Video: ಪ್ರೀತಿ ಮಾಡಲು ಒಪ್ಪದಿದ್ದಕ್ಕೆ ಬೆಂಗಳೂರಿನ ಹುಡುಗಿಯನ್ನು ಕೊಲೆ ಮಾಡಲು ಸ್ಕೆಚ್ ಹಾಕಿದ್ದ ಯುವಕ
ನೆಲಮಂಗಲದ ಮಲ್ಲಾಪುರದಲ್ಲಿ ಪ್ರೀತಿ ನಿರಾಕರಿಸಿದ ಯುವತಿ ಕೊಲೆಗೆ ಯತ್ನಿಸಿ ಆನ್‌ಲೈನ್ ಮೂಲಕ ಗನ್ ಖರೀದಿಸಿದ ಘಟನೆ ವರದಿಯಾಗಿದೆ. ಬಿಹಾರ ಮೂಲದ ಶುಭಂ ಎಂಬಾತ ಅರ್ಪನಾ ಚೆಟ್ಟೀರ್‌ಗೆ ನಿರಂತರವಾಗಿ ಕಿರುಕುಳ ನೀಡಿದ್ದು, ಆಕೆಯ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಲವಂತದ ಪ್ರೀತಿ ಮತ್ತು ಅದರ ದುಷ್ಪರಿಣಾಮಗಳ ಬಗ್ಗೆ ಈ ಘಟನೆ ಮತ್ತೊಮ್ಮೆ ಎಚ್ಚರಿಸಿದೆ. ಇಂತಹ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ವಿಷಯ.
ಬೆಂಗಳೂರು, ಜ.10: ಪ್ರೀತಿಯನ್ನು ಒತ್ತಾಯದಿಂದ ಮಾಡಬಾರದು. ಬಲವಂತವಾಗಿ ಮಾಡುವ ಪ್ರೀತಿಯೂ ಯಾವತ್ತೂ ಶಾಶ್ವತವಾಗಿರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಬಲವಂತವಾಗಿ ಪ್ರೀತಿ ಮಾಡುವಂತೆ ಒತ್ತಾಯಿಸಿ ಕೊಲೆ ಮಾಡಿರುವ ಪ್ರಕರಣಗಳು ಹೆಚ್ಚಾಗಿದೆ. ಇದೀಗ ಅಂತಹದೇ ಘಟನೆಯೊಂದು ನಡೆದಿದೆ. ಪ್ರೀತಿ ಮಾಡಲು ಒಪ್ಪದಿದ್ದಕ್ಕೆ ಯುವತಿಯನ್ನು ಕೊಲೆ ಮಾಡಲು ಸ್ಕೆಚ್ ಹಾಕಿರುವ ಘಟನೆ ನೆಲಮಂಗಲ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ನಡೆದಿದೆ. ಈ ಯುವಕಯುವತಿ ಕೊಲ್ಲಲು ಆನ್‌ಲೈನ್ ಮೂಲಕ ಗನ್ ಖರೀದಿಸಿದ್ದ ಎಂದು ಹೇಳಲಾಗಿದೆ. ಯುವತಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಮಲ್ಲಾಪುರದ್ದವಳು ಎಂದು ಹೇಳಲಾಗಿದೆ. ಈ ವಿಷಯ ತಿಳಿದು ಯುವತಿ 112ಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ಇನ್ನು ಯುವಕ ಗನ್ ಹಿಡಿದು ಓಡಾಡುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಪೊಲೀಸರು ಸಿಸಿಟಿವಿ ವಿಡಿಯೋವನ್ನು ನೋಡಿ ತನಿಖೆ ನಡೆಸಿದ್ದಾರೆ. ಈ ವೇಳೆ ಹಾಡಹಗಲೇ ಗನ್ ಹಿಡಿದು ಓಡಾಡಿದ ಯುವಕ ಗೊತ್ತಾಗಿದೆ. ಪ್ರೀತಿಗೆ ತಿರಸ್ಕಾರ ಮಾಡಿದಕ್ಕೆ ಯುವತಿಯನ್ನು ಕೊಲೆ ಮಾಡಲು ಸ್ಕೆಚ್ ಹಾಕಿದ್ದ ಎಂದು ಹೇಳಲಾಗಿದೆ. ಬಿಹಾರ ಮೂಲಕ ಯುವಕ ಎಂದು ಹೇಳಲಾಗಿದೆ. ಯುವತಿ ನೀಡಿದ ಮಾಹಿತಿ ಪ್ರಕಾರ ಎಲ್ಲ ಕಡೆ ಯುವಕನಿಗಾಗಿ ಹುಡುಕಾಟ ನಡೆಸಿದ್ದರೆ. ಇದೀಗ ಗನ್ ಸಮೇತ ಬಿಹಾರ ಮೂಲದ ಆರೋಪಿ ವಶಕ್ಕೆ ಪಡೆಯಲಾಗಿದೆ. ಅರ್ಪನಾ ಚೆಟ್ಟೀರ್ನ್ನು ಶುಭಂ ಎಂಬ 28 ವಯಸ್ಸಿನ ಬಿಹಾರದ ಮೂಲದ ಯುವಕ ಮೂರು ವರ್ಷದಿಂದ ಪ್ರೀತಿ ಮಾಡುತ್ತಿದ್ದ, ಆದರೆ ಈ ಪ್ರೀತಿಯನ್ನು ಅರ್ಪನಾ ಒಪ್ಪಿಲ್ಲ. ರೋಸ್ ರಾಯಲ್ ಆಸ್ಪತ್ರೆಯಲ್ಲಿ ನರ್ಸಿಂಗ್ ಮಾಡುತ್ತಿದ್ದ ಅರ್ಪನಾಗೆ ಪ್ರತಿದಿನ ಪ್ರೀತಿಸು ಎಂದು ಕಿರುಕುಳ ನೀಡುತ್ತಿದ್ದ, ಆದರೆ ಇದಕ್ಕೆ ಅರ್ಪನಾ ಒಪ್ಪಿಲ್ಲ. ಈ ಯುವಕ ಬೆಂಗಳೂರಿನಲ್ಲಿ ಪೀಜಾ ಡಿಲಿವೆರಿ ಬಾಯ್ ಕೆಲಸ ಮಾಡುತ್ತಿದ್ದ, ಪ್ರೀತಿ ಮಾಡದೇ ಇದ್ರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ, ಈ ಹಿನ್ನೆಲೆ ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದಾಳೆ. ತಕ್ಷಣ ಹುಡುಗಿಯ ದೂರಿಗೆ ಪೊಲೀಸರು ಪ್ರತಿಕ್ರಿಯೆ ನೀಡಿದ್ದಾರೆ. ಇದೀಗ ಪೊಲೀಸರ ಆತನನ್ನು ಬಂಧಿಸಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ