವಸೂಲಿ ಮಾಡ್ತಿದ್ದಾರೆ.

  • ಭೀಮಪ್ಪ ಪಾಟೀಲ್
  • Published On - 7:13 AM, 22 Feb 2021
ನಂದಿಗಿರಿಧಾಮದ ಪ್ರಕೃತಿ ಸೌಂದರ್ಯ ಸವಿಯಲು ಬರೋ ಸವಾರರ ಬಳಿ ದುಪ್ಪಟ್ಟು ಹಣ ವಸೂಲಿ, ಗುತ್ತಿಗೆದಾರನ ಆಟಟೋಪಕ್ಕೆ ಇಲ್ವಾ ಬ್ರೇಕ್?
ನಂದಿಗಿರಿಧಾಮದಲ್ಲಿ ಗುತ್ತಿಗೆದಾರ ಸತ್ಯನಾರಾಯಣ, ಹೆಲ್ಮೆಟ್ ಸಂಗ್ರಹ ನೆಪದಲ್ಲಿ ಬೈಕ್ ಸವಾರರಿಂದ ನಿಗದಿಗಿಂತ ಹಣಕ್ಕಿಂತ ಹೆಚ್ಚು ವಸೂಲಿ ಮಾಡುತ್ತಿದ್ದಾರೆ.

ಚಿಕ್ಕಬಳ್ಳಾಪುರ: ರಾಜಧಾನಿ ಬೆಂಗಳೂರಿಗೆ ಹೊಂದಿಕೊಂಡಿರುವ ಚಿಕ್ಕಬಳ್ಳಾಪುರದ ನಂದಿಗಿರಿಧಾಮದ ಪ್ರಕೃತಿ ಸೌಂದರ್ಯ ಸವಿಯಲು ರಾಜಧಾನಿಯ ಜನ ಸೇರಿದಂತೆ ಸಾವಿರಾರು ಪ್ರವಾಸಿಗರು ನಿತ್ಯ ಲಗ್ಗೆ ಇಡ್ತಾರೆ. ಹೀಗೆ ಗಿರಿಧಾಮಕ್ಕೆ ಬರುವ ಬೈಕ್ ಸವಾರ ಪ್ರವಾಸಿಗಳಿಂದ ಗಿರಿಧಾಮದಲ್ಲಿ ಅಕ್ರಮ ವಸೂಲಿ ನಡೆಯುತ್ತೆ ಅನ್ನೋ ಮಾಹಿತಿ ಟಿವಿ9ಗೆ ಸಿಕ್ಕಿತ್ತು. ಈ ಬಗ್ಗೆ ಪರಿಶೀಲನೆ ನಡೆಸಿದಾಗ ಗುತ್ತಿಗೆದಾರ ಸತ್ಯನಾರಾಯಣ, ಹೆಲ್ಮೆಟ್ ಸಂಗ್ರಹ ನೆಪದಲ್ಲಿ ಬೈಕ್ ಸವಾರರಿಂದ ನಿಗದಿಗಿಂತ ಐದಾರು ಪಟ್ಟು ಹೆಚ್ಚು ಹಣ ವಸೂಲಿ ಮಾಡ್ತಿರುವ ದೃಶ್ಯ ಕಂಡು ಬಂತು.

ನಂದಿಗಿರಿಧಾಮದಲ್ಲಿ ಸತ್ಯನಾರಾಯಣ ಅನ್ನೊ ಗುತ್ತಿಗೆದಾರನಿಗೆ ರಾಜ್ಯ ತೋಟಗಾರಿಕೆ ಇಲಾಖೆ, ಗಿರಿಧಾಮಕ್ಕೆ ಬರೋ ಪ್ರವಾಸಿಗಳ ಹೆಲ್ಮೆಟ್‌ ಸಂಗ್ರಹಿಸಿ ನಂತರ ವಾಪಸ್ ಕೊಡಲು ತಲಾ ಐದು ರೂಪಾಯಿ ಹಾಗೂ ಬ್ಯಾಗ್‌ಗೆ ಐದು ರೂಪಾಯಿ ದರ ನಿಗದಿ ಮಾಡಿದೆ. ಆದ್ರೆ ಸತ್ಯನಾರಾಯಣ ಪ್ರವಾಸಿಗಳಿಂದ ಒಂದು ಹೆಲ್ಮೆಟ್ ಹಾಗೂ ಒಂದು ಬ್ಯಾಗ್​ಗೆ 20-30, 40 ರೂಪಾಯಿಯಂತೆ ವಸೂಲಿ ಮಾಡ್ತಿದ್ದಾನೆ. ಸ್ವತಃ ಟಿವಿ9 ಪ್ರತಿನಿಧಿ ಹೆಲ್ಮೆಟ್ ಇಟ್ಟು ವಾಪಸ್ ಪಡೆದಾಗ ಐದು ರೂಪಾಯಿ ಬದಲು 30 ರೂಪಾಯಿ ಹಣ ವಸೂಲಿ ಮಾಡಿದ್ದು, ವಿಡಿಯೊ ರೆಕಾರ್ಡ ಆಗಿದೆ.

ಗಿರಿಧಾಮದಲ್ಲಿ ಈಗಾಗಲೇ ಹೆಜ್ಜೆ ಹೆಜ್ಜೆಗೂ ದುಬಾರಿ ದುನಿಯಾ ಕಾಡ್ತಿದೆ. ಆದ್ರೆ ಗುತ್ತಿಗೆದಾರ ಸರ್ಕಾರ ನಿಗದಿ ಮಾಡಿದ ದರ ಬಿಟ್ಟು ಪ್ರವಾಸಿಗರ ಬ್ಯಾಗ್ ಹಾಗೂ ಹೆಲ್ಮೆಟ್‌ಗೆ ಮನಸ್ಸೊ ಇಚ್ಚೆ ಹಣ ವಸೂಲಿ ಮಾಡ್ತಿದ್ದಾನೆ. ಈ ಗುತ್ತಿಗೆದಾರನ ಆಟಟೋಪಕ್ಕೆ ಸಂಬಂಧ ಪಟ್ಟವರು ಬ್ರೇಕ್ ಹಾಕಬೇಕಿದೆ.

ಇದನ್ನೂ ಓದಿ: ನಂದಿಬೆಟ್ಟದ ಜಾಲಿ ರೈಡ್‌ ತಂದಿಟ್ಟ ಅವಾಂತರ.. ಕಾರುಗಳ ನಡುವೆ ಸರಣಿ ಅಪಘಾತ