Neo Metro: ಮೈಸೂರಿಗೆ ಬರಲಿರುವ ನಿಯೋ ಮೆಟ್ರೋ ವಿಶೇಷತೆಗಳೇನು? ರಸ್ತೆಯ ಮೇಲೆ ಓಡಾಡುವ ರೈಲು ಹೇಗಿರಲಿದೆ?

| Updated By: Skanda

Updated on: Aug 15, 2021 | 9:53 AM

Neo Metro in Mysuru: 2 ಎಲೆಕ್ಟ್ರಿಕ್ ಟ್ರಾಲಿ ಬಸ್ ಮಾದರಿಯಲ್ಲಿರುವ ನಿಯೋ ಮೆಟ್ರೋ, 25 ಮೀಟರ್ ಉದ್ದದ ಎರಡು ಬಸ್​ಗಳ ಕೋಚ್ ಹೊಂದಿರಲಿದೆ. ನಿಯೋ ಮೆಟ್ರೋ ರೈಲುಗಳು ರಬ್ಬರ್ ಟಯರ್ ಹೊಂದಿರಲಿದ್ದು, ಹಳಿಗಳ ಮೇಲೆಯೇ ಚಲಿಸಲಿವೆ.

ರಾಜ್ಯದ ಸಾಂಸ್ಕತಿಕ ರಾಜಧಾನಿ ಮೈಸೂರು ವಿನೂತನ ಮಾದರಿಯ ರಸ್ತೆ ಕಮ್ ರೈಲು ಸಾರಿಗೆ ವ್ಯವಸ್ಥೆಯ ಪ್ರಯೋಗಕ್ಕೆ ಮುಂದಾಗಿದೆ. ನಾಸಿಕ್ ಮಾದರಿಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನಿಯೋ ಮೆಟ್ರೋ ಸೇವೆ ಜಾರಿಗೆ ತರುವ ಚಿಂತನೆ ನಡೆಸಿದೆ. ಈ ಸಂಬಂಧ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ಚರ್ಚೆ ನಡೆದಿದ್ದು, ಇದು ರೈಲು ಕಮ್ ಬಸ್ ಮಾದರಿಯ ಸಾರಿಗೆ ವ್ಯವಸ್ಥೆಯಾಗಿರಲಿದೆ. ನಿಯೋ ಮೆಟ್ರೋ ರೈಲಿನ ಬಗ್ಗೆ ಈಗಾಗಲೇ ಜನರಲ್ಲಿ ಸಾಕಷ್ಟು ಕುತೂಹಲ ಮೂಡಿದ್ದು, ಅದರ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.

ಮೈಸೂರಿನಲ್ಲಿ ನಾಸಿಕ್ ಮಾದರಿ ನಿಯೋ ಮೆಟ್ರೋಗೆ ಚಿಂತನೆ ನಡೆಸಿರುವುದು ಸದ್ಯ ಎಲ್ಲರ ಗಮನ ಸೆಳೆದಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಚರ್ಚೆಯೂ ಆಗಿದ್ದು, ನಿಯೋ ಮೆಟ್ರೋ ರೈಲು ಅನ್ನೊದೇ ಸಖತ್ ಇಂಟ್ರೆಸ್ಟಿಂಗ್ ವಿಚಾರ. ಇದು ರೈಲು ಕಮ್ ಬಸ್ ಮಾದರಿಯ ಸಾರಿಗೆ ವ್ಯವಸ್ಥೆಯಾಗಿರಲಿದ್ದು, ಈಗಾಗ್ಲೇ ನಾಸಿಕ್ ನಿಯೋ ಮೆಟ್ರೋ ರೈಲು ಯೋಜನೆಗೆ ಚಾಲನೆ ನೀಡಿದೆ. 2 ಎಲೆಕ್ಟ್ರಿಕ್ ಟ್ರಾಲಿ ಬಸ್ ಮಾದರಿಯಲ್ಲಿರುವ ನಿಯೋ ಮೆಟ್ರೋ, 25 ಮೀಟರ್ ಉದ್ದದ ಎರಡು ಬಸ್​ಗಳ ಕೋಚ್ ಹೊಂದಿರಲಿದೆ. ನಿಯೋ ಮೆಟ್ರೋ ರೈಲುಗಳು ರಬ್ಬರ್ ಟಯರ್ ಹೊಂದಿರಲಿದ್ದು, ಹಳಿಗಳ ಮೇಲೆಯೇ ಚಲಿಸಲಿವೆ. 250 ಮಂದಿ ಪ್ರಯಾಣಿಕರು ಒಮ್ಮೆ ನಿಯೋ ಮೆಟ್ರೋನಲ್ಲಿ ಸಂಚರಿಸಬಹುದು. ಇದೀಗ ಸಾಂಸ್ಕೃತಿಕ ನಗರಿ ಮೈಸೂರಿನ ನಿಯೋ ಮೆಟ್ರೋ ಯೋಜನೆ ಹೇಗಿರಲಿದೆ ಅನ್ನೋದೇ ಸದ್ಯದ ಕುತೂಹಲ.

(Neo Metro to be introduced in Mysuru know the specialities)