NED vs BAN, ICC World Cup: ಸಪೋರ್ಟ್ ಮಾಡಿದ ಭಾರತೀಯ ಫ್ಯಾನ್ಸ್ಗೆ ನೆದರ್ಲೆಂಡ್ಸ್ ನಾಯಕ ಏನು ಮಾಡಿದ್ರು ನೋಡಿ
Netherlands’ Captain Scott Edwards With Fans: ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೆ ಅಭಿಮಾನಿಗಳ ಸಂಪೂರ್ಣ ಬೆಂಬಲ ನೆದರ್ಲೆಂಡ್ಸ್ ತಂಡಕ್ಕೆ ಸಿಕ್ಕಿತು. ಇದನ್ನು ಮರೆಯದ ನೆದರ್ಲೆಂಡ್ಸ್ ನಾಯಕ ಸ್ಕಾಟ್ ಎಡ್ವರ್ಡ್ಸ್ ಪಂದ್ಯ ಮುಗಿದ ಬಳಿಕ ಅಭಿಮಾನಿಗಳನ್ನು ಭೇಟಿಯಾಗಿ ಧನ್ಯವಾದಗಳನ್ನು ಅರ್ಪಿಸಿದರು.
ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ನೆದರ್ಲೆಂಡ್ಸ್ (Netherlands) ತಂಡ ನೀಡುತ್ತಿರುವ ಪ್ರದರ್ಶನಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಕೇಳಿಬರುತ್ತಿದೆ. ಶನಿವಾರ ಬಾಂಗ್ಲಾದೇಶ ವಿರುದ್ಧ ನಡೆದ ವಿಶ್ವಕಪ್ನ 28ನೇ ಪಂದ್ಯದಲ್ಲೂ ಡಚ್ಚರು ಅದ್ಭುತ ಜಯ ಸಾಧಿಸಿದರು. ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಈ ಪಂದ್ಯಕ್ಕೆ ಅಭಿಮಾನಿಗಳ ಹೆಚ್ಚಿನ ಬೆಂಬಲ ನೆದರ್ಲೆಂಡ್ಸ್ ತಂಡಕ್ಕೆ ಸಿಕ್ಕಿತು. ಇದನ್ನು ಮರೆಯದ ನೆದರ್ಲೆಂಡ್ಸ್ ನಾಯಕ ಸ್ಕಾಟ್ ಎಡ್ವರ್ಡ್ಸ್ ಪಂದ್ಯ ಮುಗಿದ ಬಳಿಕ ಅಭಿಮಾನಿಗಳನ್ನು ಭೇಟಿಯಾಗಿ ಧನ್ಯವಾದಗಳನ್ನು ಅರ್ಪಿಸಿದರು. ಇವರ ಜೊತೆಗೆ ಲೋಗನ್ ವ್ಯಾನ್ ಬೀಕ್ ಕೂಡ ಇದ್ದರು. ಇವರು ನೆದರ್ಲೆಂಡ್ಸ್ ಗೆಲುವನ್ನು ಸಂಭ್ರಮಿಸುತ್ತಿದ್ದ ಅಭಿಮಾನಿಗಳನ್ನು ಭೇಟಿಯಾಗಿ, ಅವರ ಕೈ ಕುಲುಕಿದರು. ಈ ಪಂದ್ಯದಲ್ಲಿ ಗೆಲ್ಲಲು 230 ರನ್‌ಗಳ ಗುರಿ ಬೆನ್ನತ್ತಿದ ಬಾಂಗ್ಲಾದೇಶ 142 ರನ್‌ಗಳಿಗೆ ಆಲೌಟ್ ಆಯಿತು. ನೆದರ್ಲೆಂಡ್ಸ್ 87 ರನ್‌ಗಳ ಭರ್ಜರಿ ಜಯ ಸಾಧಿಸಿತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos