AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಂದಿಬೆಟ್ಟದ ಜಾಲಿ ರೈಡ್‌ ತಂದಿಟ್ಟ ಅವಾಂತರ.. ಕಾರುಗಳ ನಡುವೆ ಸರಣಿ ಅಪಘಾತ

ಡಿವೈಡರ್ ಹಾರಿ ಎದುರು ಬದಿಯ ಕಾರಿಗೆ ಕಾರು ಡಿಕ್ಕಿ ಹೊಡೆದು ಅದರ ರಭಸಕ್ಕೆ 5 ಕಾರುಗಳ ನಡುವೆ ಡಿಕ್ಕಿ ಸಂಭವಿಸಿ ಭಾರಿ ಅವಘಡ ನಡೆದಿದೆ. ಘಟನೆಯಲ್ಲಿ 5 ಕಾರುಗಳು ಜಖಂ ಆಗಿದ್ದು 9 ಜನರಿಗೆ ಗಾಯಗಳಾಗಿವೆ.

ನಂದಿಬೆಟ್ಟದ ಜಾಲಿ ರೈಡ್‌ ತಂದಿಟ್ಟ ಅವಾಂತರ.. ಕಾರುಗಳ ನಡುವೆ ಸರಣಿ ಅಪಘಾತ
ಏರ್​ಪೋರ್ಟ್​ ರಸ್ತೆಯ ಬ್ಯಾಟರಾಯನಪುರ ಫ್ಲೈಓವರ್‌ನಲ್ಲಿ ಸರಣಿ ಅಪಘಾತ
ಆಯೇಷಾ ಬಾನು
|

Updated on:Dec 27, 2020 | 11:01 AM

Share

ಬೆಂಗಳೂರು: ಬೆಳ್ಳಂ ಬೆಳಗ್ಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸರಣಿ ಅಪಘಾತ ಸಂಭವಿಸಿದೆ. ಏರ್​ಪೋರ್ಟ್​ ರಸ್ತೆಯ ಬ್ಯಾಟರಾಯನಪುರ ಫ್ಲೈಓವರ್‌ನಲ್ಲಿ ಸರಣಿ ಅಪಘಾತ ನಡೆದಿದ್ದು ಘಟನೆಯಲ್ಲಿ 9 ಜನರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಡಿವೈಡರ್ ಹಾರಿ ಎದುರು ಬದಿಯ ಕಾರಿಗೆ ಕಾರು ಡಿಕ್ಕಿ ಹೊಡೆದು ಅದರ ರಭಸಕ್ಕೆ 5 ಕಾರುಗಳ ನಡುವೆ ಡಿಕ್ಕಿ ಸಂಭವಿಸಿ ಭಾರಿ ಅವಘಡ ನಡೆದಿದೆ. ಘಟನೆಯಲ್ಲಿ 5 ಕಾರುಗಳು ಜಖಂ ಆಗಿದ್ದು 9 ಜನರಿಗೆ ಗಾಯಗಳಾಗಿವೆ. ಸ್ಥಳಕ್ಕೆ ಹೆಬ್ಬಾಳ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಏರ್ಪೋರ್ಟ್ ಕಡೆ ಹೋಗುವ ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.

ಅಪಘಾತಕ್ಕೆ ಕಾರಣ ಬೈಕ್ ಸವಾರರ ಜಾಲಿ ರೈಡ್‌ನಿಂದ ಈ ಸರಣಿ ಅಪಘಾತ ನಡೆದಿದೆ ಎಂದು ಹೇಳಲಾಗುತ್ತಿದೆ. ನಂದಿಬೆಟ್ಟದ ಕಡೆ ಜಾಲಿ ರೈಡ್ ಹೊರಟಿದ್ದ ಬೈಕ್ ಸವಾರರು ಕಾರನ್ನು ಓವರ್‌ಟೇಕ್ ಮಾಡಿ ಚಮಕ್ ಕೊಡಲು ಹೋಗಿದ್ದಾರೆ. ಈ ವೇಳೆ ಚಾಲಕನಿಗೆ ಭಯವಾಗಿ ನಿಯಂತ್ರಣ ತಪ್ಪಿ ಕಾರು ಡಿವೈಡರ್ ಹಾರಿ ಪಕ್ಕದ ರಸ್ತೆಗೆ ನುಗ್ಗಿದೆ. ಬಳಿಕ ಎದುರಿನಿಂದ ಬರುತ್ತಿದ್ದ ಕಾರುಗಳ ಮಧ್ಯೆ ಸರಣಿ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಮೂರು ಕಾರುಗಳು ಪಲ್ಟಿಯಾಗಿವೆ.

ಹಾಯಾಗಿದ್ದ ಸ್ನೇಹಿತರಿಗೆ ಮುಳುವಾಯ್ತು ಅಪಘಾತ.. ಅಗಲಿದ ಗೆಳೆಯನ ನೆನೆದು ಶ್ವಾನದ ಕಣ್ಣೀರು

Published On - 11:00 am, Sun, 27 December 20