ಚುನಾವಣೆ ನಿಮಿತ್ತ ಬಸ್ ಕೊಂಡೊಯ್ದಿದ್ದ ಚಾಲಕ ಡಿಪೋದ ಕೊಠಡಿಯಲ್ಲಿ ಆತ್ಮಹತ್ಯೆಗೆ ಶರಣು

ವರ್ಷದಿಂದ ಬಸ್ ಚಾಲಕರಾಗಿ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಓಂಕಾರ ಭಾಲ್ಕಿ ನೇಣಿಗೆ ಶರಣಾಗಿದ್ದಾರೆ.

ಚುನಾವಣೆ ನಿಮಿತ್ತ ಬಸ್ ಕೊಂಡೊಯ್ದಿದ್ದ ಚಾಲಕ ಡಿಪೋದ ಕೊಠಡಿಯಲ್ಲಿ ಆತ್ಮಹತ್ಯೆಗೆ ಶರಣು
ಎನ್‌ಇಕೆಆರ್‌ಟಿಸಿ ನೌಕರ ಓಂಕಾರ ಭಾಲ್ಕಿ
Follow us
ಆಯೇಷಾ ಬಾನು
|

Updated on: Dec 27, 2020 | 9:56 AM

ಬೀದರ್: ಬಸ್ ಡಿಪೋದ ಕೊಠಡಿಯಲ್ಲಿ ಚಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಎನ್‌ಇಕೆಆರ್‌ಟಿಸಿ ನೌಕರ ಓಂಕಾರ ಭಾಲ್ಕಿ ನೇಣಿಗೆ ಶರಣಾದ ವ್ಯಕ್ತಿ.

ಬೀದರ್ ತಾಲೂಕಿನ ಡೊಂಗರಗಿ ನಿವಾಸಿ ಓಂಕಾರ ಭಾಲ್ಕಿ, 8 ವರ್ಷದಿಂದ ಬಸ್ ಚಾಲಕರಾಗಿ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ಸೇವೆ ಸಲ್ಲಿಸ್ತಿದ್ರು. ಆದ್ರೆ ನಿನ್ನೆ ಏಕಾಏಕಿ ಬಸ್ ಡಿಪೋದ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಆತ್ಮಹತ್ಯೆಗೂ ಮುನ್ನ ಅಂದ್ರೆ ನಿನ್ನೆ ಸಂಜೆ ಚುನಾವಣೆ ನಿಮಿತ್ತ ಬಸ್ ಕೊಂಡೊಯ್ದಿದ್ದರು. ನಿನ್ನೆಯಿಂದ KA-32 F-926 ಬಸ್ ಕೂಡ ನಾಪತ್ತೆಯಾಗಿದೆ. ಸದ್ಯ ಈ ಆತ್ಮಹತ್ಯೆ ಸುತ್ತ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ. ಚುನಾವಣೆಗೆಂದು ಸಂಜೆ ಬಸ್ ಕೊಂಡೊಯ್ದ ಚಾಲಕ ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆಗೆ ಶರಣ.. ಎಲ್ಲಿ, ಏಕೆ?