ಸೀರೆಯುಟ್ಟೂ ಬ್ಯಾಕ್ಫ್ಲಿಪ್ ಮಾಡಬಹುದು ಅಂತ ಮಿಶಾ ಶರ್ಮ ಸಾಬೀತು ಮಾಡಿದ್ದಾರೆ, ಅವರ ವಿಡಿಯೋ ವೈರಲ್
ಇಲ್ಲೊಬ್ಬ ಮಹಿಳೆ ಸೀರೆಯುಟ್ಟು ಬ್ಯಾಕ್ಫ್ಲಿಪ್ ಮಾಡಿದ್ದಾರೆ. ಸೀರೆಯುಟ್ಟರೆ ಕೆಲಸ ಮಾಡಲಿ ತೊಂದರೆಯಾಗುತ್ತದೆ ಎಂದು ಹೇಳುವವರಿ ಈ ವಿಡಿಯೋವನ್ನು ಬಾರಿ ಬಾರಿ ಹಲವಾರು ವೀಕ್ಷಿಸಬೇಕು. ಆಕೆಯ ದಿಟ್ಟತನ, ಆತ್ಮವಿಶ್ವಾಸ ಮತ್ತು ಧೈರ್ಯ ಮೆಚ್ಚದಿರಲು ಸಾಧ್ಯವೇ ಇಲ್ಲ
‘ಹೆಣ್ಮಕ್ಳಿಗೆ ಶೋಭೆ ನೀಡೋದೇ ಸೀರೆ ಕಣ್ರೋ,’ ಅಂತ ಎಲ್ಲರ ಮನೆಗಳಲ್ಲೂ ಅಜ್ಜ-ಅಜ್ಜಿಂದಿರು ಹೇಳುತ್ತಾರೆ. ಅವರು ಹೇಳೋದು ನಿಜವೇ ಆದರೂ ಈಗಿನ ಮೆಜಾರಿಟಿ ಮಹಿಳೆಯರಿಗೆ ಸೀರೆ ಉಡೋದು ಇಷ್ಟವಾಗಲ್ಲ. ಹಾಗಂತ ಅವರು ಸೀರೆಯನ್ನು ದ್ವೇಷಿಸುವವರೇನೂ ಅಲ್ಲ. ಕೆಲಸ ಮಾಡುವಾಗ ಸೀರೆ ಕಂಫರ್ಟೇಬಲ್ ಅನ್ನೋದು ಅವರ ಅಭಿಪ್ರಾಯ. ಆದರೆ ಸೀರೆಯೇ ನನ್ನ ಅತ್ಯುತ್ತಮ ಉಡುಗೆ ಅಂತ ಹೇಳುವ ಅನೇಕ ಮಹಿಳೆಯರೂ ಇದ್ದಾರೆ. ಬಿಡಿ, ನಾವಿಲ್ಲಿ ಸೀರೆಯುಟ್ಟರೆ ಹೇಗೆ, ಅದರ ಬದಲಿಗೆ ಬೇರೆ ಉಡುಪು ಧರಿಸಿದರೆ ಹೇಗೆ ಅಂತ ಚರ್ಚೆ ಇಟ್ಟುಕೊಂಡಿಲ್ಲ.
ವಿಷಯವೇನೆಂದರೆ, ಇಲ್ಲೊಬ್ಬ ಮಹಿಳೆ ಸೀರೆಯುಟ್ಟು ಬ್ಯಾಕ್ಫ್ಲಿಪ್ ಮಾಡಿದ್ದಾರೆ. ಸೀರೆಯುಟ್ಟರೆ ಕೆಲಸ ಮಾಡಲಿ ತೊಂದರೆಯಾಗುತ್ತದೆ ಎಂದು ಹೇಳುವವರಿ ಈ ವಿಡಿಯೋವನ್ನು ಬಾರಿ ಬಾರಿ ಹಲವಾರು ವೀಕ್ಷಿಸಬೇಕು. ಆಕೆಯ ದಿಟ್ಟತನ, ಆತ್ಮವಿಶ್ವಾಸ ಮತ್ತು ಧೈರ್ಯ ಮೆಚ್ಚದಿರಲು ಸಾಧ್ಯವೇ ಇಲ್ಲ. ಅದೆಷ್ಟು ಸಲೀಸಾಗಿ ಆಕೆ ಬ್ಯಾಕ್ಫ್ಲಿಪ್ ಮಾಡುತ್ತಾರೆ ಅನ್ನೋದನ್ನ ಗಮನಿಸಿ. ನಂಬಲಸದಳ! ಜಿಮ್ನಾಸ್ಟಿಕ್ಸ್ ತರಬೇತಿ ಆಕೆಗೆ ಒದಗಿಸಿದರೆ ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ಪದಕ ಗ್ಯಾರಂಟಿ ಅಂತ ನೀವು ಅಂದುಕೊಳ್ಳುತ್ತಿರಬಹುದು.
ಆದರೆ, ನಿಜಕ್ಕೂ ಆಕೆ ಒಬ್ಬ ತರಬೇತಿ ಹೊಂದಿರುವ ಜಿಮ್ನಾಸ್ಟ್ ಆಗಿದ್ದಾರೆ, ಹೆಸರು ಮಿಶಾ ಶರ್ಮ. ಕೆಂಪು ಸೀರೆಯುಟ್ಟು ಮಿಶಾ ಅವರು ಹೀಗೆ ಬ್ಯಾಕ್ಫ್ಲಿಪ್ ಮಾಡುತ್ತಿರುವಾಗ ಹಿನ್ನೆಲೆಯಲ್ಲಿ ‘ರಂಗಿಲೋ ಮಾರ್ಹೋ ಢೋಲ್ನಾ’ ಹಾಡು ಕೇಳಿಸುತ್ತಿದೆ. ವ್ಹಾವ್!
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ನೋಡುತ್ತಿರುವ ಜನ ಅವಾಕ್ಕಾಗಿ ಪದೇಪದೆ ನೋಡುತ್ತಿದ್ದಾರೆ.
ಇದನ್ನೂ ಓದಿ: Shocking Video: ಅಡ್ಡ ಹಾಕಿದ ಪೊಲೀಸನ್ನೇ ರಸ್ತೆಯಲ್ಲಿ ಎಳೆದುಕೊಂಡು ಹೋದ ಕಾರು ಚಾಲಕ; ಶಾಕಿಂಗ್ ವಿಡಿಯೋ ವೈರಲ್