ಸೇನೆ ಸೇರಬಯಸುವ ಇಂಡೋನೇಷ್ಯನ್ ಮಹಿಳೆಯರು ಇನ್ನು ಮೇಲೆ ಕನ್ಯತ್ವ ಪರೀಕ್ಷೆಗೊಳಗಾಗಬೇಕಿಲ್ಲ!

ಸೇನೆ ಸೇರಬಯಸುವ ಇಂಡೋನೇಷ್ಯನ್ ಮಹಿಳೆಯರು ಇನ್ನು ಮೇಲೆ ಕನ್ಯತ್ವ ಪರೀಕ್ಷೆಗೊಳಗಾಗಬೇಕಿಲ್ಲ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 14, 2021 | 8:02 PM

ಮಿಲಿಟರಿ ಸೇವೆಗಳಿಗೆ ಸೇರಬಯಸುವ ಯುವತಿಯರ ನೈತಿಕತೆಯನ್ನು ಪರೀಕ್ಷಿಸಲು ‘ಎರಡು-ಬೆರಳು’ ತೂರುವಿಕೆ ಟೆಸ್ಟ್ ನಡೆಸಲಾಗುತ್ತಿತ್ತು. ಕನ್ಯಾ ಪೊರೆ ಹರಿದ ಯುವತಿಯರಿಗೆ ಸೇನೆ ಸೇರುವ ಅವಕಾಶವಿರುತ್ತಿರಲಿಲ್ಲ. ಇದು ಅತ್ಯಂತ ಹೀನ ಮತ್ತು ಕ್ರೂರ ಟೆಸ್ಟ್ ಎಂದು ಮಾನವ ಹಕ್ಕುಗಳ ಸಂಘಟನೆಗಳು ಹೇಳಿದ್ದವು.

ಇಂಡೋನೇಷ್ಯಾದಲ್ಲಿ ಸೇನೆಗೆ ಸೇರಬಯಸುವ ಮಹಿಳೆಯರಿಗೆ ಕಡ್ಡಾಯವಾಗಿದ್ದ ಕನ್ಯತ್ವ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ ಎಂದು ಅಲ್ಲಿನ ಸೇನಾಪಡೆ ಮುಖ್ಯಸ್ಥ ಹೇಳಿದ್ದಾರೆ. ಸುದೀರ್ಘ ಕಾಲದಿಂದ ಮಾನವ ಹಕ್ಕುಗಳ ಸಂಘಟನೆಗಳು ಈ ಅನಿಷ್ಟ ಪದ್ಧತಿಯನ್ನು ವಿರೋಧಿಸುತ್ತಿದ್ದವು. ಸೇನೆಯ ನಿರ್ಧಾರ ಇಂಡೋನೇಷ್ಯಾದ ಯುವತಿಯರಲ್ಲಿ ನಿರಾಳ ಭಾವ ಮೂಡಿಸಿದೆ.

ಬುಧವಾರದಂದು ಹೇಳಿಕೆಯೊಂದನ್ನು ನೀಡಿರುವ ಸೇನಾ ಮುಖ್ಯಸ್ಥ ಅಂದಿಕಾ ಪರ್ಕಾಸಾ ಅವರು, ‘ಯುವತಿಯರ ಕನ್ಯಾ ಪೊರೆ ಅಭಾದಿತವಾಗಿದೆಯೇ, ಸ್ವಲ್ಪ ಭಾಗ ಮಾತ್ರ ಹರಿದಿದೆಯೇ ಇಲ್ಲವೇ ಸಂಪೂರ್ಣವಾಗಿ ಹರಿದು ಹೋಗಿದೆಯೇ ಅಂತ ಪರೀಕ್ಷಿಸಲು ಟೆಸ್ಟ್ ನಡೆಸಲಾಗುತಿತ್ತು. ಆದರೆ, ಆ ಟೆಸ್ಟ್​ಗೆ ನಾವೀಗ ತಿಲಾಂಜಲಿ ಇಟ್ಟಿದ್ದೇವೆ,’ ಎಂದು ಹೇಳಿದ್ದಾರೆ.

ಮಿಲಿಟರಿ ಸೇವೆಗಳಿಗೆ ಸೇರಬಯಸುವ ಯುವತಿಯರ ನೈತಿಕತೆಯನ್ನು ಪರೀಕ್ಷಿಸಲು ‘ಎರಡು-ಬೆರಳು’ ತೂರುವಿಕೆ ಟೆಸ್ಟ್ ನಡೆಸಲಾಗುತ್ತಿತ್ತು. ಕನ್ಯಾ ಪೊರೆ ಹರಿದ ಯುವತಿಯರಿಗೆ ಸೇನೆ ಸೇರುವ ಅವಕಾಶವಿರುತ್ತಿರಲಿಲ್ಲ. ಇದು ಅತ್ಯಂತ ಹೀನ ಮತ್ತು ಕ್ರೂರ ಟೆಸ್ಟ್ ಎಂದು ಮಾನವ ಹಕ್ಕುಗಳ ಸಂಘಟನೆಗಳು ಹೇಳಿದ್ದವು. ಈ ಅನಿಷ್ಟ ಪದ್ದತಿಯ ಬಗ್ಗೆ ತನಿಖೆ ನಡೆಸಿದ್ದ ಸಂಘಟನೆಗಳು ಅದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಅಂತ ಹೇಳಿದ್ದವು.

ವಿಶ್ವ ಆರೋಗ್ಯ ಸಂಸ್ಥೆಯೂ ಇದನ್ನು ಖಂಡಿಸಿ ಅಂಥ ಟೆಸ್ಟ್ ವೈಜ್ಞಾನಿಕವಾಗಿ ಮಾನ್ಯ ಅಲ್ಲ ಎಂದು ಹೇಳಿತ್ತು. ಮಹಿಳೆ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗಿದ್ದಳೇ ಇಲ್ಲವೇ ಎನ್ನುವುದನ್ನು ನಿರ್ಣಯಿಸಲು ಕನ್ಯಾಪೊರೆ ಸೂಚಕವಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು.

ಇದನ್ನೂ ಓದಿ: ಕೆಲಸ ಮಾಡಲು ಬಿಡದೆ ಜಾತಿನಿಂದನೆ ಮಾಡಿದ ಆರೋಪ; ವಿಷ ಸೇವಿಸುವ ವಿಡಿಯೋ ಮಾಡಿ ಬಿಲ್ ಕಲೆಕ್ಟರ್ ಕಣ್ಣೀರು