ಸಂಭಾವನೆ ವಿಚಾರ; ಕಿಂಗ್​ ಕೊಹ್ಲಿ, ಹಿಟ್​ಮ್ಯಾನ್​ ರೋಹಿತ್​ಗೆ ಶಾಕ್ ಕೊಟ್ಟ ಯಾರ್ಕರ್ ಕಿಂಗ್ ಜಸ್ಪ್ರೀತ್ ಬುಮ್ರಾ

ನಿಜ.. ಯಾರ್ಕರ್ ಕಿಂಗ್ ಬೂಮ್ರಾ ಸಂಭಾವನೆ ವಿಚಾರದಲ್ಲಿ ಕ್ಯಾಪ್ಟನ್ ಕೊಹ್ಲಿ, ರೋಹಿತ್ ಶರ್ಮಾರನ್ನು ಹಿಂದಿಕ್ಕಿದ್ದಾರೆ. ಬಿಸಿಸಿಐನ ಎ ಕಾಂಟ್ರಾಕ್ಟ್ ಪಟ್ಟಿಯಲ್ಲಿರೋ ಬೂಮ್ರಾ, ಈ ವರ್ಷ 1.38 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರೆ. ಆದ್ರೆ ಅದೇ ಕ್ಯಾಪ್ಟನ್ ಕೊಹ್ಲಿ ಬಿಸಿಸಿಐನ ಎ ಕಾಂಟ್ರಾಕ್ಟ್ ಲೀಸ್ಟ್​ನಲ್ಲಿದ್ರೂ, 1.29 ಕೋಟಿ ರೂ ಪಡೆಯಲಿದ್ದಾರೆ.

ಸಂಭಾವನೆ ವಿಚಾರ; ಕಿಂಗ್​ ಕೊಹ್ಲಿ, ಹಿಟ್​ಮ್ಯಾನ್​ ರೋಹಿತ್​ಗೆ ಶಾಕ್ ಕೊಟ್ಟ ಯಾರ್ಕರ್ ಕಿಂಗ್ ಜಸ್ಪ್ರೀತ್ ಬುಮ್ರಾ
ಕೊಹ್ಲಿ, ರೋಹಿತ್​, ಬುಮ್ರಾ
Follow us
ಪೃಥ್ವಿಶಂಕರ
|

Updated on: Dec 27, 2020 | 10:19 AM

ಪಿತೃತ್ವದ ರಜೆ ಕೋರಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾದಿಂದ ಭಾರತಕ್ಕೆ ವಾಪಸ್ ಆಗಿದ್ದಾರೆ. ಮತ್ತೊಂದೆಡೆ ಫಿಟ್ನೆಸ್ ಟೆಸ್ಟ್​​ನಲ್ಲಿ ಪಾಸಾಗಿರೋ ರೋಹಿತ್ ಶರ್ಮಾ ಆಸ್ಟ್ರೇಲಿಯಾದಲ್ಲಿ ಕ್ವಾರಂಟೈನ್​ ಆಗಿದ್ದಾರೆ. ಆದ್ರೆ ಈ ಇಬ್ಬರು ದಿಗ್ಗಜರಿಗೆ ಜಸ್ಪ್ರೀತ್ ಬುಮ್ರಾ, ಶಾಕ್ ಕೊಟ್ಟಿದ್ದಾರೆ.

ಕ್ಯಾಪ್ಟನ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಜಸ್ಪ್ರೀತ್ ಬುಮ್ರಾ ನಡುವೆ, ಯಾರು ಹೆಚ್ಚು ಹಣ ಸಂಪಾದಿಸ್ತಾರೆ ಅಂದ್ರೆ, ಚಿಕ್ಕ ಮಗುವಾದ್ರೂ ಹೇಳುತ್ತೆ. ಮೊದಲು ಕೊಹ್ಲಿ, ಆಮೇಲೆ ರೋಹಿತ್.. ನಂತರ ಬುಮ್ರಾ ಅಂತ. ಆದ್ರೀಗ ಈ ಲೆಕ್ಕಾಚಾರ ಉಲ್ಟಾ ಆಗಿದೆ. 2020ರಲ್ಲಿ ಬಿಸಿಸಿಐನಿಂದ ಜಸ್ಪ್ರೀತ್ ಬುಮ್ರಾ, ಕೊಹ್ಲಿ, ರೋಹಿತ್​ಗಿಂತ ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದಾರೆ.

ಬೂಮ್ರಾ ಈ ವರ್ಷ 1.38 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರೆ.. ನಿಜ.. ಯಾರ್ಕರ್ ಕಿಂಗ್ ಬುಮ್ರಾ ಸಂಭಾವನೆ ವಿಚಾರದಲ್ಲಿ ಕ್ಯಾಪ್ಟನ್ ಕೊಹ್ಲಿ, ರೋಹಿತ್ ಶರ್ಮಾರನ್ನು ಹಿಂದಿಕ್ಕಿದ್ದಾರೆ. ಬಿಸಿಸಿಐನ ಎ ಕಾಂಟ್ರಾಕ್ಟ್ ಪಟ್ಟಿಯಲ್ಲಿರೋ ಬುಮ್ರಾ, ಈ ವರ್ಷ 1.38 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರೆ. ಆದ್ರೆ ಅದೇ ಕ್ಯಾಪ್ಟನ್ ಕೊಹ್ಲಿ ಬಿಸಿಸಿಐನ ಎ ಕಾಂಟ್ರಾಕ್ಟ್ ಲೀಸ್ಟ್​ನಲ್ಲಿದ್ರೂ, 1.29 ಕೋಟಿ ರೂ ಪಡೆಯಲಿದ್ದಾರೆ.

ವರ್ಷದ ಕೊನೆಯಲ್ಲಿ ಕೊಹ್ಲಿಗೆ, ಬುಮ್ರಾನನ್ನ ಹಿಂದಿಕ್ಕುವ ಅವಕಾಶವಿತ್ತು. ಆದ್ರೆ ಪಿತೃತ್ವದ ರಜೆ ಪಡೆದುಕೊಂಡಿರೋ ಕೊಹ್ಲಿ, ಅಡಿಲೇಡ್ ಟೆಸ್ಟ್ ಪಂದ್ಯದ ಬಳಿಕ ಭಾರತಕ್ಕೆ ವಾಪಸ್ ಆಗಿದ್ದಾರೆ. ಹೀಗಾಗಿ ವಿರಾಟ್ ಈ ವರ್ಷಾಂತ್ಯದ ಟೆಸ್ಟ್ ಪಂದ್ಯವೊಂದನ್ನ ಮಿಸ್ ಮಾಡಿಕೊಂಡಿದ್ದಾರೆ. ಈ ವರ್ಷ ಕೊಹ್ಲಿ 3 ಟೆಸ್ಟ್ ಪಂದ್ಯ, 9 ಏಕದಿನ ಮತ್ತು 10 ಟಿಟ್ವೆಂಟಿ ಪಂದ್ಯಗಳನ್ನಾಡಿದ್ದಾರೆ. ಆದ್ರೆ ಅದೇ ಬುಮ್ರಾ ಈ ವರ್ಷ 4 ಟೆಸ್ಟ್, 9 ಏಕದಿನ ಮತ್ತು 8 ಟಿಟ್ವೆಂಟಿ ಪಂದ್ಯಗಳನ್ನಾಡಿದ್ದಾರೆ.

ಬಿಸಿಸಿಐ ಪ್ರತಿ ಟೆಸ್ಟ್ ಪಂದ್ಯಕ್ಕೂ ಒಬ್ಬ ಭಾರತೀಯ ಆಟಗಾರನಿಗೆ 15 ಲಕ್ಷ ರೂಪಾಯಿ ನೀಡಿದ್ರೆ, ಏಕದಿನ ಪಂದ್ಯಕ್ಕೆ 6 ಲಕ್ಷ ರೂಪಾಯಿ ನೀಡುತ್ತೆ. ಹಾಗೇ ಪ್ರತಿ ಟಿ20ಗೆ ಬಿಸಿಸಿಐ ಆಟಗಾರನಿಗೆ 3 ಲಕ್ಷ ರೂಪಾಯಿ ನೀಡುತ್ತೆ. ಈ ವರ್ಷ ಬುಮ್ರಾ, ಕೊಹ್ಲಿಗಿಂತ ಒಂದು ಟೆಸ್ಟ್ ಪಂದ್ಯವನ್ನ ಹೆಚ್ಚಿಗೆ ಆಡಿರೋದ್ರಿಂದಲೇ, ಬಿಸಿಸಿಐನಿಂದ ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದಾರೆ.

ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ