ಸೂಪರ್ ಸ್ಟಾರ್ ರಜನಿಕಾಂತ್ ಆರೋಗ್ಯ ಸುಧಾರಣೆ, ಇಂದು ಸಂಜೆ ಡಿಸ್ಚಾರ್ಜ್
ಸೂಪರ್ ಸ್ಟಾರ್ ರಜಿನಿಕಾಂತ್ ಆರೋಗ್ಯದಲ್ಲಿ ಏರುಪೇರಾಗಿ ಶುಕ್ರವಾರ ಹೈದರಾಬಾದ್ನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಈಗ ರಜಿನಿಕಾಂತ್ ಆರೋಗ್ಯ ಸ್ಥಿರವಾಗಿದ್ದು ಇಂದು ಸಂಜೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವುದಾಗಿ ನಟ ರಜಿನಿಕಾಂತ್ ಸಹೋದರ ಸತ್ಯನಾರಾಯಣ ಮಾಹಿತಿ ನೀಡಿದ್ದಾರೆ.
ದಕ್ಷಿಣ ಭಾರತದ ಖ್ಯಾತ ನಟ, ಸೂಪರ್ ಸ್ಟಾರ್ ರಜಿನಿಕಾಂತ್ ಆರೋಗ್ಯದಲ್ಲಿ ಏರುಪೇರಾಗಿ ಶುಕ್ರವಾರ ಹೈದರಾಬಾದ್ನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಈಗ ರಜಿನಿಕಾಂತ್ ಆರೋಗ್ಯ ಸ್ಥಿರವಾಗಿದ್ದು ಇಂದು ಸಂಜೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವುದಾಗಿ ನಟ ರಜಿನಿಕಾಂತ್ ಸಹೋದರ ಸತ್ಯನಾರಾಯಣ ಮಾಹಿತಿ ನೀಡಿದ್ದಾರೆ.
ಡಿಸೆಂಬರ್ 13ರಿಂದ ಹೈದರಾಬಾದ್‌ನಲ್ಲಿದ್ದ ತಲೈವಾ, ಅಣ್ಣಾತೆ ಚಿತ್ರದ ಶೂಟಿಂಗ್‌ನಲ್ಲಿ ಭಾಗವಹಿಸಿದ್ರು. ಈ ವೇಳೆ ಚಿತ್ರತಂಡದ ಎಂಟು ಸದಸ್ಯರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಬಳಿಕ ಡಿಸೆಂಬರ್ 22ರಂದು ರಜಿನಿಕಾಂತ್‌ಗೆ ಕೊರೊನಾ ಟೆಸ್ಟ್ ನಡೆಸಲಾಗಿದ್ದು ರಿಪೋರ್ಟ್ ನೆಗೆಟಿವ್ ಅಂತಾ ಬಂದಿತ್ತು. ಆದ್ರೂ ಶುಕ್ರವಾರ ಸೆಲ್ಫ್ ಕ್ವಾರಂಟೈನ್ ಆಗಿದ್ದ ರಜಿನಿಕಾಂತ್ ರಕ್ತದೊತ್ತಡದಲ್ಲಿ ಏರುಪೇರಾಗಿ ಕೂಡಲೇ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದೈಹಿಕ ಬಳಲಿಕೆಯಿಂದ ಹೀಗಾಗಿದೆ ಹೊರತು ಬೇರೆ ಯಾವ ಸಮಸ್ಯೆ ಇಲ್ಲ ಎಂದು ವೈದ್ಯರು ಹೇಳಿದ್ರು.
ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಆಗಮಿಸಿದ ರಜಿನಿಕಾಂತ್ ಪುತ್ರಿ ಐಶ್ವರ್ಯ, ರಜಿನಿಕಾಂತ್ ಆರೋಗ್ಯದ ಕುರಿತು ನಿಗಾ ವಹಿಸಿದ್ದಾರೆ. ತಂದೆಯ ಆರೋಗ್ಯದ ಉಸ್ತುವಾರಿ ವಹಿಸಿರೋ ಅವರು, ತಂದೆಯ ಆರೋಗ್ಯ ಸ್ಥಿರವಾಗಿದ್ದು ಅಭಿಮಾನಿಗಳು, ಸ್ನೇಹಿತರು ಆಸ್ಪತ್ರೆಯ ಬಳಿ ಬರದಂತೆ ಮನವಿ ಮಾಡಿದ್ರು.
ಬ್ಯುಸಿ ಶೆಡ್ಯೂಲ್‌ನಲ್ಲೇ ಹತ್ತು ದಿನಗಳ ಶೂಟಿಂಗ್ ಮುಗಿಸಿದ್ದ ರಜಿನಿ, ಸಿನಿಮಾರಂಗದ ಜೊತೆಗೆ ರಾಜಕೀಯದಲ್ಲೂ ಹೆಚ್ಚು ಸಮಯ ತೊಡಗಿಕೊಂಡಿದ್ರು. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಇಂದು ಸಂಜೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ.
ಜೊತೆಯಲ್ಲಿದ್ದವರಿಗೆ ಕೊರೊನಾ ಪಾಸಿಟಿವ್: ನಟ ರಜನಿಕಾಂತ್ ಆಸ್ಪತ್ರೆಗೆ ದಾಖಲು