ನೆಲಮಂಗಲ: ಮೊಟ್ಟೆ ಒಡೆದು ಹೊರಬಂದ 11 ಹಾವಿನ ಮರಿಗಳು

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 16, 2022 | 4:02 PM

ತೋಟವೊಂದರಲ್ಲಿ ಕೇರೆ ಹಾವು ರಕ್ಷಣೆ ಮಾಡಿದ್ದ ಸ್ನೇಕ್ ನಾಗೇಂದ್ರ ಅವರು ಮೊಟ್ಟೆಗಳನ್ನು ಸಂರಕ್ಷಿಸಿದ್ದರು. ಇದೀಗ ಹನ್ನೊಂದು ಮೊಟ್ಟೆಗಳಿಂದ ಹಾವಿನ ಮರಿಗಳು ಹೊರಬಂದಿವೆ.

ನೆಲಮಂಗಲ: ಉರಗತಜ್ಞ ಸ್ನೇಕ್ ನಾಗೇಂದ್ರ ಅವರು ರಕ್ಷಣೆ ಮಾಡಿ ಸಂರಕ್ಷಿಸಿದ್ದ ಕೇರೆ ಹಾವಿನ ಮೊಟ್ಟೆ (Rat snake egg)ಗಳಿಂದ ಹನ್ನೊಂದು ಮರಿಗಳು (Rat snake cubs) ಹೊರಬಂದಿವೆ. ಬೆಂಗಳೂರು ಉತ್ತರ ತಾಲೂಕು ಕುದುರಗೆರೆಯಲ್ಲಿ ಹಾವು ಮರಿಗಳ ಜನನವಾಗಿದೆ. ತೋಟವೊಂದರಲ್ಲಿ 76 ದಿನಗಳ ಹಿಂದೆ ಕೇರೆ ಹಾವನ್ನು ರಕ್ಷಣೆ (Rat snake rescue) ಮಾಡಿ ಬೆಂಗಳೂರು ಉತ್ತರ ತಾಲೂಕು ಕುದುರಗೆರೆಯಲ್ಲಿ ಇರಿಸಿದ್ದರು. ರಕ್ಷಣೆಯ ಮರುದಿನ ಆ ಹಾವು 11 ಮೊಟ್ಟೆಗಳನ್ನು ಇಟ್ಟಿತ್ತು. ಅದರಂತೆ 75 ದಿನಗಳಿಂದ ಮೊಟ್ಟೆಗಳನ್ನು ನಿಯಮಿತ ಶೀತ ಹಾಗೂ ಉಷ್ಣದ ವಾತಾವರಣದಲ್ಲಿ ಸಂರಕ್ಷಣೆ ಮಾಡಲಾಗಿತ್ತು. ಇದೀಗ ಮೊಟ್ಟೆಯಿಂದ ಮರಿಗಳು ಹೊರಬಂದಿವೆ.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Dec 16, 2022 03:21 PM