ಚಿಕನ್ ದಮ್ ಬಿರಿಯಾನಿ; ಸರಳ ವಿಧಾನದಲ್ಲಿ ಮಾಡಿ ಸವಿಯಿರಿ

ಚಿಕನ್ ದಮ್ ಬಿರಿಯಾನಿ; ಸರಳ ವಿಧಾನದಲ್ಲಿ ಮಾಡಿ ಸವಿಯಿರಿ

TV9 Web
| Updated By: preethi shettigar

Updated on: Aug 15, 2021 | 10:04 AM

ಚಿಕನ್ ಲಿವರ್ ಫ್ರೈ, ಕಬಾಬ್, ಸುಕ್ಕ, ಬಿರಿಯಾನಿ, ಹೀಗೆ ಹಲವು ಬಗೆ ಇದೆ. ಹೀಗಾಗಿ ಚಿಕನ್ ದಮ್ ​ಬಿರಿಯಾನಿ ಮಾಡುವುದು ಹೇಗೆ ಎಂದು ಇಂದು ತಿಳಿದುಕೊಳ್ಳೋಣ.

ನಾನ್​ ವೆಜ್​ ಪ್ರಿಯರಿಗೆ ದಿನಕ್ಕೆ ಒಂದಿಲ್ಲಾ ಒಂದು ಹೊಸ ತರಹದ ಅಡುಗೆಯನ್ನು ಸವಿಯುವ ಬಯಕೆ ಇರುತ್ತದೆ. ಅದರಲ್ಲೂ ಚಿಕನ್ ಇಷ್ಟಪಡುವವರು ಹೆಚ್ಚು ವೈವಿಧ್ಯತೆಯನ್ನು ಇಷ್ಟಪಡುತ್ತಾರೆ. ಚಿಕನ್ ಲಿವರ್ ಫ್ರೈ, ಕಬಾಬ್, ಸುಕ್ಕ, ಬಿರಿಯಾನಿ, ಹೀಗೆ ಹಲವು ಬಗೆ ಇದೆ. ಹೀಗಾಗಿ ಚಿಕನ್ ದಮ್ ​ಬಿರಿಯಾನಿ ಮಾಡುವುದು ಹೇಗೆ ಎಂದು ಇಂದು ತಿಳಿದುಕೊಳ್ಳೋಣ.

ಚಿಕನ್ ದಮ್ ಬಿರಿಯಾನಿ ಮಾಡಲು ಬೇಕಾಗುವ ಸಾಮಾಗ್ರಿಗಳು ಹಸಿ ಮೆಣಸಿನಕಾಯಿ, ಕೊಬ್ಬರಿ, ಶುಂಠಿ, ಚಕ್ಕೆ, ಲವಂಗ, ಏಲಕ್ಕಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು, ಈರುಳ್ಳಿ, ಟೊಮೆಟೋ, ಪಲಾವ್ ಎಲೆ, ನಿಂಬೆ ಹಣ್ಣು, ಬಿರಿಯಾನಿ ಪೌಡರ್, ತುಪ್ಪ, ಮೊಸರು, ದನಿಯಾ ಪುಡಿ, ಉಪ್ಪು, ಅರಿಶಿಣ ಪುಡಿ, ಚಿಕನ್.

ಚಿಕನ್ ದಮ್ ​ಬಿರಿಯಾನಿ ಮಾಡುವ ವಿಧಾನ
ಮೊದಲು ಒಂದು ಮಿಕ್ಸಿ ಜಾರಿಗೆ ಹಸಿ ಮೆಣಸಿನಕಾಯಿ, ಕೊಬ್ಬರಿ, ಶುಂಠಿ, ಚಕ್ಕೆ, ಲವಂಗ, ಏಲಕ್ಕಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು ಹಾಕಿ ರುಬ್ಬಿಕೊಳ್ಳಿ. ಬಳಿಕ ಒಂದು ಪಾತ್ರೆಗೆ ಅಡುಗೆ ಎಣ್ಣೆ, ತುಪ್ಪ, ಪಲಾವ್ ಎಲೆ, ಸೋಂಪು, ಲವಂಗ, ಏಲಕ್ಕಿ, ಚಕ್ಕೆ, ಈರುಳ್ಳಿ, ಹಸಿ ಮೆಣಸಿನಕಾಯಿ, ಟೊಮೆಟೋ, ಪುದೀನಾ ಸೊಪ್ಪು, ಮೆಂತೆ ಸೊಪ್ಪು, ಚಿಕನ್, ಅರಿಶಿಣ ಪುಡಿ, ದನಿಯಾ ಪುಡಿ, ಬಿರಿಯಾನಿ ಪೌಡರ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಮೊಸರು, ರುಬ್ಬಿದ ಮಿಶ್ರಣ, ಉಪ್ಪು, ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ನೆನೆಸಿದ ಅಕ್ಕಿ, ನೀರು ಹಾಕಿ ಬೇಯಲು ಬಿಡಿ. ಬಳಿಕ ದಮ್​ ಕಟ್ಟಲು ಮುಚ್ಚಿಡಿ. ಈಗ ರುಚಿಕರವಾದ ಚಿಕನ್​ ದಮ್​ ಬಿರಿಯಾನಿ ಸವಿಯಲು ಸಿದ್ದ.

ಇದನ್ನೂ ಓದಿ:

ಕೋಲಾರ ಸ್ಪೆಷಲ್ ಬಿರಿಯಾನಿ; ನಾನ್​ ವೆಜ್​ ಪ್ರಿಯರು ಇಂದೇ ಮಾಡಿ ಸವಿಯಿರಿ

Chicken ghee roast: ಚಿಕನ್ ಘೀ ರೋಸ್ಟ್; ನಾನ್​ ವೆಜ್​ ಪ್ರಿಯರು ಒಮ್ಮೆ ಮಾಡಿ ಸವಿಯಿರಿ